ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಸ್ನೇಹಿತೆ ಮನೆಯಲ್ಲಿ ಆಟೋ ಚಾಲಕ ಆತ್ಮಹತ್ಯೆ
ಆಟೊ ಚಾಲಕನೊಬ್ಬ ಮೊಬೈಲ್ಫೋನ್ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ. ..
ಬೆಂಗಳೂರು: ಆಟೊ ಚಾಲಕನೊಬ್ಬ ಮೊಬೈಲ್ಫೋನ್ನಲ್ಲಿ ಸೆಲ್ಫಿ ವಿಡಿಯೋ ಮಾಡಿಟ್ಟು, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತಪುರದಲ್ಲಿ ನಡೆದಿದೆ.
ಸುಬೇದಾರಪಾಳ್ಯ ನಿವಾಸಿ ವೆಂಕಟೇಶ್(38) ಮೃತ ವ್ಯಕ್ತಿ. ಮನೆ ಸಮೀಪದಲ್ಲಿ ವಾಸವಿದ್ದ ವಿಚ್ಛೇದಿತ ಮಹಿಳೆ ಜೊತೆ ವಾಸವಿದ್ದ. ಅಧಿಕವಾಗಿ ಸಾಲ ಮಾಡಿಕೊಂಡಿದ್ದ ಆದರೆ, ಅದನ್ನು ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ.
ಬೆಳಗ್ಗಿನ ಜಾವ ಸುಮಾರು 4.30ಕ್ಕೆ ತನ್ನ ಸ್ನೇಹಿತೆ ಯಶೋಧಾ ಮನೆಗೆ ತೆರಳಿದ್ದ ವೆಂಕಟೇಶ್ ಹಾಲು ತಂದು ಟೀ ಮಾಡಿಕೊಡುವಂತೆ ಕೇಳಿದ್ದಾನೆ, ಆಕೆ ಹೊರ ಹೋದ ಬಳಿಕ ಬಾಗಿಲು ಹಾಕಿಕೊಂಡು ವಿಡಿಯೋ ಮಾಡಿದ್ದಾನೆ. ಇದನ್ನು ಕೇಳಿಸಿಕೊಂಡ ಯಶೋಧಾ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಬಂದು ಬಾಗಿಲು ಒಡೆದು ನೋಡಿದಾಗ ವೆಂಕಟೇಶ್ ಪ್ಯಾನ್ ಗೆ ನೇಣು ಹಾಕಿಕೊಂಡಿದ್ದ, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದ.
'ನನ್ನ ಸಾವಿಗೆ ನಾನೇ ಕಾರಣ. ಯಾರೂ ಕಾರಣರಲ್ಲ, ನನ್ನ ಆಟೋವನ್ನು ಯಾರಾದರೂ ಖರೀದಿಸಿ ಅದರಲ್ಲಿ 40 ಸಾವಿರ ರೂ. ಸ್ನೇಹಿತೆಗೆ ಕೊಡಿ ಎಂದು ಆಟೋ ಚಾಲಕ ಆತ್ಮಹತ್ಯೆಗೆ ಮುನ್ನ ಮಾಡಿರುವ ಸೆಲ್ಫಿ ವಿಡಿಯೋದಲ್ಲಿ ಹೇಳಿದ್ದಾನೆ.