ರಾಜ್ಯ

ರಾಜೀನಾಮೆ ನೀಡಿದ್ದಕ್ಕೆ ವಿಷಾದಿಸುತ್ತೇನೆ: ಹೆಚ್.ವಿಶ್ವನಾಥ್

Manjula VN

ಬೆಂಗಳೂರು: ಉಪ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಘೋಷಣೆ ಮಾಡಿದ ಬಳಿಕ ಅನರ್ಹ ಶಾಸಕರಿಗೆ ಬರ ಸಿಡಿಲು ಹೊಡೆದಂತಾಗಿದೆ. ಚುನಾವಣಾ ಆಯೋಗದ ನಿಲುವಿಗೆ ಹೆಚ್ ವಿಶ್ವನಾಥ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. 

ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ಜೊತೆಗೆ ಮಾತನಾಡಿರುವ ಅವರು, ಅನರ್ಹತೆ ವಿಚಾರ ಇನ್ನೂ ಸುಪ್ರೀಂಕೋರ್ಟ್ ಅಂಗಳದಲ್ಲಿದೆ. ಅಷ್ಟರಲ್ಲೇ ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದೆ. ಸೋಮವಾರ ಸುಪ್ರೀಂಕೋರ್ಟ್ ವಿಚಾರಣೆ ನಡೆಸಲಿದ್ದು, ಈಗಾಗಲೇ ಅನರ್ಹ ಶಾಸಕರೆಲ್ಲರೂ ದೆಹಲಿಗೆ ತೆರಳಿದ್ದಾರೆ, ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ರಾಜೀನಾಮೆ ನೀಡಿದ್ದಕ್ಕೆ ವಿಷಾದವಿದೆ. ನ್ಯಾಯಾಲಯದಲ್ಲಿ ನಮ್ಮ ಅರ್ಜಿಗಳ ವಿಚಾರಣೆ ತ್ವರಿಗತಿಯಲ್ಲಿ ಸಾಗುತ್ತಿಲ್ಲ ಇಂತಹ ರಾಜಕೀಯ ಬೆಳವಣಿಗೆಗಳನ್ನು ನಾವು ಯಾರೂ ನಿರೀಕ್ಷಿಸಿರಲಿಲ್ಲ. ರಾಜಕೀಯ ವಾತಾವರಣ ಹಾಗೂ ರಾಜಕೀಯ ಪಕ್ಷದಲ್ಲಾಗುತ್ತಿರುವ ಬೆಳವಣಿಗೆಗಳಿಂದ ನಾವೆಲ್ಲರೂ ಒಂದು ನಿರ್ಧಾರಕ್ಕೆ ಬಂದಿದ್ದೆವು. ಮತ್ತೆ ಹಿಂದಿರುಗಿ ಬರುತ್ತೇವೆ ಎಂದು ತಿಳಿಸಿದ್ದಾರೆ. 

ಅಧಿಕಾರಕ್ಕೆ ಬಂದ ಬಳಿಕ ಯಡಿಯೂರಪ್ಪ ನಿಮ್ಮ ಕೈಬಿಟ್ಟಿದ್ದಾರೆಂದು ಎನಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಖಂಡಿತವಾಗಿಯೂ ಇಲ್ಲ. ರಾಜ್ಯದ ನಾಯಕರು ಹಾಗೂ ಹೈಕಮಾಂಡ್ ಜೊತೆಗೆ ಸಂಪರ್ಕದಲ್ಲಿದ್ದೇವೆ. ನಮ್ಮೊಂದಿಗೆ ನಿಲ್ಲುವುದಾಗಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ. ನಮ್ಮ ಹಿತಾಸಕ್ತಿ ಕಾಪಾಡಲು ಸಾಧ್ಯವಾಗದೇ ಹೋದರೆ, ರಾಜೀನಾಮೆ ನೀಡುವುದಾಗಿಯೂ ಹೇಳಿದ್ದಾರೆ. ರಾಜೀನಾಮೆಯೇ ಪರಿಹಾರವಲ್ಲ ಎಂದು ನಾವು ಹೇಳಿದ್ದಾವೆ. ನಮ್ಮ ಶಾಸಕರಿಗೆ ಭವಿಷ್ಯವಿದೆ ಎಂದಿದ್ದಾರೆ. 

ಮುಂದಿನ 10 ದಿನಗಳೊಳಗಾಗಿ ನ್ಯಾಯಾಲಯ ಅಂತಿನ ನಿರ್ಧಾರಕ್ಕೆ ಬರದೇ ಹೋದಲ್ಲಿ ನಿಮ್ಮ ಮುಂದಿನ ನಿಲುವೇನು? ಎಂಬ ಪ್ರಶ್ನೆಗೆ ಉತ್ತರಿಸಿ, ನ್ಯಾಯಾಲಯದಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ ಎದು ಹೇಳಿದ್ದಾರೆ. 

SCROLL FOR NEXT