ಸಾಂದರ್ಭಿಕ ಚಿತ್ರ 
ರಾಜ್ಯ

ಯಶವಂತಪುರ-ಜೈಪುರ ಸುವಿಧ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಆರಂಭ

ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್‌) ಗುರುವಾರ ಯಶವಂತಪುರ-ಜೈಪುರ-ಯಶವಂತಪುರ ಮಾರ್ಗದಲ್ಲಿ ವಾರಕ್ಕೊಮ್ಮೆ ಸಂಚರಿಸುವ ಸುವಿಧ ಸೂಪರ್‌ಫಾಸ್ಟ್‌...

ಹುಬ್ಬಳ್ಳಿ: ನೈರುತ್ಯ ರೈಲ್ವೆ(ಎಸ್‌ಡಬ್ಲ್ಯುಆರ್‌) ಗುರುವಾರ ಯಶವಂತಪುರ-ಜೈಪುರ-ಯಶವಂತಪುರ ಮಾರ್ಗದಲ್ಲಿ ವಾರಕ್ಕೊಮ್ಮೆ ಸಂಚರಿಸುವ ಸುವಿಧ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಘೋಷಿಸಿದೆ. ಏ.4ರಂದು ಯಶವಂತಪುರಿಂದ ಹಾಗೂ ಏ.6ರಂದು ಜೈಪುರದಿಂದ ಈ ಸೇವೆ ಆರಂಭವಾಗಲಿದೆ.
ರೈಲು ಸಂಖ್ಯೆ 82653 ಪ್ರತಿ ಗುರುವಾರ ಬೆಳಿಗ್ಗೆ 11.30ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಅದೇ ಶನಿವಾರ 0635ಕ್ಕೆ ಜೈಪುರ ತಲುಪಲಿದೆ. ಏ.4ರಿಂದ ಜೂನ್‌.27ರವರೆಗೆ ಈ ವಿಶೇಷ ಸೇವೆ ಲಭ್ಯವಾಗಲಿದೆ.
ಆ ಕಡೆಯಿಂದ ರೈಲು ಸಂಖ್ಯೆ 82654 ಪ್ರತಿ ಶನಿವಾರ 22.15ಕ್ಕೆ ಜೈಪುರದಿಂದ ಹೊರಡಲಿದ್ದು, ಸೋಮವಾರ 18.25ಕ್ಕೆ ಯಶವಂತಪುರಕ್ಕೆ ಬಂದು ಸೇರಲಿದೆ. ಏ.6ರಿಂದ ಜೂ.29ರವರೆಗೆ ಈ ಸಂಚಾರ ಲಭ್ಯವಿದೆ.
ಎಸ್‌ಡಬ್ಲ್ಯುಆರ್‌, ಯಶವಂತಪುರ-ಶ್ರೀ ಮಾತಾ ವೈಷ್ಣೊದೇವಿ ಕತ್ರ-ಯಶವಂತಪುರ ಮಾರ್ಗದಲ್ಲಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲನ್ನು ವಿಶೇಷ ದರದೊಂದಿಗೆ ಘೋಷಿಸಿದೆ.
 06521 ಸಂಖ್ಯೆಯ ರೈಲು ಪ್ರತಿ ಗುರುವಾರ 06.30ಕ್ಕೆ ಯಶವಂತಪುರದಿಂದ ಹೊರಡಲಿದ್ದು, ಶನಿವಾರ 0400ಗಂಟೆಗೆ ವೈಷ್ಣೋದೇವಿ ತಲುಪಲಿದೆ. ಏ.4ರಿಂದ ಜೂ.20ರವರೆಗೆ ಈ ಸಂಚಾರ ಲಭ್ಯವಿದೆ. 
06522 ಸಂಖ್ಯೆಯ ರೈಲು ಪ್ರತಿ ಸೋಮವಾರ 05.40ಕ್ಕೆ ವೈಷ್ಣೋದೇವಿಯಿಂದ ಹೊರಟು ಅದೇ ಬುಧವಾರ 15.00 ಗಂಟೆಗೆ ಯಶವಂತಪುರ ತಲುಪಲಿದೆ. ಈ ಸೇವೆ ಏ.8ರಿಂದ ಜೂ.24ರವರೆಗೆ ಲಭ್ಯ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!