ರಾಜ್ಯ

ಬಡ್ತಿ ಮೀಸಲಾತಿಗೆ ಸುಪ್ರೀಂಕೋರ್ಟ್ ಅಸ್ತು ಸ್ವಾಗತಾರ್ಹ: ಪ್ರಿಯಾಂಕ್ ಖರ್ಗೆ

Shilpa D
ಕಲಬುರಗಿ: ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನೂತನ ಕಾಯಿದೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವುದು ಸ್ವಾಗತಾರ್ಹ. ಇದರಿಂದ ಪರಿಶಿಷ್ಟ ವರ್ಗದವರಿಗೆ ಆಗಿದ್ದ ಸಾಂವಿಧಾನಿಕ ಅನ್ಯಾಯವನ್ನು ಸರಿಪಡಿಸಿದಂತಾಗಿದೆ, ಉಳಿದ ವರ್ಗದವರಿಗೆ ಕಾಯಿದೆಯಿಂದ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಪರವಾಗಿ ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿರುವುದು ಸಂತಸ ತಂದಿದೆ. ಹೊಸ ಹುದ್ದೆ ಸೃಷ್ಟಿ, ಇತರರಿಗೆ ಯಾವ ರೀತಿಯಲ್ಲಿಯೂ ತೊಂದರೆಯಾಗದಂತೆ  ಅಗತ್ಯ ಕ್ರಮಕೈಗೊಳ್ಳಲಾಗುವುದು. ಸುಪ್ರೀಂಕೋರ್ಟ್ ತೀರ್ಪಿನ ಪ್ರತಿಯಲ್ಲಿರುವ ಸಾಧಕ ಬಾಧಕಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆಗೆ ಚರ್ಚಿಸಿ, ಬಳಿಕ ಇಲಾಖಾವಾರು ಜೇಷ್ಠತಾ ಪಟ್ಟಿಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದ್ದಾರೆ. 
ಈಗಾಗಲೇ ಹುದ್ದೆ ಅಲಂಕರಿಸಿದವರಿಗೆ ಹಿಂಬಡ್ತಿ ಮಾಡುವುದಿಲ್ಲ. ಹಿಂಬಡ್ತಿಯಾದವರಿಗೆ ಅದೇ ಹುದ್ದೆ ಕೊಡಬೇಕೆಂಬ ನಿಯಮವಿಲ್ಲ. ಈ ಹಿಂದಿನ ಗ್ರೇಡನ್ನು ಮತ್ತೆ ನೀಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಕಳೆದ ಏಪ್ರಿಲ್‍ನಲ್ಲಿ ನೂತನ ಕಾಯಿದೆಗೆ ಸಚಿವ ಸಂಪುಟ ಅಸ್ತು ಎಂದಿತ್ತು.
SCROLL FOR NEXT