ರಾಜ್ಯ

ಸವದಿ ಮೆಣಸಿನಕಾಯಿ ಬೆಳೆಗಾರರಿಗೆ ಬಂಪರ್ ಬೆಲೆ: ಪ್ರತಿ ಕ್ವಿಂಟಾಲ್ ಗೆ 41 ಸಾವಿರ ರು.!

Shilpa D

ಗದಗ: ರಾಜ್ಯದಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಕಣ್ಣೀರು ಸುರಿಸುತ್ತಿದ್ದಾರೆ, ಆದರೆ ಸವದಿ ತಾಲೂಕಿನ ರೋಣದಲ್ಲಿ ರೈತನೊಬ್ಬ ಬೆಳೆದ ಮೆಣಸಿನಕಾಯಿಗೆ ಗದಗ ಎಪಿಎಂಸಿಯಲ್ಲಿ ಕ್ವಿಂಟಾಲ್ ಗೆ 41,101 ರು ಬೆಲೆ ಸಿಕ್ಕಿದೆ.

ಈ ವರ್ಷದ ಆರಂಭದಲ್ಲಿ ಕ್ವಿಂಟಾಲ್‌ಗೆ 35,000 ರುಪಾಯಿಯಷ್ಟಿದ್ದ ಕಾರಣ ಇಲ್ಲಿ ಎಪಿಎಂಸಿಯಲ್ಲಿ ಸರಕುಗಳಿಗೆ ಇದುವರೆಗಿನ ಅತ್ಯಧಿಕ ಬೆಲೆ ಇದಾಗಿದೆ.

ಸವದಿಯ ಪ್ರಕಾಶ್ ಜೋಗರಡ್ಡಿ ಅವರ ಮೆಣಸಿನಕಾಯಿ ಬೆಳೆಗೆ ಇಷ್ಟೊಂದು ಬೆಲೆ ನಿರೀಕ್ಷಿಸಿರಲಿಲ್ಲ, ಶನಿವಾರ ಮಾರುಕಟ್ಟೆಗೆ ಜೋಗರಡ್ಡಿ ಮೆಣಸಿನಕಾಯಿ ಕೊಂಡೊಯ್ದಿದ್ದರು,  ಇ- ಟೆಂಡರಿಂಗ್ ವೇಳೆ ಮೆಣಸಿನಕಾಯಿ 41 ಸಾವಿರದ 101 ರು ಗೆ ಹರಾಜಾಗಿರುವುದಾಗಿ ಎಪಿಎಂಸಿ ಅಧಿಕಾರಿಗಳು ತಿಳಿಸಿದರು, ಇದರಿಂದ ಅಲ್ಲಿ ನೆರೆದಿದ್ದ ರೈತರಿಗೆ ಸಂತೋಷವಾಯಿತು, ಜೋಗರಡ್ಡಿ ಅವರು ಸಿಹಿ ಹಂಚಿದರು.

ಜೋಗರೆಡ್ಡಿ ತಮ್ಮ ಎರಡು ಎಕರೆ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆದಿದ್ದರು. ಬೆಲೆ ಕಡಿಮೆಯಾಗುವ ಭೀತಿಯಿಂದ ಉಳಿದ ರೈತರು ನವೆಂಬರ್ ನಲ್ಲಿ ತಮ್ಮ ಬೆಳೆ ಮಾರಾಟ ಮಾಡಿದ್ದರು, ಆದರೆ ಪ್ರಕಾಶ್ 20 ದಿನ ಕಾದರು, ಇದರಿಂದ ಅವರಿಗೆ ಹೆಚ್ಚಿನ ಲಾಭ ದೊರೆಯಿತು. ಐತಿಹಾಸಿಕ ದಾಖಲೆ ಬೆಲೆಗೆ ಮೆಣಸಿನಕಾಯಿ ಮಾರಾಟವಾಯಿತು. ನವೆಂಬರ್‌ನಲ್ಲಿ ಬೆಳೆ ಮಾರಾಟ ಮಾಡಿದ ಇತರ ರೈತರಿಗೆ 25 ಸಾವಿರ ರೂ.ಗಳಿಂದ 28,000 ರೂ.ದೊರಕಿತು.

ನಾನು ಉತ್ತಮ ಬೆಲೆ ಪಡೆಯುತ್ತೇನೆಂದು ನನಗೆ ತಿಳಿದಿತ್ತು, ಹೆಚ್ಚಿನ ಬೆಲೆಯನ್ನು ಪಡೆಯುವ ಬಗ್ಗೆ ಕನಿಷ್ಠ ಸುಳಿವು ಇತ್ತು, ಐಟಿಐನಲ್ಲಿ ಪಿಟ್ಟರ್ ಮಾಡಿರುವ ಪ್ರಕಾಶ್  ಕೊಪ್ಪಳ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು, 2015ರಲ್ಲಿ ಪ್ರಕಾಶ್ ಜೋಗರಡ್ಡಿ ಕೃಷಿ ಆರಂಭಿಸಿದರು.

SCROLL FOR NEXT