ರಾಜ್ಯ

ಮಿತಿಮೀರುತ್ತಿರುವ ಕೊರೋನಾ: ಲಾಕ್‍ಡೌನ್ ನಿಯಮ ಬದಲಿಸಿ ರಾಜ್ಯ ಸರ್ಕಾರದಿಂದ ಹೊಸ ಸುತ್ತೋಲೆ ಪ್ರಕಟ

Raghavendra Adiga

ಬೆಂಗಳೂರು: ರಾಜ್ಯದಲ್ಲಿ ದಿನ ದಿನಕ್ಕೆ ಕೊರೋನಾ ಹಾವಳಿ ಮಿತಿ ಮೀರುತ್ತಿದ್ದು ಈ ಹಿನ್ನೆಲೆ ಲಾಕ್‍ಡೌನ್ ನಿಯಮಗಳಲ್ಲಿ ಬದಲಾವಣೆ ತಂದು ರಾಜ್ಯ ಸರ್ಕಾರ ಹೊಸ ಸುತ್ತೋಲೆ ಹೊರಡಿಸಿದೆ.

ರಾಜ್ಯದ ಕೊರೋನಾ ಹಾಟ್‍ಸ್ಪಾಟ್ ಗಳಲ್ಲಿ ಮೂರು ವಲಯಗಳನ್ನು ಗುರುತಿಸಿರುವ ಸರ್ಕಾರ ನಿಯಂತ್ರಿತ ವಲಯ, ಬಫರ್ ಝೋನ್ ಹಾಗೂ ವಲಯ ಎಂದು ವಿಂಗಡಿಸಿದೆ.

ನಿಯಂತ್ರಿತ ವಲಯದಲ್ಲಿ ಕೊರೋನಾ ಪಾಸಿಟಿವ್ ಇರುವ ವ್ಯಕ್ತಿಯ ನಿವಾಸದ ಮುಂದೆ ತೀವ್ರ ಕ್ರಮ, ಸೋಂಕಿತನಿರುವ ಮನೆ, ಸ್ತೆಯ ನೂರು ಮೀಟರ್ ವರೆಗೆ ದಿಗ್ಬಂಧನ ಹಾಕಲ್ಪಡಲಿದೆ.ಸ್ಲಂ ಅಥವಾ ಹಳ್ಳಿಯಲ್ಲಾದರೆ ಇಡೀ ಸ್ಲಂ ಹಾಗೂ ಹಳ್ಳಿ ಪ್ರದೇಶಕ್ಕೆ ಸೀಲ್‍ಡೌನ್ ಮಾಡಲಾಗುತ್ತದೆ/

ಬಫರ್ ಝೋನ್ ಗಳಲ್ಲಿ ನಗರ ಪ್ರದೇಶದ ಐದು ಕಿ.ಮೀ ವ್ಯಾಪ್ತಿ, ಗ್ರಾಮೀಣ ಭಾಗದ ಏಳು ಕಿ.ಮೀ ವ್ಯಾಪ್ತಿಯಲ್ಲಿ ಕಣ್ಗಾವಲು ಇರಿಸಲಾಗುತ್ತದೆ.

ವಲಯಗಳಲ್ಲಿ ಇನ್ನಷ್ಟು ಬಿಗಿ ಕಣ್ಗಾವಲು ಇರಲಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿಬಿಎಂಪಿಯಿಂದ ಬಿಕ್ಕಟ್ಟು ನಿರ್ವಹಣಾ ಟೀಂ, ಪೋಲೀಸರಿಂದ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಪ್ರತ್ಯೇಕವಾಗಿ ಮೂರು ಟೀಂಗಳನ್ನು ರಚಿಸಿ ಲಾಕ್ ಡೌನ್ ನಿಯಮ ಪಾಲನೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. 

ಬೆಂಗಳೂರಿನಲ್ಲಿರುವ  ನಿಯಂತ್ರಿತ ವಲಯದಲ್ಲಿ ಒಂದು ಪ್ರವೇಶ ದ್ವಾರ ಒಂದು ಎಕ್ಸಿಟ್ ಮಾತ್ರವೇ ಇರಲಿದೆ.  ತುರ್ತು ಪರಿಸ್ಥಿತಿ ಹೊರತುಪಡಿಸಿ ಮನೆಯಿಂದ ಹೊರಗೆ ಕಾಲಿಡದಂತೆ ನಿಷೇಧ ಜಾರಿಯಾಗಲಿದೆ. ಅಷ್ಟು ಮಾತ್ರವಲ್ಲದೆ ಇತರೆ ವಾರ್ಡ್ ಗಳ ಖಾಸಗಿ ವಾಹನಗಳಿಗೆ ಈ ವಲಯದಲ್ಲಿ ಬರುವ ವಾರ್ಡ್ ಗೆ ಪ್ರವೇಶವಿರುವುದಿಲ್ಲ. 

ನಿಯಂತ್ರಿತ ವಲಯದ ಒಳಗೆ ಖಾಸಗಿ ವಾಹನ ಸಂಚಾರಕ್ಕೆ ಅನುಮತಿ ಇರುವುದಿಲ್ಲ. ದಿನಸಿ, ಸಿಲೆಂಡರ್ೌಷಧಿ ಹೊರತು ಬೇರಾವ ಕಾರಣಕ್ಕೆ ಮನೆಯಿಂದ ಹೊರಬರುವಂತಿಲ್ಲ. ಅಗತ್ಯ ಸೇವೆಗಳು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪೊಲೀಸರಿಂದ ಎಮರ್ಜೆನ್ಸಿ ಪಾಸ್ ಪಡೆಯಬೇಕಿದೆ.

ಆರೋಗ್ಯ ಇಲಾಖೆ ಔಟ್-ಪೋಸ್ಟ್ ಆರಂಭಿಸಿ ದಿನಕ್ಕೆರಡು ಬಾರಿ ಜನಸಂಪರ್ಕ ಪತ್ತೆ ಕೆಲಸ ಮಾಡಲಿದೆ.ಶಿಷ್ಟಾಚಾರದ ನಿಯಮಾನುಸಾರ ಇದು ನಡೆಯಲಿದೆ.

ಸೀಲ್‍ಡೌನ್ ವ್ಯಾಪ್ತಿಯೊಳಗೆ ಪ್ರತಿನಿತ್ಯ ಸೋಂಕು ನಿವಾರಣೆ ಸ್ಟ್ರೇ ಆಗಲಿದೆ.ನಗರಸಭೆ ಅಧಿಕಾರಿಗಳು ಈ ಕೆಲಸ ನಡೆಸಲಿದ್ದಾರೆ. ಈ ಪ್ರದೇಶದಲ್ಲಿ ಅಗತ್ಯ ವಸ್ತುಗಳನ್ನು ಮನೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಹೇಳಿದೆ.

SCROLL FOR NEXT