ಗಂಗಾವತಿ: ಯುವಕನಿಂದ ದಿನಕ್ಕೆ ಐನ್ನೂರು ಜನರಿಗೆ ಮಜ್ಜಿಗೆ... ವಿಟಾಮೀನ್ 'ಸಿ' ಪಾನಿಯಾ ವಿತರಣೆ! 
ರಾಜ್ಯ

ಗಂಗಾವತಿ: ಯುವಕನಿಂದ ದಿನಕ್ಕೆ ಐನ್ನೂರು ಜನರಿಗೆ ಮಜ್ಜಿಗೆ... ವಿಟಾಮೀನ್ 'ಸಿ' ಪಾನಿಯಾ ವಿತರಣೆ!

ಕೊರೊನಾದಂತ ಮಹಾಮಾರಿ ಇಡೀ ವಿಶ್ವವನ್ನೆ ವ್ಯಾಪಿಸಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ಪ್ರಾಣ ರಕ್ಷಣೆಗೆಯಲ್ಲಿ ಮಹತ್ರ ಪಾತ್ರವಹಿಸುತ್ತಿರುವ ನಾನಾ ಇಲಾಖೆಯ ಸಿಬ್ಬಂದಿಗಳಿಗೆ ತಂಪು ಪಾನಿಯಾ ವಿಯರಿಸುವ ಮೂಲಕ ನಗರದ ಯುವಕನೊಬ್ಬ ಗಮನ ಸೆಳೆದಿದ್ದಾನೆ. 

ಗಂಗಾವತಿ: ಕೊರೊನಾದಂತ ಮಹಾಮಾರಿ ಇಡೀ ವಿಶ್ವವನ್ನೆ ವ್ಯಾಪಿಸಿದೆ. ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ಪ್ರಾಣ ರಕ್ಷಣೆಗೆಯಲ್ಲಿ ಮಹತ್ರ ಪಾತ್ರವಹಿಸುತ್ತಿರುವ ನಾನಾ ಇಲಾಖೆಯ ಸಿಬ್ಬಂದಿಗಳಿಗೆ ತಂಪು ಪಾನಿಯ ವಿಯರಿಸುವ ಮೂಲಕ ನಗರದ ಯುವಕನೊಬ್ಬ ಗಮನ ಸೆಳೆದಿದ್ದಾನೆ. 

ಜಯನಗರದ ಜಿ. ನಾಗೇಶ ಎಂಬ ಯುವಕ ನಿತ್ಯ ತನ್ನ ದ್ವಿಚಕ್ರ ವಾಹನದಲ್ಲಿ 40 ರಿಂದ 50ಲೀಟರ್ ಮಜ್ಜಿಗೆ ಹೊತ್ತುಕೊಂಡು ಪೊಲೀಸ್, ಆರೋಗ್ಯ, ಭಿಕ್ಷುಕರು, ಅನಾಥರು ಹಾಗೂ ನಗರಸಭೆ ಸಿಬ್ಬಂದಿಗೆ ಮಧ್ಯಾಹ್ನ ತಂಪಾದ ಮಜ್ಜಿಗೆ ವಿತರಿಸುತ್ತಿದ್ದಾರೆ. ಕೊರೊನಾದ ತುರ್ತು ಸೇವೆಯಲ್ಲಿರುವ ವಿವಿಧ ಇಲಾಖೆಯ ಯೋಧರು ಬಿಸಿಲಿನ ಹೊಡೆತಕ್ಕೆ ತತ್ತರಿಸುತ್ತಿದ್ದಾರೆ. ಇವರ ಈ ಪರದಾಟ ಶಮನ ಮಾಡುವ ಉದ್ದೇಶಕ್ಕೆ ಈ ಯುವಕ ಮುಂದಾಗಿದ್ದು, ದಿನಕ್ಕೆ ಐನ್ನೂರಕ್ಕೂ ಹೆಚ್ಚು ಜನರಿಗೆ ನೀರಿನ ದಾಹ ತೀರಿಸುವ ಕೆಲಸ ಮಾಡುತ್ತಿದ್ದಾರೆ.

ಮಜ್ಜಿಗೆ, ವಿಟಾಮಿನ್ ಸಿ ಅಂಶವುಳ್ಳ ಪಾನಿಯಾ ನೀಡುವ ಮೂಲಕ ಈ ಯುವಕ, ನಮ್ಮನ್ನು ಕಾಯುತ್ತಿರುವ ಯೋಧರ ಆರೋಗ್ಯದ ಶಕ್ತಿಯೂ ವೃದ್ಧಿಸಲಿ ಎಂಬ ಕಾರಣಕ್ಕೆ ಕಳೆದ ಹಲವು ದಿನಗಳಿಂದ ಈ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. 
ನಗರದ ವ್ಯಾಪ್ತಿಯಲ್ಲಿ ಬೆಳಗ್ಗೆ ಹತ್ತರಿಂದ ಮಧ್ಯಾಹ್ನ ಒಂದು ಗಂಟೆವರೆಗೆ ಮಸಾಲೆಯುಕ್ತ ಮಜ್ಜಿಗೆಯನ್ನು ವಿತರಿಸುವ ನಾಗೇಶ, ಸಂಜೆ ನಾಲ್ಕರಿಂದ ಐದು ಗಂಟೆವರೆಗೆ ನಾನಾ ಇಲಾಖೆಯ ಅಧಿಕಾರಿಗಳಿಗೆ ತಂಪಾದ ಸ್ವದೇಶಿ ಲಿಂಬೆಹಣ್ಣಿನ ಶರಬತ್ ನೀಡುತ್ತಿದ್ದಾರೆ.  

ಬಿಸಿಲಿನ ತಾಪದಿಂದ ದೇಹಕ್ಕೆ ರಕ್ಷಣೆ ಒದಗಿಸುವ ವಿಟಾಮಿನ್ ಸಿ ಅಂಶವುಳ್ಳ ಪಾನಕ, ಲಿಂಬೆರಸ, ಷರಬತ್ತು, ಹಾಗೂ ಗ್ಲುಕೋಸ್ ಯುಕ್ತ ಪಾನಿಯಾವನ್ನು ಉಚಿವಾಗಿ ವಿತರಿಸುವ ಮೂಲಕ ನಮ್ಮನ್ನು ಕಾಯುತ್ತಿರುವ ಕೊರೊನಾ ವಾರಿಯರ್ಸ್ಗೆ ಯುವಕ ಅಳಿಲು ಸೇವೆ ಸೇವೆ ಸಲಿಸುತ್ತಿದ್ದಾರೆ. ತನ್ನ ದ್ವಿಚಕ್ರ ವಾಹನದ ಹ್ಯಾಂಡಲ್ಗೆ ಎರಡು ಲೀಟರ್ ನೀರಿನ ಬಾಟಲಿಯ ಒಟ್ಟು ಸುಮಾರು 15 ರಿಂದ 20 ಬಾಟಲಿಗಳನ್ನು ಕೈಚಿಲದಲ್ಲಿ ತುಂಬಿಸಿಕೊಂಡು ನಗರದಾದ್ಯಂತ ಸಂಚರಿಸಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ತೆರಳಿ ಪಾನಿಯಾ ಸೇವೆ ಮಾಡುತ್ತಿದ್ದಾರೆ ಈ ಯುವಕ.

-ವರದಿ: ಎಂ.ಜೆ.ಶ್ರೀನಿವಾಸ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT