ರಾಜ್ಯ

ಬಡ್ತಿ ಹುದ್ದೆಗಳಲ್ಲಿ ಮೀಸಲಾತಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್ ನೊಟೀಸ್ 

Sumana Upadhyaya

ಬೆಂಗಳೂರು: ಸಂವಿಧಾನ ವಿಧಿ 371(1)ಕ್ಕೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೊಟೀಸ್ ಜಾರಿ ಮಾಡಿದೆ. ಈ ತಿದ್ದುಪಡಿಯಲ್ಲಿ ಹೈದರಾಬಾದ್-ಕರ್ನಾಟಕ ಭಾಗದ ಜನರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಲಾಗುತ್ತದೆ.

2013ರಲ್ಲಿ ಪ್ರಕಟಗೊಂಡ ಕರ್ನಾಟಕ ಸಾರ್ವಜನಿಕ ಉದ್ಯೋಗ(ಹೈದರಾಬಾದ್-ಕರ್ನಾಟಕ ವಲಯಗಳ ನೇಮಕಾತಿಯಲ್ಲಿ ಮೀಸಲಾತಿ) ತಿದ್ದುಪಡಿಯನ್ನು ಪ್ರಶ್ನಿಸಿ ಸಹಾಯಕ ಎಂಜಿನಿಯರ್ ಸಿ ಕೆ ಜಸ್ಟಸ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ನೊಟೀಸ್ ಜಾರಿ ಮಾಡಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಹುದ್ದೆಗಳ ಗುರುತಿಸುವಿಕೆಗೆ ಸಂಬಂಧಪಟ್ಟಂತೆ ಅವರು ಅರ್ಜಿ ಸಲ್ಲಿಸಿದ್ದಾರೆ. ಮೀಸಲಾತಿಯ ಆಧಾರದ ಮೇಲೆ ಹುದ್ದೆಗಳಲ್ಲಿ ಬಡ್ತಿಯನ್ನು ತುಂಬಲು ಯೋಜಿಸುತ್ತಿರುವ ಕೆಪಿಸಿಎಲ್, ಸಂವಿಧಾನ ವಿಧಿ 371(ಜೆ) 2012ನೇ ಸಂವಿಧಾನ ಕಾಯ್ದೆಯ ಮೂಲಕ(98ನೇ ತಿದ್ದುಪಡಿ) ಸೇರಿಸಲಾಗಿದೆ ಎಂದು ಹೇಳಿದ್ದಾರೆ.

ಈ ತಿದ್ದುಪಡಿಯ ಬಲದ ಮೇರೆಗೆ ಹೈದರಾಬಾದ್-ಕರ್ನಾಟಕ ಪ್ರದೇಶದ ಜನರ ಪರವಾಗಿ ಮೀಸಲಾತಿ ಒದಗಿಸಲು ಕೆಲವು ನಿಯಮಗಳನ್ನು ಹೊರಡಿಸಿರುವ  ರಾಜ್ಯಪಾಲರಿಗೆ ರಾಷ್ಟ್ರಪತಿಗಳು ಕೆಲವು ಜವಾಬ್ದಾರಿಗಳನ್ನು ವಹಿಸಿದ್ದಾರೆ. ಸಂವಿಧಾನ ವಿಧಿ 371 ಜೆ ಅಡಿಯಲ್ಲಿ ಒದಗಿಸಲಾದ ಮೀಸಲಾತಿಗೆ ಸಂಬಂಧಿಸಿದಂತೆ, ಬಡ್ತಿ ಹುದ್ದೆಗಳಲ್ಲಿ ಬ್ಯಾಕ್‌ಲಾಗ್ ಪರಿಕಲ್ಪನೆ, ಪರಿಣಾಮಕಾರಿ ಹಿರಿತನ ಮತ್ತು ಹಿಂದಿನ ಅವಧಿಯ ಬಡ್ತಿಗಳು ಕಾನೂನಿನಲ್ಲಿ ಅನುಮತಿಸಲಾಗುವುದಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.

SCROLL FOR NEXT