ರಾಜ್ಯ

ಲಾಕ್ ಡೌನ್ ಎಫೆಕ್ಟ್; ಧಾರಣೆ ಕುಸಿತ, ಸಂಕಷ್ಟದಲ್ಲಿ ರೇಷ್ಮೆ ಬೆಳೆಗಾರ

Srinivasamurthy VN

ಮಂಡ್ಯ: ಕೊರೋನ ವೈರಸ್‌ನಿಂದಾಗಿ ಲಾಕ್ ಡೌನ್ ಆದ ಬಳಿಕ ರೇಷ್ಮೆ ಗೂಡು ಧಾರಣೆ ಕುಸಿತಗೊಂಡಿದ್ದು ಮಂಡ್ಯಜಿಲ್ಲೆಯ ರೇಷ್ಮೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ೧೬೪೬೨.೬೩ ಹೆಕ್ಟೇರ್ ಪ್ರದೇಶದಲ್ಲಿ ೩೧೦೮೪ ಮಂದಿ ರೈತರು  ರೇಷ್ಮೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದು ತಾಂತ್ರಿಕ ಸೇವಾ ಕೇಂದ್ರದ ಮೊಲಕ ಮಂಡ್ಯ ತಾಲೋಕು ವ್ಯಾಪ್ತಿಯ ೨೪೫೧.೮೯ ಹೇಕ್ಟೆರ್ ಪ್ರದೇಶದಲ್ಲಿ ೪೦೨೧ ಮಂದಿ ರೈತರು, ಮದ್ದೂರು  ತಾಲ್ಲೂಕು ವ್ಯಾಪ್ತಿಯ ೬೧೮೨.೨೨ ಹೆಕ್ಟೇರ್ ಪ್ರದೇಶದಲ್ಲಿ ೧೨೨೮೦ ಮಂದಿ ರೈತರು, ಮಳವಳ್ಳಿ ತಾಲೂಕು ವ್ಯಾಪ್ತಿಯ ೫೭೧೯.೨೪ ಹೆಕ್ಟೆರ್‌ನಲ್ಲಿ ೧೧೯೬೭ ಮಂದಿ ರೈತರು, ಶ್ರೀರಂಗಪಟ್ಟಣ ತಾಲೋಕು ವ್ಯಾಪ್ತಿಯ ೧೧೫೦.೫೨ ಹೆಕ್ಟೆರ್‌ನಲ್ಲಿ ೧೦೪೫ ಮಂದಿ ರೈತರು, ಪಾಂಡವಪುರ  ತಾಲ್ಲೂಕು ವ್ಯಾಪ್ತಿಯ ೪೦೮೪೧ ಹೆಕ್ಟೆರ್‌ನಲ್ಲಿ ೮೧೬ ಮಂದಿ ರೈತರು,ನಾಗಮಂಗಲ ತಾಲೂಕು ವ್ಯಾಪ್ತಿಯ ೧೮೮.೦೫ ಹೆಕ್ಟೆರ್‌ನಲ್ಲಿ೩೬೫ ಮಂದಿ ರೈತರು, ಕೆ.ಆರ್.ಪೇಟೆ ತಾಲೂಕು ವ್ಯಾಪ್ತಿಯ ೩೬೨.೩೦ ಹೆಕ್ಟೆರ್ ನಲ್ಲಿ ೫೯೦ ಮಂದಿ ರೈತರು ರೇಷ್ಮೆ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ಈ  ರೈತರು ಬೆಳೆದ ಬೆಳೆಗೆ ರೇಷ್ಮೆ ಕೃಷಿ ಇಲಾಖೆಯು ರಾಮನಗರ, ಮಳವಳ್ಳಿ, ಕೊಳ್ಳೇಗಾಲ, ಕನಕಪುರದಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಿದೆ. ಜಿಲ್ಲಾ ವ್ಯಾಪ್ತಿಯ ತಾಂತ್ರಿಕ ಸೇವಾ ಕೇಂದ್ರಗಳ ಮೂಲಕ ರೇಷ್ಮೆ ಬೆಳೆಗಾರರು ತಮಗೆ ಅನುಕೂಲವಾಗುವ ಮಾರುಕಟ್ಟೆಗೆ ಮಾರಾಟ  ಮಾಡಿಕೊಂಡು ಬರುತ್ತಿದ್ದಾರೆ.

ಲಾಭವಿರಲಿ ಖರ್ಚಿನ ಬಾಬ್ತು ಸಿಗುತ್ತಿಲ್ಲ; ಬೆಲೆ ಕುಸಿತದಿಂದ ರೈತ ಕಂಗಾಲು
ಲಾಕ್ ಡೌನ್ ಆಗುವ ಮುನ್ನ ರೇಷ್ಮೆಗೂಡಿಗೆ ೧ ಕೆ.ಜಿ.ಗೆ೩೫೦ ರಿಂದ ೪೦೦ ರೂ ಬೆಲೆಯಿತ್ತು ಆದರೆ ಲಾಕ್ ಡೌನ್ ಆದ ಬಳಿಕ ಪರಿಸ್ಥಿತಿ ಬಿಗುಡಾಯಿಸಿದ್ದು ಏಕಾಏಕಿ ಧಾರಣೆ ಕುಸಿತ ಕಂಡಿದೆ,೧ ಕೆ.ಜಿ.ಗೆ ೧೨೦ ರಿಂದ ೧೫೦ರೂಗಳಷ್ಟೇ ಸಿಗುತ್ತಿದೆ,೨ ತಿಂಗಳ ಕಾಲ ತುಂಬಾ ಕಷ್ಟಪಟ್ಟು ಬೆಳೆ  ಬೆಳೆದರೂ ಲಾಭವರಲ್ಲಿ ಖರ್ಚಿನ ಬಾಬ್ತು ಸಿಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ರೇಷ್ಮೆ ಬೆಳೆಗಾರ ಜಯರಾಮ್ ೧ ಎಕ್ಕರೆ ಪ್ರದೇಶದಲ್ಲಿ ೧ ತಿಂಗಳ ಕಾಲ ಇಪ್ಪುನೆರಳೆ ಸೋಪ್ಪನ್ನು ಬೆಳೆದು ಈ ಬೆಳೆಗೆ ನಿರಂತರವಾಗಿ  ನೀರು ಹಾಯಿಸಬೇಕು. ಕಳೆ ಹಾಗೂ ಕೀಟ ನಾಶಕ ಔಷಧಿ ಸಿಂಪಡಿಸಬೇಕು, ೪ ಮೂಟ್ಟೆಉಪ್ಪು,ಕೊಟ್ಟಿಗೆ ಗೊಬ್ಬರ ಹಾಕಿ ಹಾರೈಕೆ ಮಾಡಬೇಕು ಎಂದರು. ತಿಂಗಳ ಬಳಿಕ ಇಪ್ಪುನೆರಳೆ ಸೊಪ್ಪನ್ನು ಕಟಾವ್ ಮಾಡಿ ತಂದು ಖಾಸಗಿ ಚಾಕ್ಕಿ ಕೇಂದ್ರದಲ್ಲಿ ರೇಷ್ಮೆ ಮೊಟ್ಟೆ ಖರಿದಿಸಿ ಅದನ್ನು  ಚಂದ್ರಿಕೆಗೆ ಹಾಕಿ ಹುಳು ಹಣ್ಣಾಗುವವರೆಗೂ ಜೋಪಾನ ಮಾಡಬೇಕು ನಂತರ ಗೂಡು ಬಿಡಿಸಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಬೇಕು ಎಂದು ವಿವರಿಸಿದರು.

೧೦೦ ಮೊಟ್ಟೆಯ ಬೆಲೆ ೨೫೦೦ ರಿಂದ ೩೦೦೦ ರೂ ವರೆಗೆ ಇದ್ದು ಉತ್ತಮ ದ್ವಿತಳಿ ಹುಳುವಿಗೆ ೪ ರಿಂದ ೫ ಸಾವಿರ ದರವಿದೆ,೧ ಮೂಟೆಉಪ್ಪಿಗೆ ೧೨೦೦ ರೂ ನಂತೆ ೪ ಮೂಟೆಉಪ್ಪು,೨೦ ಕೆ.ಜಿ. ಪೇಪರ್, ಸುಣ್ಣ, ದ್ರಾವಕ, ಔಷಧಿ, ಕೂಲಿ, ಸಾಗಣಿಕವೆಚ್ಚ ಅಲ್ಲದೆ ೧ ಚಂದ್ರಿಕೆಗೆ ಪ್ರತಿನಿತ್ಯ ೧೫  ರೂ ನಂತೆ ೧ ತಿಂಗಳ ಬಾಡಿಗೆ ಸೇರಿದಂತೆ ಖರ್ಚು,ವೆಚ್ಚ ಸೇರಿ ೧ ಕೆ.ಜಿ.ರೇಷ್ಮೆ ಬಳೆಯಲು ೨೦೦ ರಿಂದ ೩೦೦ ರೂ ತಗಲುತ್ತದೆ, ೧ ಎಕರೆಯಲ್ಲಿ ಬೆಳೆಯುವ ಎಲೆಯಿಂದ ೧೦೦ ಮೊಟ್ಟೆೆಗಳನ್ನು ಆರೈಕೆ ಮಾಡಬಹುದು ಈ ಪೈಕಿ ಶೇ.೨೫ ರಷ್ಟು ಹುಳು ಸತ್ತು ಹೋದರು ಶೇ.೭೫ ರಷ್ಟು  ಬೆಳೆಯಿಂದ ೫೫ ರಿಂದ ೬೦ ಕೆ.ಜಿ. ಗೂಡನ್ನು ತೆಗೆಯಬಹುದು ಎಂದು ಅವರು ವಿವರಿಸಿದರು. ಲಾಕ್ ಡೌನ್ ಬಳಿಕ ಮಾರುಕಟ್ಟೆಗೆ ಗೂಡು ಸಾಗಿಸಲು ತುಂಬಾ ಕಷ್ಟವಾಗುತ್ತಿದೆ ಅವರು ಕೇಳಿದಷ್ಟು ದುಪಟ್ಟು ಸಾರಿಗೆ ವೆಚ್ಚ ನೀಡಿ ಕೊಂಡೊಯ್ಯಬೇಕು ಮಾರುಕಟ್ಟೆಯಲ್ಲಿ ಸಗಟು ವ್ಯಾಪಾರಿಗಳು  ಕೈಮೊಗ್ಗ. ಹ್ಯಾಂಡ್ ಲೂಮ್ ಸೇರಿದಂತೆ ರೇಷ್ಮೆ ಅವಲಂಭಿತ ಚಟುವಟಿಕೆಗಳು ಬಂದ್ ಆಗಿರುವುದರಿಂದ ಗೂಡನ್ನು ಮೊದಲಿನಂತೆ ಖರೀದಿಸುತ್ತಿಲ್ಲ .ಹಿಗಾಗಿ ರೇಷ್ಮೆ ಬೆಳೆಗೆ ಬೆಲೆ ಇಲ್ಲದಂತಾಗಿದೆ ಎಂದು ನೋವು ತೋಡಿಕೊಂಡರು. ಲಾಕ್ ಡೌನ್ ಬಳಿಕ ರೇಷ್ಮೆ ಬೆಳೆಗೆ ಸೂಕ್ತ  ಬೆಲೆಯಿಲ್ಲದಂತಾಗಿದೆ ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ ಬೆಂಬಲ ಬೆಲೆಯಲ್ಲಿ ರೇಷ್ಮೆ ಖರೀದಿಸಲು ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸಬೇಕೆಂದು ಅವರು ಒತ್ತಾಯಿಸಿದರು.

ಕೆ.ಎಸ್.ಎಂ.ಬಿ.ಮೂಲಕ ರೇಷ್ಮೆ ಖರಿದಿ; ಡಿಡಿ
ಕರ್ನಾಟಕ ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ(ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ)ಮೂಲಕ ಸರ್ಕಾರ ರೇಷ್ಮೆ ಬೆಳೆ ಖರೀದಿಸಲು ಚಿಂತನೆ ನಡೆಸಿದೆ ಎಂದು ರೇಷ್ಮೆ ಮತ್ತು ಕೃಷಿ ಇಲಾಖೆ ಉಪನಿರ್ದೇಶಕರಾದ ಬಿ.ಅರ್. ಪ್ರತಿಭಾ ತಿಳಿಸಿದರು. ರೇಷ್ಮೆ ಬೆಳೆಗಾರರ ಸಂಕಷ್ಟ ಪರಿಸ್ಥಿತಿ  ಬಗ್ಗೆ ಪ್ರತಿಕ್ರಿಯಿಸಿದ ಅವರು ಲಾಕ್ ಡೌನ್ ಬಳಿಕ ರೇಷ್ಮೆ ಆಧಾರಿತ ಚಟುವಟಿಕೆಗಳು ನಡೆಯುತ್ತಿಲ್ಲ, ಈ ಹಿನ್ನಲೆಯಲ್ಲಿ ಸಗಟು ವ್ಯಾಪಾರಿಗಳು ಗೂಡು ಖರಿದಿಸಲು ಮುಂದಾಗುತ್ತಿಲ್ಲ, ಈ ಎಲ್ಲಾ ಅಂಶ ಪರಿಗಣಿಸಿ ಸರ್ಕಾರ ಕೆಎಸ್‌ಎಂಬಿ.ಮೂಲಕ ಖರೀದಿಗೆ ಮುಂದಾಗಿದೆ ಎಂದು ತಿಳಿಸಿದರು. ಪ್ರಸ್ತುತ ಮಳವಳ್ಳಿ ಮಾರುಕಟ್ಟೆಯಲ್ಲಿ ೧ ಕೆ.ಜಿ.ಗೂಡಿಗೆ ಕನಿಷ್ಟ ೨೦೨ ರೂ,ಗರಿಷ್ಟ ೨೮೩ ರೂ,ಸರಾಸರಿ ೨೬೩ ರೂಗೆ ಮಾರಾಟವಾಗುತ್ತಿದೆ,ರಾಮನಗರ ಮಾರುಕಟ್ಟೆಯಲ್ಲಿ ಕನಿಷ್ಟ ೨೮೫,ಗರಿಷ್ಟ ೩೮೦,ಸರಾಸರಿ ೩೧೭ರೂ, ಕೊಳ್ಳೆಗಾಲ ಮಾರುಕಟ್ಟೆಯಲ್ಲಿ ಕನಿಷ್ಟ ೨೫೫,ಗರಿಷ್ಟ ೩೫೫,  ಸರಾಸರಿ ೨೮೮ ರೂಗೆ ಮಾರಾಟವಾಗುತ್ತಿದೆ ಎಂದರು. 

ಬೆಳೆಗಾರರು ದ್ವಿತಳಿ ಮತ್ತು ಮಿಶ್ರತಳಿ ಪದ್ದತಿ ಅಳವಡಿಸಿಕೊಂಡು ಗುಣಮಟ್ಟದ ಬೆಳೆ ಬೆಳೆದರೆ ಉತ್ತಮ ಇಳುವರಿ ಬರುತ್ತದೆ ಖಾಸಗಿ ರೇಷ್ಮೆಬಿತ್ತನೆ ಕೋಠಿ ಕೇಂದ್ರಗಳು ಉತ್ತಮ ಗುಣಮಟ್ಟದ ಮೊಟ್ಟೆ ಹಾಗು ೨ನೇ ಹಂತದ ಚಾಕಿ ಹುಳು ಮಾರಾಟ ಮಾಡುತ್ತಿವೆ ರೇಷ್ಮೆ ಗೂಡು ಸಾಗಿಸಲು  ಅನುವಾಗುವಂತೆ ತಾಂತ್ರಿಕ ಸೇವಾ ಕೇಂದ್ರಗಳಲ್ಲಿ ನೋಂದಾಯಿತ ಎಲ್ಲಾ ಬೆಳೆಗಾರರಿಗೂ ಅನುಮತಿ ಪತ್ರ ನೀಡಲಾಗಿದ್ದು ಸಾಗಾಣಿಕೆಗೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿಸಿದರು. ಒಟ್ಟಾರೆ ಜಿಲ್ಲೆಯ ರೇಷ್ಮೆ ಬೆಳೆಗಾರರ ಹಿತ ಕಾಪಾಡಲು ಇಲ್ಲಾ ರೀತಿಯ ಕ್ರಮಗಳನ್ನು  ಕೈಗೋಳ್ಳಲಾಗುತಿದೆ ಆದಷ್ಟು ಬೇಗ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.

-ನಾಗಯ್ಯ

SCROLL FOR NEXT