ಮಂಗಳೂರು: ಮೇ31 ರ ಮಧ್ಯರಾತ್ರಿಯಿಂದ ರಾಜ್ಯದಲ್ಲಿ ಮೀನುಗಾರಿಕೆ ಋತು ಪ್ರಾರಂಭವಾಗುತ್ತಿದೆ. ಆದರೆ 2018-19ರ ಸಾಲಿನಲ್ಲಿ ರಾಜ್ಯದ ಮೀನು ಉತ್ಪಾದನೆ ಶೇ. 18 ಕುಸಿತ ಕಂಡಿದೆ.ಕಡೆಇಮೆಯಾದ ಮೀನುಗಾರಿಕಾ ದಿನಗಳು, ಶೀತಗಾಳಿ ಸೇರಿ ಬದಲಾದ ಹವಾಮಾನ ಮೀನು ಉತ್ಪಾದನೆ ಇಳಿಕೆಗೆ ಪ್ರಮುಖ ಕಾರಣಗಳು ಎನ್ನಲಾಗಿದೆ.
ಮಂಗಳೂರಿನ ಸೆಂಟ್ರಲ್ ಮೆರೈನ್ ಫಿಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಸಂಗ್ರಹಿಸಿದ ಅಂಕಿ ಅಂಶಗಳ ಪ್ರಕಾರ ಕರ್ನಾಟಕದ ಸಮುದ್ರ ಮೀನು ಉತ್ಪಾದನೆಯು 2017-18 ರಲ್ಲಿ 5,47,784 ಟನ್ ಗಳಷ್ಟಿತ್ತು. ಇದು 2018-19ರಲ್ಲಿ ಗೆ 4,45,213 ಟನ್ ಗಳಿಗೆ ಕುಸಿದಿದೆ.ಮಾನ್ಸೂನ್ ಆರಂಭದಲ್ಲಿ ಕೆಟ್ಟ ವಾತಾವರಣದಿಂದಾಗಿ ಮೀನುಗಾರಿಕೆ ದಿನಗಳು ಕಡಿಮೆಯಾಗಿದ್ದವು. ಅದೇ ವೇಳೆ ಮೀನುಗಾರರು ರಾತ್ರಿ ವೇಳೆ ಮೀನುಗಾರಿಕೆಗೆ ಅವಕಾಶ ವಿರೋಧಿಸಿ ನಡೆಸಿದ ಪ್ರತಿಭಟನೆಗಳ ಕಾರಣ ಮೀನು ಉತ್ಪಾದನೆ ಇನ್ನಷ್ಟು ಕುಸಿದಿದೆ.
ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ, ಪರ್ಸ್-ಸೈನ್ ಬೋಟ್ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದು ರಾತ್ರಿಪಾಳಿಯಲ್ಲಿ ಮೀನುಗಾರಿಕೆ ನಡೆಸಲು ಅನುಮತಿ ಪಡೆದಿದ್ದರು. ಆದರೆ ಇದರಿಂದಾಗಿ ಕರಾವಳಿ ತೀರದ ಸಾಂಪ್ರದಾಯಿಕ ಮೀನುಗಾರರು ಕಂಘಾಲಾಗಿದ್ದರು. ಅವರು ಹೈಕೋರ್ಟ್ ಆದೇಶವನ್ನು ವಿರೋಧಿಸಿ ಪ್ರತಿಭಟಿಸಿದ್ದರು.ಈ ವಿಷಯದಲ್ಲಿ ಕಾರವಾರದಿಂದ ಮಂಗಳೂರಿನವರೆಗಿನ ರಾಜ್ಯದ ಪ್ರಮುಖ ಬಂದರುಗಳಲ್ಲಿ ಪ್ರತಿಭಟನೆಗಳು ನಡೆಇದ್ದವು.ರಾಜ್ಯ ಸರ್ಕಾರವು ಮೇಲ್ಮನವಿ ಸಲ್ಲಿಸಿದ ಬಳಿಕ ಅಂತಿಮವಾಗಿ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಯಿತು ಮತ್ತು ಹೈಕೋರ್ಟ್ ಕರ್ನಾಟಕ ಕರಾವಳಿಯಲ್ಲಿ ಮತ್ತೆ ರಾತ್ರಿ ವೇಳೆಯ ಮೀನುಗಾರಿಕೆಗೆ ನಿಷೇಧ ಹೇರಿತ್ತು.
ದಕ್ಷಿಣ ಕನ್ನಡ ಜನರ ಅಚ್ಚುಮೆಚ್ಚಿನ ಸಾರ್ಡಿನ್ಸ್ ಮೀನುಇಗಳು ಇತ್ತೀಚಿನ ದಿನದಲ್ಲಿ ತೀವ್ರವಾಗಿ ಕಣ್ಮರೆಯಾಗಿದೆ.ಮೀನುಗಾರಿಕೆ ಇಳಿಮುಖಕ್ಕೆ ಈ ಮೀನುಗಳ ಸಂಖ್ಯೆಯ ಕುಸಿತವೂ ಹೇರಳವಾಗಿ ಕೊಡುಗೆ ನೀಡಿದೆ.ಹವಾಮಾನ ವೈಪರೀತ್ಯದ ಕಾರಣದಿಂದಾಗಿ ಸಾರ್ಡಿನ್ಸ್ ಮೀನುಗಳು ಕರ್ನಾಟಕ ಕರಾವಳಿಯಿಂದ ದೂರಾಗಿದೆ ಎಂದು ಸಂಶೋಧನಾ ಅಧಿಕಾರಿಗಳು ಹೇಳಿದ್ದಾರೆ.