ಬೆಂಗಳೂರು: ತನ್ನನ್ನು ವಿವಾಹವಾಗಲು ಒತ್ತಾಯಿಸಿದ ಲಿವ್ ಇನ್ ಟುಗೆದರ್ ಸಂಗಾತಿಗೆ ಗ್ಯಾಂಗ್ ರೇಪ್ ಮಾಡುತ್ತೇನೆಂದು ಬೆದರಿಕೆ ಹಾಕಿದ್ದ ವ್ಯಾಪಾರಿ ವಿರುದ್ಧ ಬೆಂಗಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿ, ಕ್ಲೆಮೆಂಟ್ ಮೆಂಡೋನಾ೯ಹೆಸರು ಬದಲಿಸಲಾಗಿದೆ) 31 ವರ್ಷ ವಯಸ್ಸಿನ ಮಹಿಳೆಯೊಂದಿಗೆ ಅಪಾರೆಟ್ ಮೆಂಟ್ ನಲ್ಲಿ ವಾಸವಿದ್ದರು.ಆರೋಪಿ ತಾನು ತನ್ನ ಪತ್ನ್ನಿಗೆ ವಿಚ್ಚೇದನ ನೀಡಿದ ಬಳಿಕ ನಿನ್ನನ್ನೇ ವಿವಾಹವಾಗುವುದಾಗಿ ಹೇಳಿ ಲಿವ್ವ್ ಇನ್ ರಿಲೇಷನ್ ಸ್ಶಿಪ್ ಇರಿಸಿಕೊಂಡಿದ್ದನೆನ್ನಲಾಗಿದ್ದು ಯುವತಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದನು. ಹಾಗೆಯೇ ಇತೀಚೆಗೆ ಯುವತಿ ತನ್ನನ್ನು ಮದುವೆಯಾಗುವುದಕ್ಕೆ ಕೇಳಿದಾಗಲೂ ಕ್ಲೆಮೆಂಟ್ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸುವುದಾಗಿ ಬೆದರಿಕೆ ಹಾಕಿದ್ದನು. ಈ ಹಿನ್ನೆಲೆಯಲ್ಲಿ ಯುವತಿಯು ಆರೋಪಿ ವಿರುದ್ಧ ಬೆಂಗಳೂರಿನ ಆಡುಗೋಡಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾಳೆ.
"ಆಕೆಯ ದೂರಿನಲ್ಲಿ, ಅವಳು ಮೆಂಡೋನಾ ಜೊತೆ 2015ರಿಂದ ಸಂಪರ್ಕದಲ್ಲಿದ್ದಳು, ಹೊಸೂರು ರಸ್ತೆಯ ಅಪಾರ್ಟ್ ಮೆಂಟ್ ನಲ್ಲಿ ಲ್ಲಿ ಆಗಸ್ಟ್ 2017ರಿಂದ ಇಬ್ಬರೂ ಒಟ್ಟಾಗಿ ವಾಸಿಸುತ್ತಿದ್ದರು.ಆ ಸಮಯದಲ್ಲಿ ಯುವತಿ ಗರ್ಭಿಣಿಯಾಗಿದ್ದಳು" ಎಂದು ಪೋಲೀಸರು ವಿವರಿಸಿದ್ದಾರೆ.
ಏತನ್ಮಧ್ಯೆ, ಮೆಂಡೋನಾ ಗರ್ಭಪಾತಕ್ಕಾಗಿ ಯುವತಿಯನ್ನು ಪೀಡಿಸುತ್ತಿದ್ದನೆನ್ನಲಾಗಿದ್ದು ಅದರ ಬಗ್ಗೆ ಯುವತಿ ಕುಟುಂಬಕ್ಕೆ ಮಾಹಿತಿ ನೀಡಿದ್ದಳು. ಪತ್ನಿಯೊಡನೆ ವಿಚ್ಚೇದನ ಪಡೆದು ತಾನು ನಿನ್ನನ್ನು ಮದುವೆಯಾಗುವುದಾಗಿ ಯುವತಿಗೆ ನಂಬಿಸಿದ್ದ ಆರೋಪಿಯ ಹಳೆ ಗೆಳತಿಯೊಬ್ಬಳು ಯುವತಿಗೆ ಸಿಕ್ಕು ಆತನಿಂದ ದೂರವಿರುವಂತೆ ಹೇಳಿದ್ದಲ್ಲದೆ ಅವಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಳೆ.
ಇದಾಗಿ ಮತ್ತೆ ಮೆಂಡೋನಾ ತನ್ನ ಹಳೆ ಗೆಳತಿಗೆ ಈ ವಿಚಾರವಾಗಿ ಮಧ್ಯೆ ಪ್ರವೇಶಿಸದಂತೆ ಕೇಳಿಕೊಂಡಿದ್ದಾನೆ.ಈಕೆಯನ್ನು ಜನವರಿ 11ರಂದು ಮೆಂಡೋನಾ ತನ್ನನ್ನು ವಿವಾಹವಾಗಬೇಕೆಂದು ಯುವತಿ ಒತ್ತಾಯಿಸಿದ್ದಾಳೆ. ಆದರೆ ಆರೋಪಿ ತಾನೆಂದೂ ನಿನ್ನನ್ನು ವಿವಾಹವಾಗುವುದಿಲ್ಲ, ನೀನೇನಾದರೂ ಆಗ್ರಹಿಸಿದ್ದಾದರೆ ಗ್ಯಾಂಗ್ ರೇಪ್ ಮಾಡಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಸಧ್ಯ ದೂರು ದಾಖಲಿಸಿಕೊಇಂಡಿರುವ ಪೋಲೀಸರು ಆರೋಪಿಯನ್ನು ಪತ್ತೆಹಚ್ಚಲು ಬಲೆ ಬೀಶಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics