ರಾಜ್ಯ

ಕೆಎಸ್ ಆರ್ ರೈಲು ನಿಲ್ದಾಣವನ್ನು ಸ್ವಚ್ಛವಾಗಿಡಲು 15 ಕಿ.ಮೀ ದೂರ ನಡೆದು ಕೆಲಸಕ್ಕೆ ಹೋಗುವ ಹೌಸ್ ಕೀಪಿಂಗ್ ಸಿಬ್ಬಂದಿ!

Nagaraja AB

ಬೆಂಗಳೂರು: ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕ ಸಾರಿಗೆ ಇಲ್ಲದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಸ್ವಚ್ಛವಾಗಿಡಲು 36 ವರ್ಷದ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬರು ಪ್ರತಿದಿನ 15 ಕಿಲೋ ಮೀಟರ್ ದೂರ ನಡೆಯುವಂತಾಗಿದೆ. 

ಹೌಸ್ ಕೀಪಿಂಗ್ ಮೇಲ್ವಿಚಾರಕಿ ಆರ್ ಉಷಾ ಈ ಮಹಿಳೆಯಾಗಿದ್ದಾರೆ. ರೈಲು ನಿಲ್ದಾಣದಿಂದ 7.5 ಕಿಲೋ ಮೀಟರ್ ದೂರದಲ್ಲಿರುವ ನಂದಿನಿ ಲೇಔಟ್ ನ ಜೈ ಭುವನೇಶ್ವನಗರದ ಸ್ಲಂನಲ್ಲಿ ಈಕೆ ವಾಸಿಸುತ್ತಿದ್ದು, ಪ್ರತಿದಿನ 15 ಕಿಲೋ ಮೀಟರ್ ದೂರ ನಡೆಯುವ ಮೂಲಕ ನಿಲ್ದಾಣವನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಮೂವರು ಮಕ್ಕಳ ತಾಯಿಯಾಗಿರುವ ಉಷಾ ಬೆಳಗ್ಗೆ 7-30ಕ್ಕೆ ಮನೆ ಬಿಟ್ಟು, 9 ಗಂಟೆಗೆ ರೈಲು ನಿಲ್ದಾಣ ತಲುಪುತ್ತಾರೆ. ಈ ತಿಂಗಳಿನಿಂದ ಇದು ಅವರ ದಿನಚರಿಯಾಗಿದೆ. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಉಷಾ, ಕರ್ತವ್ಯ ಪ್ರಜ್ಞೆಯಿಂದ ಲಾಕ್ ಡೌನ್ ಅವಧಿಯಲ್ಲಿಯೂ ಕೆಲಸ ಮಾಡುತ್ತಿದ್ದೇನೆ. ಕೆಲಸಕ್ಕೆ ಬರಲೇಬೇಕು ಅಂತಾ ಯಾರೂ ಕೂಡಾ ಒತ್ತಡ ಹೇರಿಲ್ಲ, ಇಂತಹ ಅಪಾಯಕಾರಿ ಸಮಯದಲ್ಲಿ ನಿಲ್ದಾಣವನ್ನು ಸ್ವಚ್ಛವಾಗಿಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದರು. 

ಕನಿಷ್ಟ 50 ಹೌಸ್ ಕೀಪಿಂಗ್ ಮಹಿಳೆಯರು ಈ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಸ್ವಚ್ಛತಾ ಕೆಲಸದ ವೇಳೆಯಲ್ಲಿ ಸುರಕ್ಷತೆಗಾಗಿ ಸೋಪ್ ಮತ್ತು ಸೋಂಕು ನಿವಾರಕ ದ್ರಾವಣವನ್ನು ಹಾಕಿಕೊಳ್ಳುವುದಾಗಿ ಉಷಾ ವಿವರಿಸಿದರು.

ಉಷಾ ಜೊತೆಗೆ ಇತರ ಮೂವರು ಹೌಸ್ ಕೀಪಿಂಗ್ ಹುಡುಗರಾದ ಸಂತೋಷ್, ಭೂಪತಿ ಅವರ ಕಾರ್ಯವನ್ನು ಹೊಗಳಿದ ಮುಖ್ಯ ಸಾರ್ವಜನಿಕ ಸಂರ್ಪಕ ಅಧಿಕಾರಿ ಇ.  ವಿಜಯ, ಈ ಮೂವರು ಕೆಲಸಕ್ಕೆ ಬರಲು ಸಾಧ್ಯವಾಗದಿದ್ದರೂ ಸಹ ಸಂಬಳವನ್ನುಕಡ್ಡಾಯವಾಗಿ ನೀಡಲಾಗುತ್ತದೆ ಆದರೂ, ತಮ್ಮ ಸ್ವಯಂ ಆಯ್ಕೆಯಿಂದ ಅವರು ಬರುತ್ತಾರೆ ಎಂದು ತಿಳಿಸಿದರು. 

SCROLL FOR NEXT