ರಾಜ್ಯ

ಪ್ರಚಾರ ವೇಳೆ ಪ್ರಾಣಿ, ಪಕ್ಷಿಗಳ ಬಳಕೆಗೆ ಚುನಾವಣಾ ಆಯೋಗ ನಿಷೇಧ

Sumana Upadhyaya
ಬೆಂಗಳೂರು: ಚುನಾವಣಾ ರ್ಯಾಲಿಗಳು ಮತ್ತು ಪ್ರಚಾರದಲ್ಲಿ ಪ್ರಾಣಿ, ಪಕ್ಷಿಗಳನ್ನು ಬಳಸುವಂತಿಲ್ಲ, ರೋಡ್ ಶೋ, ಮೆರವಣಿಗೆಗಳಲ್ಲಿ ಕೂಡ ಪ್ರಾಣಿಗಳ ಫೋಟೋ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ. ಪ್ರಾಣಿಗಳ ಚಿಹ್ನೆಯನ್ನು ಹೊಂದಿರುವ ಪಕ್ಷಗಳು ಯಾವುದೇ ಪ್ರಚಾರ ಕಾರ್ಯಗಳಲ್ಲಿ ಆ ಪ್ರಾಣಿಯನ್ನು ಜೀವಂತವಾಗಿ ತೋರಿಸುವಂತಿಲ್ಲ. ಈ ಸಂಬಂಧ ಚುನಾವಣಾ ನೀತಿ ಸಂಹಿತೆಯನ್ನು ಭಾರತೀಯ ಚುನಾವಣಾ ಆಯೋಗ ಹೊರಡಿಸಿದೆ.
ಕರ್ನಾಟಕದಲ್ಲಿ ಕೆಲವು ಸ್ಥಳೀಯ ಮತ್ತು ರಾಷ್ಟ್ರೀಯ ಪಕ್ಷಗಳ ಮತ್ತು ಸ್ವತಂತ್ರ ಅಭ್ಯರ್ಥಿಗಳ ಗುರುತು ಪ್ರಾಣಿ, ಪಕ್ಷಿಗಳಾಗಿವೆ. ಕೆಲವರು ಪ್ರಚಾರ ಸಂದರ್ಭದಲ್ಲಿ ಗ್ರಾಮಾಂತರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಆನೆ, ಒಂಟೆ, ಗಿಣಿ, ನವಿಲು, ಕುದುರೆ ಮತ್ತು ಕತ್ತೆಗಳನ್ನು ಬಳಸುತ್ತಾರೆ. ತಮ್ಮ ಪಕ್ಷದ ಗುರುತನ್ನು ಜನಪ್ರಿಯಗೊಳಿಸಲು ಬಿಎಸ್ ಪಿ ನಿಜವಾದ ಆನೆಯನ್ನು ಪ್ರಚಾರದ ವೇಳೆ ಬಳಸಿಕೊಳ್ಳುತ್ತದೆ. ಕಾಡಿನಿಂದ ಆನೆಗಳನ್ನು ತರಿಸುವುದನ್ನು ನಾವು ನೋಡುತ್ತೇವೆ ಎನ್ನುತ್ತಾರೆ ಅರಣ್ಯ ಸಂರಕ್ಷಕ ಡಿ ವಿ ಗಿರೀಶ್.
SCROLL FOR NEXT