ರಾಜ್ಯ

ಬಿಬಿಎಂಪಿ ಮೇಯರ್ ಚುನಾವಣೆಗೆ ದಿನಾಂಕ ನಿಗದಿ: ಮತದಾನ ಎಂದು? ಇಲ್ಲಿದೆ ಮಾಹಿತಿ

Raghavendra Adiga

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರಪಾಲಿಕೆ  ಮೇಯರ್, ಉಪಮೇಯರ್ ಸ್ಥಾನಕ್ಕಾಗಿ ಚುನಾವಣೆ ದಿನಾಂಕ ನಿಗದಿಯಾಗಿದೆ. 

ಹಾಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಹಾಗೂ ಉಪಮೇಯರ್ ಭದ್ರೇಗೌಡರ ಅಧಿಕಾರಾವಧಿ ಇದೇ ಸೆ. 28ಕ್ಕೆ ಅಂತ್ಯವಾಗಲಿದ್ದು ಇದರ ಹಿಂದಿನ ದಿನ ಅಂದರೆ ಸೆ. 27ಕ್ಕೆ ಹೊಸ ಮೇಯರ್ ಆಯ್ಕೆಗಾಗಿ ಚುನಾವಣೆ ನಡೆಯಲಿದೆ ಎಂದು ಮಾಹಿತಿ ಲಭಿಸಿದೆ.ಈ ಕುರಿತ ಅಧಿಸೂಚನೆ ಶುಕ್ರವಾರ ಸಂಜೆ ಹೊರಬೀಳಲಿದೆ ಎಂದು ಬೆಂಗಳೂರು ಪ್ರಾದೇಶಿಕ ಆಯುಕ್ತರಾದ ಹರ್ಷ ಗುಪ್ತ ಹೇಳಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಮೇಯರ್ ಚುನಾವಣೆಗಾಗಿ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದಾಗಲೇ ಮತದಾರರ ಪಟ್ಟಿ ಸಿದ್ದವಾಗಿದೆ. ಈ ಪ್ರಕಾರ 257 ಮತದಾರರಿರಲಿದ್ದು ಗೆಲುವಿಗಾಗಿ 128 ಮತಗಳನ್ನು ಗಳಿಸಬೇಕಿದೆ.

ಈ ನಡುವೆ ಸರ್ಕಾರ ಬದಲಾಗಿ ಬಿಜೆಪಿ ಅಧಿಕಾರಕ್ಕೆ ಏರಿರುವ ಕಾರಣ ಬಿಬಿಎಂಪಿಯಲ್ಲಿಯೂ ಕಮಲ ಪಕ್ಷ ಅಧಿಕಾರಕ್ಕೇರಲು ತಂತ್ರ ರೂಪಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಧಿಕಾರದಲ್ಲಿದ್ದು ಏಳು ಜನ ಪಕ್ಷೇತರರಲ್ಲಿ ನಾಲ್ವರ ಬೆಂಬಲ ಗಳಿಸಿದ್ದರೆ ಬಿಜೆಪಿ ಅಧಿಕಾರ ಗಳಿಸುವುದು ಸುಲಭ ಎಂಬ ಮಾತು ಕೇಳಿಬಂದಿದೆ, 

SCROLL FOR NEXT