ರಾಜ್ಯ

ಕೋವಿಡ್-19 ರೋಗಿಗಳಿಲ್ಲದೆ ಬಾಗಿಲು ಹಾಕಲು ಸಿದ್ದವಾಗಿವೆ ಖಾಸಗಿ ಹೊಟೇಲ್ ಗಳ ಕ್ವಾರಂಟೈನ್ ಕೇಂದ್ರಗಳು

Sumana Upadhyaya

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಸಾಕಾಗದಿದ್ದಾಗ ರೋಗಲಕ್ಷಣಗಳಿಲ್ಲದ ಕೊರೋನಾ ಸೋಂಕಿತರನ್ನು ಖಾಸಗಿ ಹೊಟೇಲ್ ಗಳಲ್ಲಿಡಲು ಸರ್ಕಾರ ಮಾತುಕತೆ ನಡೆಸಿ ಕೆಲವು ಹೊಟೇಲ್ ಗಳನ್ನು ಗೊತ್ತುಮಾಡಲಾಗಿತ್ತು. ಈ ನಿಟ್ಟಿನಲ್ಲಿ 46 ಖಾಸಗಿ ಆಸ್ಪತ್ರೆಗಳು ನಗರದಲ್ಲಿರುವ ಹಲವು ಹೊಟೇಲ್ ಗಳ ಜೊತೆ ಒಪ್ಪಂದ ಮಾಡಿಕೊಂಡು ಅಲ್ಲಿಗೆ ಬಂದ ರೋಗಿಗಳನ್ನು ಕೋವಿಡ್ ಕೇರ್ ಸೆಂಟರ್ ಗೆ ಕಳುಹಿಸುವುದು ಎಂದು ಮಾತುಕತೆಯಾಗಿತ್ತು. ಬಿಬಿಎಂಪಿ ಈ ನಿಟ್ಟಿನಲ್ಲಿ ನಗರದ ಹಲವು ಸ್ಟಾರ್ ಹೊಟೇಲ್ ಗಳನ್ನು ನಿಗದಿಪಡಿಸಿತ್ತು.

ಆದರೆ ಯಾವಾಗ ಹೋಂ ಕ್ವಾರಂಟೈನ್ ಆಯ್ಕೆ ಸರ್ಕಾರದಿಂದ ನೀಡಲಾಯಿತೋ ಖಾಸಗಿ ಹೊಟೇಲ್ ಗಳಲ್ಲಿ ಕ್ವಾರಂಟೈನ್ ಇರುವವರ ಸಂಖ್ಯೆ ತೀರಾ ಕಡಿಮೆಯಾಗಿ ಇದೀಗ ಬಾಗಿಲು ಮುಚ್ಚುವ ಪರಿಸ್ಥಿತಿಗೆ ಬಂದಿವೆ.

ಬಿಬಿಎಂಪಿಯ ಅಂಕಿಅಂಶ ಪ್ರಕಾರ ಖಾಸಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ 2,721 ಬೆಡ್ ಗಳನ್ನು ನೀಡಲಾಗಿದೆ. ಅವುಗಳಲ್ಲಿ 535 ಬೆಡ್ ಗಳು ಮಾತ್ರ ಇದುವರೆಗೆ ಭರ್ತಿಯಾಗಿವೆ. ಅಂದರೆ ಕೇವಲ ಶೇಕಡಾ 22ರಷ್ಟು ಮಾತ್ರ. ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂ ಅಸೋಸಿಯೇಷನ್ (ಪಿಎಚ್ ಎಎನ್ ಎ) ಹೇಳುವ ಪ್ರಕಾರ ಶೇಕಡಾ 10ವರೆಗೆ ಬಂದರೆ ಕೋವಿಡ್ ಕೇರ್ ಸೆಂಟರ್ ಗಳನ್ನು ಮುಚ್ಚಲಾಗುತ್ತದೆ. 

ರೋಗಲಕ್ಷಣಗಳಿಲ್ಲದವರಿಗೆ ಹೋಂ ಕ್ವಾರಂಟೈನ್ ಆಯ್ಕೆ ನೀಡಿರುವುದರಿಂದ ಜನರು ಹೊಟೇಲ್ ಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಬಹುತೇಕ ಕೋವಿಡ್ ಕೇರ್ ಸೆಂಟರ್ ಗಳಾಗಿದ್ದ ಖಾಸಗಿ ಹೊಟೇಲ್ ಗಳು ಖಾಲಿಯಾಗಿವೆ. ರೋಗಿಗಳು ತಮ್ಮ ಮನೆಗಳಲ್ಲಿಯೇ ಪ್ರತ್ಯೇಕವಾಗಿರಲು ಇಷ್ಟಪಡುತ್ತಾರೆ. ಹಿರಿಯ ನಾಗರಿಕರು ಮಾತ್ರ ಸದ್ಯ ಹೊಟೇಲ್ ಗೆ ಬರುತ್ತಾರೆ ಎಂದು ಪಿಎಚ್ ಎಎನ್ಎ ಅಧ್ಯಕ್ಷ ಡಾ ಆರ್ ರವೀಂದ್ರ ಹೇಳುತ್ತಾರೆ.

SCROLL FOR NEXT