ಬೆಂಗಳೂರು: ಬೆಂಗಳೂರು ನಗರದ 54 ವರ್ಷದ ವ್ಯಕ್ತಿಯೊಬ್ಬರಿಗೆ 14 ದಿನಗಳ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಮಾ.21ರಂದು ಇಂಡೋನೇಷ್ಯಾದಿಂದ ಬಂದಿದ್ದ 54 ವರ್ಷದ ವ್ಯಕ್ತಿಯಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿರಲಿಲ್ಲ. ಆದರೂ ಅವರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಿದ್ದರು. ಏ.4ರಂದು ಅವರ ಕ್ವಾರಂಟೈನ್ ಅವಧಿ ಅಂತ್ಯವಾಗಿತ್ತು.
ಆದರೆ, ನಂತರ ಅವರಿಗೆ ಸೋಂಕು ತಗುಲಿರುವುದ ದೃಢಪಟ್ಟ ಮೇಲೆ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.