ರಾಜ್ಯ

ಕೋವಿಡ್-19 ನಿರ್ವಹಣೆ: ಸರ್ಕಾರದ ವಿರುದ್ಧ ಕೇಸ್ ದಾಖಲಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ

Sumana Upadhyaya

ಬೆಂಗಳೂರು: ಕೋವಿಡ್-19 ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಸರ್ಕಾರದ ವಿರುದ್ಧ  ರಾಜ್ಯ ಮಾನವ ಹಕ್ಕುಗಳ ಆಯೋಗ ಕೇಸ್ ವೊಂದನ್ನು ದಾಖಲಿಸಿದೆ. ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಗದಗ ಶಾಸಕ ಎಚ್. ಕೆ. ಪಾಟೀಲ್ ಅವರ ದೂರಿನ ಆಧಾರದ ಮೇಲೆ ಈ ಕೇಸ್ ನ್ನು ದಾಖಲಿಸಲಾಗಿದೆ.

ವಿಧಾನಸಭೆ ಸಾರ್ವಜನಿಕ ಲೆಕ್ಕ ಸಮಿತಿ ಅಧ್ಯಕ್ಷರು ಆಗಿರುವ ಎಚ್ ಕೆ ಪಾಟೀಲ್, ಆಸ್ಪತ್ರೆಗಳಲ್ಲಿ ಸರಿಯಾದ ವೇಳೆಗೆ ಹಾಸಿಗೆ , ಅಂಬ್ಯುಲೆನ್ಸ್ ಸಿಗದೆ ಸಾವಿರಾರು ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಎಚ್ .ಕೆ. ಪಾಟೀಲ್ ಆರೋಪಿಸಿದ್ದರು. ಕೋವಿಡ್- 19 ನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದರು.

ಇದು ರಾಜ್ಯಸರ್ಕಾರದ ಜವಾಬ್ದಾರಿ ಆದರೆ, ಇಲ್ಲಿ ಸರ್ಕಾರ ಏನನ್ನೂ ಮಾಡುತ್ತಿಲ್ಲ. ಅಲ್ಲಿ ಭ್ರಷ್ಟಾಚಾರವಿದ್ದು, ಸರ್ಕಾರಿ
ಆಸ್ಪತ್ರೆ ಮತ್ತು ಕೋವಿಡ್ ಸೆಂಟರ್ ಗಳ ಸೇವೆಗಳಲ್ಲಿ ಕೆಟ್ಟ ಫಲಿತಾಂಶ ಬೀರುತ್ತಿದೆ ಎಂದು ಎಚ್ ಕೆ ಪಾಟೀಲ್, ರಾಜ್ಯ
ಮಾನವ ಹಕ್ಕುಗಳ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

ಅಂಬ್ಯುಲೆನ್ಸ್, ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದೆ ಅನೇಕ ಮಂದಿ ಸಾವನ್ನಪ್ಪುತ್ತಿದ್ದಾರೆ. ಮಾಧ್ಯಮಗಳು ಇದನ್ನು ಹೈಲೈಟ್
 ಮಾಡುತ್ತಿವೆ. ಆರೋಗ್ಯ ಕಾರ್ಯಕರ್ತರಿಗೆ ಪಿಪಿಇ ಕಿಟ್ ನೀಡುತ್ತಿಲ್ಲ. ಎಂದು ಪಾಟೀಲ್ ಹೇಳಿದ್ದಾರೆ. ಜುಲೈ 28 ರಂದು
ಮಾನವ ಹಕ್ಕುಗಳ ಆಯೋಗದ ಮುಂದೆ ಹಾಜರಾಗುವಂತೆ ಎಚ್ ಕೆ ಪಾಟೀಲ್ ಗೆ ಸೂಚಿಸಲಾಗಿದೆ.

SCROLL FOR NEXT