ವರ್ತೂರು ಪ್ರಕಾಶ್ 
ರಾಜ್ಯ

ವರ್ತೂರು ಪ್ರಕಾಶ್ ಅಪಹರಣದ ಹಿಂದೆ ಭೂಗತ ಲೋಕದ ನಂಟು: ರವಿ ಪೂಜಾರಿ ಆಪ್ತನ ಬಂಧನ

ಕೋಲಾರದ ಮಾಜಿ ಶಾಸಕ ವರ್ತೂರ್ ಆರ್ ಪ್ರಕಾಶ್ ಅವರ ಅಪಹರಣ ಪ್ರಕರಣವನ್ನು ಬೇಧಿಸಿರುವ ಕೋಲಾರದ ಪೋಲೀಸರು ಪ್ರಧಾನ ಆರೋಪಿ ಕವಿರಾಜ್ ಎನ್ನುವವನನ್ನು ಬಂಧಿಸಿದ್ದಾರೆ.

ಕೋಲಾರ: ಕೋಲಾರದ ಮಾಜಿ ಶಾಸಕ ವರ್ತೂರ್ ಆರ್ ಪ್ರಕಾಶ್ ಅವರ ಅಪಹರಣ ಪ್ರಕರಣವನ್ನು ಬೇಧಿಸಿರುವ ಕೋಲಾರದ ಪೋಲೀಸರು ಪ್ರಧಾನ ಆರೋಪಿ ಕವಿರಾಜ್ ಎನ್ನುವವನನ್ನು ಬಂಧಿಸಿದ್ದಾರೆ. ಕವಿರಾಜ್ ಭೂಗತ ಪಾತಕಿ ರವಿ ಪೂಜಾರಿ ಆಪ್ತನಾಗಿದ್ದು ಬೆಂಗಳೂರಿನಲ್ಲಿ ನಡೆದ ಶಬ್ನಮ್ ಡೆವಲಪರ್ಸ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವರ್ತೂರ್ ಪ್ರಕಾಶ್ ಅಪಹರಣ ಪ್ರಕರಣವು ಕೋಲಾರ ಪೊಲೀಸರಿಗೆ ಸವಾಲಿನದಾಗಿತ್ತು. ಇದನ್ನು ಬೆಳ್ಲಂದೂರು ಪೋಲೀಸರು ತಮ್ಮ ಠಾಣೆಯಿಂದ ಕೋಲಾರ ಠಾಣೆಗೆ ವರ್ಗಾಯಿಸಿದ ನಂತರ ಐಜಿಪಿ (ಸೆಂಟ್ರಲ್ ರೇಂಜ್) ಸೀಮಂತ್ ಕುಮಾರ್ ಸಿಂಗ್ ಅವರು ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ ತನಿಖಾ ತಂಡವನ್ನು ಸ್ಥಾಪಿಸಿದರು.

ಈ ತಂಡ ತಾಂತ್ರಿಕ ಅಂಶಗಳು ಸೇರಿದಂತೆ ವಿವಿಧ ಕೋನಗಳಲ್ಲಿ ತನಿಖೆ ನಡೆಸಿ ತಮಿಳುನಾಡಿನ ವಿರುಡುನಗರದಿಂದ ಸುಮಾರು 20 ಕಿ.ಮೀ ದೂರದಲ್ಲಿ ಅಪಹರಣಕ್ಕೆ ಬಳಸಿದ್ದ ಕಾರ್ ಅನ್ನು ಚೇಸ್ ಮಾಡಿದ ನಂತರ  ಪ್ರಧಾನ ಆರೋಪಿ ಕವಿರಾಜ್ ನ್ನು ಬಂಧಿಸುವಲ್ಲಿ ಯಶಸ್ವಿಯಾಯಿತು. ಅಪಹರಣಕಾರನ ಬಂಧನಕ್ಕೆ ಇನ್ಸ್‌ಪೆಕ್ಟರ್‌ಗಳಾದ ಅಂಜನಪ್ಪ, ಸೂರ್ಯ ಪ್ರಕಾಶ್, ರಂಗಸ್ವಾಮಯ್ಯ, ರಾಘವೇಂದ್ರ ಪ್ರಕಾಶ್, ಶಿವಶಂಕರ್ ಮತ್ತು ಪಿಎಸ್‌ಐ ಅಣ್ಣಯ್ಯ, ಕೇಶವಮೂರ್ತಿ, ಪ್ರದೀಪ್ ಮತ್ತಿತರರು ಸತತ ೨೪ ಗಂಟೆ ಕೆಲಸ ಮಾಡಿದ್ದಾರೆ. 

ಎರಡು ದಿನಗಳ ಹಿಂದೆ, ಹಲವಾರು ವ್ಯಕ್ತಿಗಳನ್ನು ಪ್ರಶ್ನಿಸಲಾಗಿದ್ದರೂ, ಈ ಪ್ರಕರಣ ರವಿ ಪೂಜಾರಿಗೆ ಲಿಂಕ್ ಆಗುವವರೆಗೆ ಇದೊಂದು ಸುಲಿಗೆ, ವ್ಯವಹಾರದ ವೈಷಮ್ಯ ಅಥವಾ ಇನ್ನಾವುದೇ ಸಮಸ್ಯೆಗಳಿಂಡಾದ ಅಪಹರಣ ಎಂದೇ ಭಾವಿಸಲಾಗಿತ್ತು. ಆದರೆ ಕವಿರಾಜ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲೀಸರು ಪ್ರಕರಣದಲ್ಲಿ ಭೂಗತ ಲೋಕದ ನಂಟನ್ನು ಕಂಡುಕೊಂಡಿದ್ದಾರೆ. ಇದೀಗ ಉಳಿದ ಆರೋಪಿಗಳನ್ನು ಅವರ ಸ್ಥಳಗಳನ್ನು ಗುರುತಿಸಿದ ಕೂಡಲೇ ಬಂಧಿಸಲಾಗುವುದು ಎಂದು ಪೋಲೀಸ್ ಅಧಿಕಾರಿ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.  ಅಲ್ಲದೆ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಿದ ನಂತರ ಚಿತ್ರ ಸ್ಪಷ್ಟವಾಗುತ್ತದೆ. ಕವಿರಾಜ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ವಶಕ್ಕೆ ತೆಗೆದುಕೊಳ್ಲಲಾಗಿದೆ.  ಹೊಸೂರು ಮೂಲದ ಕವಿರಾಜ್ ಬೆಂಗಳೂರಿನಲ್ಲಿ ಸಕ್ರಿಯರಾಗಿದ್ದನಲ್ಲದೆ ಕನಿಷ್ಠ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ತನ್ನನ್ನು ಅಪಹರಿಸಿ 30 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರೆಂದು ಮಾಜಿ ಶಾಸಕ ಪ್ರಕಾಶ್ ಡಿಸೆಂಬರ್ 2 ರಂದು ಬೆಳ್ಳಂದೂರು ಪೊಲೀಸರಲ್ಲಿ ದೂರು ಸಲ್ಲಿಸಿದ್ದರು.  ಅದರಂತೆ ನವೆಂಬರ್ 25 ರಂದು ಅವರು ಮತ್ತು ಅವರ ಚಾಲಕ ಸುನೀಲ್ತಮ್ಮ ಎಸ್ಯುವಿಯಲ್ಲಿ ಕೋಲಾರದ ಕಡೆ ಹೋಗುತ್ತಿದ್ದಾಗ ಬೇಗಿ ಹೊಸಹಳ್ಳಿಯಲ್ಲಿರುವ ತಮ್ಮ ತೋಟದ ಮನೆಯಿಂದ ಹೊರಟಿದ್ದ ಅವರನ್ನು ಸಂಜೆ 7 ಗಂಟೆ ಸುಮಾರಿಗೆ ಎಂಟು ಮಂದಿಮಾರಕ ಆಯುಧಗಳಿಂದ ಬೆದರಿಸಿ ಕಾಲು ಮತ್ತು ಕೈಗಳನ್ನು ಕಟ್ಟಿ ಅಪಹರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

SCROLL FOR NEXT