ರಾಜ್ಯ

ಮತ್ತೊಂದು ಪ್ರವಾಸಿ ತಾಣ: ಮೈಸೂರು ಒಡೆಯರ ಸಮಾಧಿಗಳಿರುವ ಮಧುವನ!

Shilpa D
ಮೈಸೂರು: ಎಲ್ಲವೂ ಅಂದುಕೊಂಡಂತೆ ಆದರೆ ಮೈಸೂರು ರಾಜ ವಂಶಸ್ಥರ ಸಮಾಧಿಗಳಿರುವ ಮಧುವನ ಶೀಘ್ರದಲ್ಲೇ ಪ್ರವಾಸಿ ತಾಣವಾಗಿ ಬದಲಾಗಲಿದೆ, ಮೈಸೂರು ಆಳಿದ ರಾಜ ಮನೆತನ ಒಡೆಯರ್ ವಂಶದಲ್ಲಿ ವಿಧಿವಶರಾಗಿರುವ ರಾಜರುಗಳ ಸಮಾಧಿ ಮತ್ತೊಂದು ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.
ಮಂಗಳವಾರ ಮಧುವನದಲ್ಲಿ ಬೆಳೆದಿರುವ ಪೊದೆ,ಗಿಡ ಗಂಟಿಗಳನ್ನು  ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ, ಸುಮಾರು ಐದು ಎಕರೆ ಜಾಗದಲ್ಲಿರುವ ಮಧುವನವನ್ನು ಖಾಸಾ ಬೃಂದಾವನ ಎಂದೇ ಪ್ರಸಿದ್ಧಿಯಾಗಿತ್ತು. ಮೈಸೂರು ಒಡೆಯರು ಮತ್ತವರ ಮನೆತನದ ಸಮಾಧಿಗಳಿವೆ.
ರಣಧೀರ ಕಂಠೀರವ ನರಸಿಂಹ ರಾಜ ಒಡೆಯರ್, 9ನೇ ಚಾಮರಾಜ ಒಡೆಯರ್ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಹಲವು ರಾಜರ ಸಮಾಧಿಗಳಿವೆ,
ನಾಲ್ವಡಿ ಒಡೆಯರ್ ಅವರ ವಿಧವೆ ತಾಯಿ ಕೆಂಪನಂಜಮ್ಮಣ್ಣಿ ಹಾಗೂ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಇಲ್ಲಿಯೇ ಸಮಾಧಿ ಮಾಡಲಾಗಿದೆ.
ಶ್ರೀಕಂಠದತ್ತ ಒಡೆಯರ್ ಟ್ರಸ್ಟ್ ಅಡಿಯಲ್ಲಿ  ಮಧುವನ ಸ್ವಚ್ಛತಾ ಕಾರ್ಯ ಆರಂಭಿಸಲಾಗಿದ್ದು,  ಪ್ರವಾಸಿಗರ ಹಿತದೃಷ್ಠಿಯಿಂದ ರಾಣಿ ಪ್ರಮೋದಾ ದೇವಿ ಮಧುವನಕ್ಕೆ ಹೊಸ ಲುಕ್ ಕೊಡಲು ನಿರ್ದರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 
SCROLL FOR NEXT