ರಾಜ್ಯ

ನನ್ನ ಕೂದಲನ್ನು ಕತ್ತರಿಸಲು ನನ್ನ ಪೋಷಕರಿಗೆ ಹೇಳಿ: ಅಧಿಕಾರಿಗಳ ಬಳಿ ಬಾಲಕನ ಅಳಲು

Shilpa D
ಗದಗ: 16 ವರ್ಷದ ಬಾಲಕನಿಗೆ ತಲೆ ಕೂದಲೇ ದೊಡ್ಡ ಸಮಸ್ಯೆಯಾಗಿದೆ,  ಈತನ ಪೋಷಕರಿಗೆ ಈತನ ಗೋಳು ಕೇಳಿಸುತ್ತಲೇ ಇಲ್ಲ, ಪ್ರತಿ 2 ವರ್ಷಕ್ಕೊಮ್ಮೆ ಈತನ ಕೂದಲು ಕಟ್ ಮಾಡಿಸಲಾಗುತ್ತದೆ, ಆದರೆ ಅಲ್ಲಿಯವರೆಗೆ ಆತ ಸ್ನಾನ ಕೂಡ ಮಾಡುವಂತಿಲ್ಲ, ಇದೇ ದೊಡ್ಡ ಸಮಸ್ಯೆಯಾಗಿದೆ.
ಗದಗದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಸಮಿತಿ ಅಧಿಕಾರಿಗಳು ಭೇಟಿ ಕೊಟ್ಟ ನಂತರ ಆತನ ಹಣೆ ಬರಹವೇ ಬದಲಾಗಿದೆ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾನೂನು ಜಾಗೃತಿ ಮೂಡಿಸಲು ಬಂದಿದ್ದರು. ಅವರ ಬಳಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ತನ್ನ ಪೋಷಕರಿಗೆ ಹೇಳಿ ತನ್ನ ಕೂದಲು ಕಟ್ ಮಾಡಿಸುವಂತೆ  ಮನವಿ ಮಾಡಿದ್ದಾನೆ.
ತನ್ನ ಕೂದಲಿನಿಂದಾಗಿ ಶಾಲೆ ಮತ್ತು ಸಮಾಜದಲ್ಲಿ ಮುಜುಗರ ಅನುಭವಿಸುವಂತಾಗಿದೆ, ನಮ್ಮ ಕೂದಲು ಕಟ್ ಮಾಡಿಸುವಂತೆ ಪೋಷಕರಿಗೆ ಮನವೊಲಿಸುವಂತೆ ತಿಳಿಸಿದ್ದಾನೆ. 
ಆದರೆ ಅಧಿಕಾರಿಗಳಿಗೆ ಪೋಷಕರ ಮನವೊಲಿಸುವುದು ಸುಲಭದ ಮಾತಾಗಿರಲಿಲ್ಲ, ನಂತರ ಪೋಷಕರು ಕೂದಲು ಕಟ್ ಮಾಡಿಸಲು ಒಪ್ಪಿಕೊಂಡಿದ್ದಾರೆ, ಅದು ಒಂದು ಷರತ್ತಿನ ಮೇರೆಗೆ, ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿರುವ ರೇಣುಕಾದೇವಿ ದೇವಾಸ್ಥಾನದ ಬಳಿ ಕೂದಲು ಕಟ್ ಮಾಡಿಸುವಂತೆ ಷರತ್ತು ವಿಧಿಸಿದ್ದಾರೆ. ಅನಂತರ ಬಾಲಕನನ್ನು ದೇವಾಸ್ಥಾನಕ್ಕೆ ಕರೆದೊಯ್ದು ಅಲ್ಲಿಯೇ ಹೇರ್ ಕಟ್ ಮಾಡಿಸಿದ್ದಾರೆ.
ಕೂದಲು ಕಟ್ ಮಾಡಿಸಿದ್ದರಿಂದ ಸಂತೋಷವಾಗಿದ್ದು, ತನ್ನ ಪರೀಕ್ಷೆ ಬಗ್ಗೆ ಗಮನ ಕೇಂದ್ರೀಕರಿಸುತ್ತಿದ್ದಾನೆ. ಇತ್ತೀಚೆಗೆ ಆತನ ಸ್ನೇಹಿತರು ಆತನನ್ನು ಅವಾಯ್ಡ್ ಮಾಡುತ್ತಿದ್ದರು, ಆತ ಪ್ರತಿದಿನ ಸ್ನಾನ ಮಾಡದಿದ್ದರಿಂದ ವಾಸನೆ ಬರುತ್ತಿದ್ದರಿಂದ ಅವನನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ,  
ಧಾರವಾಡ. ಗದಗ, ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಈ ಪದ್ಧತಿ ರೂಢಿಯಲ್ಲಿದೆ, ಇದೊಂದು ಅವೈಜ್ಞಾನಿಕ ಪದ್ಧತಿಯಿಂದ ವಿಶೇಷವಾಗಿ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಬಾಲಕನ ಧೈರ್ಯ ಮೆಚ್ಚುವಂತಹದ್ದು, ಕುಟುಂಬದ ಹಿತಕ್ಕಾಗಿ  ಮಕ್ಕಳ ಕೂದಲು ಬೆಳೆಸಿ, ದೇವರಿಗೆ ನೀಡಲಾಗುತ್ತದೆ.
SCROLL FOR NEXT