ರಾಜ್ಯ

15ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತಕ್ಕೆ ಪ್ರಾತಿನಿಧಿತ್ವ ಇಲ್ಲ: ಕಾಂಗ್ರೆಸ್ ಅಸಮಾಧಾನ

Sumana Upadhyaya
ಬೆಂಗಳೂರು: 15ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಂದ ಪ್ರತಿನಿಧಿಗಳು ಇಲ್ಲದಿರುವುದಕ್ಕೆ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ ನಂತರ ಇದೀಗ ಕಾಂಗ್ರೆಸ್ ಪಕ್ಷ ಕೂಡ ಅದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದೆ.
ಸ್ಥಳೀಯ ಭಾಷೆ ಮತ್ತು ಪ್ರಾತಿನಿಧಿತ್ವವನ್ನು ಎತ್ತಿಹಿಡಿದು ಕರ್ನಾಟಕದ ಕಾಂಗ್ರೆಸ್ ಘಟಕ ಬಿಜೆಪಿ ವಿರುದ್ಧ ಟೀಕಿಸಲು ವೇದಿಕೆಯನ್ನು ಸರಿಯಾಗಿ ಬಳಸಿಕೊಂಡಿದೆ. ದಕ್ಷಿಣ ಭಾರತಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಗೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳ ಕಾಂಗ್ರೆಸ್ ಘಟಕಗಳು ಸಹ ಬೆಂಬಲ ಸೂಚಿಸಿವೆ.
ಬಿಜೆಪಿ ನೇತೃತ್ವದ ಭಾರತ ಸರ್ಕಾರ 15ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತಕ್ಕೆ ಪ್ರಾತಿನಿಧಿತ್ವ ನೀಡದೆ ಅವಮಾನ ಮಾಡಿದೆ. ಮೋದಿ ಸರ್ಕಾರ ದಕ್ಷಿಣ ಭಾರತವನ್ನು ಕಡೆಗಣಿಸುತ್ತಿದ್ದು ಈ ತಾರತಮ್ಯವನ್ನು ಕೊನೆಗಾಣಿಸಬೇಕು ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ.
15ನೇ ಹಣಕಾಸು ಆಯೋಗಕ್ಕೆ ಹೊರಡಿಸಿದ್ದ ಉಲ್ಲೇಖಗಳನ್ನು ವಿರೋಧಿಸುವಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರತಿನಿಧಿಗಳಿಗೆ ಕರೆದಿದ್ದ ಸಭೆಯ ಆತಿಥ್ಯವನ್ನು ಕಳೆದ ವರ್ಷ ಕೇರಳ ರಾಜ್ಯ ವಹಿಸಿಕೊಂಡಿತ್ತು.ಮೊನ್ನೆಯ ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಕಾಂಗ್ರೆಸ್ ದಕ್ಷಿಣ ಭಾರತದ ಮೂಲಕ ಪಕ್ಷವನ್ನು ಪುನರ್ ಸಂಘಟಿಸಲು ನೋಡುತ್ತಿದೆ. 
SCROLL FOR NEXT