ತನ್ವೀರ್ ಸೇಠ್-ಫರಾನ್ 
ರಾಜ್ಯ

ತನ್ವೀರ್ ಸೇಠ್ ಮೇಲೆ ಹಲ್ಲೆಗೂ ಮುನ್ನ ಆರೋಪಿಯಿಂದ ನಾಯಿಗಳ ಕತ್ತು ಸೀಳಿ ತರಬೇತಿ, ಭಯಾನಕ ಸತ್ಯ ಬಹಿರಂಗ!

ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದಾಳಿಕೋರ ಹಲ್ಲೆಗೂ ಮುನ್ನ ಶ್ವಾನಗಳ ಕತ್ತು ಸೀಳಿ ತರಬೇತಿ ಪಡೆಯುತ್ತಿದ್ದ ಎಂಬ ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ.

ಬೆಂಗಳೂರು: ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ದಾಳಿಕೋರ ಹಲ್ಲೆಗೂ ಮುನ್ನ ಶ್ವಾನಗಳ ಕತ್ತು ಸೀಳಿ ತರಬೇತಿ ಪಡೆಯುತ್ತಿದ್ದ ಎಂಬ ಆಘಾತಕಾರಿ ಸುದ್ದಿ ಬಹಿರಂಗಗೊಂಡಿದೆ. 

ಶ್ವಾನಗಳ ಕತ್ತು ಮನುಷ್ಯರ ಕತ್ತಿಗಿಂತ ಗಟ್ಟಿಯೆಂಬ ಕಾರಣಕ್ಕೆ ತಂಡ ನಾಯಿಗಳ ಕತ್ತು ಸೀಳಿ ತರಬೇತಿ ಪಡೆದಿತ್ತು ಎಂಬ ಆತಂಕಕಾಗಿ ವಿಷಯ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. 

ಬನ್ನಿಮಂಟಪ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಆರತಕ್ಷತೆ ವೇಳೆ ತನ್ವೀರ್ ಸೇಠ್ ಅವರು ಆಸೀನರಾಗಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಆರೋಪಿ ಫರ್ಹಾನ್ ಪಾಷಾ ಸೇಠ್ ಮೇಲೆ ಚೂರಿಯಿಂದ ಹಲ್ಲೆ ಮಾಡಿದ್ದ. ಅಲ್ಲದೆ ಈ ಹಿಂದೆ ಕೂಡ ನಾಲ್ಕು ಬಾರಿ ತನ್ವೀರ್ ಸೇಠ್ ಅವರನ್ನು ಹತ್ಯೆ ಮಾಡಲು ಯತ್ನ ನಡೆಸಿದ್ದ ಎಂದು ಹೇಳಲಾಗುತ್ತಿದೆ. 

ಸದ್ಯ ಮೈಸೂರು ನಗರ ಪೊಲೀಸ್ ಆಯುಕ್ತ ಕೆಟಿ ಬಾಲಕೃಷ್ಣ ಅವರು ತನ್ವೀರ್ ಸೇಠ್ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಪ್ರತೀ ಪಾಳಿಯಲ್ಲೂ ಮೂವರು ಗನ್ ಮ್ಯಾನ್ ಗಳನ್ನು ನಿಯೋಜಿಸಿದ್ದಾರೆ. ಈ ಹಿಂದೆ ತನ್ವೀರ್ ಸೇಠ್ ಅವರಿಗೆ ಭದ್ರತೆ ನೀಡುತ್ತಿದ್ದ ಗನ್ ಮ್ಯಾನ್ ಫಿರೋಜ್ ಖಾನ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. 

ಗಣ್ಯ ವ್ಯಕ್ತಿಗಳನ್ನು ಕೊಲೆ ಮಾಡಿ ಹೆಸರು ಮಾಡಬೇಕು ಎಂಬ ದುರುದ್ದೇಶವನ್ನು ಫರಾನ್ ಹೊಂದಿದ್ದ ಎಂದು ಫರಾನ್ ಸ್ನೇಹಿತರು ವಿಚಾರಣೆ ವೇಳೆ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!