ರಾಜ್ಯ

ಐಎಂಎ ವಂಚನೆ: ಚಿನ್ನ ಸಂಸ್ಕರಣಾ ಘಟಕದ ಮೇಲೆ ದಾಳಿ, 90 ಲಕ್ಷ ರೂ.ಮೌಲ್ಯದ ಚಿನ್ನದ ಬಿಸ್ಕೆಟ್ ವಶ

Raghavendra Adiga
ಬೆಂಗಳೂರು: .ಐ.ಎಂ.ಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ, ತನಿಖೆ ತೀವ್ರಗೊಳಿಸಿದ್ದು, ಐಎಂಎ ಒಡೆತನದ ಚಿನ್ನ ಮತ್ತು ಸಿಲ್ವರ್ ಸಂಸ್ಕರಣಾ ಕೇಂದ್ರದ ಮೇಲೆ ದಾಳಿ ನಡೆಸಿ 18.61 ಲಕ್ಷ ರೂ. ನಗದು ಸೇರಿದಂತೆ 90 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ವಶಪಡಿಸಿಕೊಂಡಿದೆ.
ತನಿಖೆಯ ವೇಳೆ ದೊರೆತ ಮಾಹಿತಿ ಮೇರೆಗೆ ಶಿವಾಜಿನಗರ ಸೆಪ್ಪಿಂಗ್ ರಸ್ತೆಯಲ್ಲಿರುವ ದತ್ತ ಚಿನ್ನ ಮತ್ತು ಬೆಳ್ಳಿ ಸಂಸ್ಕರಣಾ ಕೇಂದ್ರದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ 71.39 ಲಕ್ಷ ರೂ ಮೌಲ್ಯದ 2,325 ಗ್ರಾಂ ಚಿನ್ನದ ಬಿಸ್ಕೇಟ್‍ಗಳು ಹಾಗೂ 18,61,650 ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಐಟಿ ತಿಳಿಸಿದೆ.
ಐ.ಎಂ.ಎ ಪ್ರಕರಣದ ವಿಶೇಷ ತನಿಖಾ ತಂಡದ ಮುಖ್ಯಸ್ಥ, ಡಿಐಜಿ ಬಿ.ಆರ್.ರವಿಕಾಂತೇಗೌಡ ಮತ್ತು ಅಪರಾಧ ವಿಭಾಗದ ಡಿಸಿಪಿ ಗಿರೀಶ್.ಎಸ್ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಕೆ.ರವಿಶಂಕರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
SCROLL FOR NEXT