ಬೆಂಗಳೂರು: ಹೆಣ್ಣಿಗಾಗಿ ಜಗಳ, ಕಾರು ಚಾಲಕನ ಹತ್ಯೆ
ಹೆಣ್ಣಿಗಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೆಂಗಳೂರು: ಹೆಣ್ಣಿಗಾಗಿ ಇಬ್ಬರು ಯುವಕರ ನಡುವೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಶ್ರೀನಗರದ ಕಾರು ಚಾಲಕ ಪ್ರದೀಪ್ (26) ಹತ್ಯೆಗೀಡಾದವ. ಈತನನ್ನು ಹತ್ಯೆ ಮಾಡಿದ ವಿನೋದ್ ಕುಮಾರ್ ಪರಾರಿಯಾಗಿದ್ದಾನೆ.ವೃಷಭಾವತಿ ನಗರದ 5ನೇ ಕ್ರಾಸ್‌ನಲ್ಲಿ ವಾಸವಾಗಿರುವ ಮಹಿಳೆಯೊಂದಿಗೆ ಇವರಿಬ್ಬರಿಗೂ ಅನೈತಿಕ ಸಂಬಂಧ ಇತ್ತು ಎನ್ನಲಾಗಿದೆ.
ಇಂದು ಬೆಳಗ್ಗಿನ ಜಾವ ಮಹಿಳೆಯನ್ನು ಹುಡುಕಿಕೊಂಡು ಶ್ರೀನಗರದಿಂದ ಪ್ರದೀಪ್ ಬಂದಿದ್ದಾನೆ. ಆಗ ಆಕೆಯೊಂದಿಗೆ ವಿನೋದ್ ಇರುವುದನ್ನು ಕಂಡ ಪ್ರದೀಪ್ ಕೆಂಡಾಮಂಡಲನಾಗಿದ್ದಾನೆ.
ವಿನೋದ್‌ನನ್ನು ತೀವ್ರ ತರಾಟೆಗೆ ತೆಗೆದುಕೊಂಡಾಗ ಇಬ್ಬರ ನಡುವೆ ಜಗಳ ಉಂಟಾಗಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ವಿನೋದ್ ಕುಮಾರ್ ಚಾಕುವಿನಿಂದ ಪ್ರದೀಪ್‌ನ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡ ಪ್ರದೀಪ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತ ಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.