ಸಾಂದರ್ಭಿಕ ಚಿತ್ರ 
ರಾಜ್ಯ

ಮಂಡ್ಯ: ಹಳೇ ವೈಷಮ್ಯ ಹಿನ್ನಲೆ ಚಾಕುವಿನಿಂದ ಇರಿದು ಎಳನೀರು ವ್ಯಾಪಾರಿ ಹತ್ಯೆ

ಹಳೇ ವೈಷಮ್ಯದ ಹಿನ್ನಲೆಯಲ್ಲಿ ಎಳನೀರು ವ್ಯಾಪಾರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮದ್ದೂರು ತಾಲ್ಲೂಕಿನ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದೆ.

ಮಂಡ್ಯ: ಹಳೇ ವೈಷಮ್ಯದ ಹಿನ್ನಲೆಯಲ್ಲಿ ಎಳನೀರು ವ್ಯಾಪಾರಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮದ್ದೂರು ತಾಲ್ಲೂಕಿನ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ಕಳೆದ ಸೋಮವಾರ ರಾತ್ರಿ ನಡೆದಿದೆ.

ಚಿಕ್ಕಮರಿಗೌಡನ ದೊಡ್ಡಿ ಗ್ರಾಮದ  ಶಿವು(21) ಎಂಬಾತನೇ  ಮೃತಪಟ್ಟಿರುವ  ಎಳನೀರು ವ್ಯಪಾರಿಯಾಗಿದ್ದು, ದೊಡ್ಡರಸಿನಕೆರೆ ಗ್ರಾಮದ  ಶ್ರೀಧರ್ ನಿಂದ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ.

ಘಟನೆ ಹಿನ್ನೆಲೆ: ಎಳನೀರು ವ್ಯಾಪಾರಿಯಾಗಿದ್ದ ಶಿವು ಕೆಲಸ ಮುಗಿಸಿ ಮನೆಗೆ ವಾಪಸ್ಸು ಬರುತ್ತಿದ್ದ ವೇಳೆ ದೊಡ್ಡರಸಿನಕೆರೆಯ ಬಳಿ ಚಾಕುವಿನಿಂದ ಇರಿದು ಶ್ರೀಧರ್ ಪರಾರಿಯಾಗಿದ್ದಾನೆ, ಚಾಕು ಇರಿತದಿಂದ ತೀವ್ರ ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಶಿವು ಅವರನ್ನು ಸಮೀಪದ ಭಾರತೀನಗರ ಜಿ,ಮಾದೇಗೌಡ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಮೊನ್ನೆ(ಭಾನುವಾರ) ಆತ್ಮಲಿಂಗೇಶ್ವರ ಜಾತ್ರೆಯಲ್ಲಿಯೂ ಸಹ ಕ್ಷುಲ್ಲಕ ಕಾರಣಕ್ಕೆ  ಶ್ರೀಧರ್ ಮತ್ತು ಶಿವು ನಡುವೆ ಜಗಳ ನಡೆದಿತ್ತು ಎನ್ನಲಾಗಿದ್ದು, ಸೇಡಿಗಾಗಿ ಇಂದು(ಸೋಮವಾರ) ರಾತ್ರಿ ಆರೋಪಿ ಶ್ರೀಧರ್ ದೊಡ್ಡರಸಿನಕೆರೆಯ ಮಾರ್ಗಮಧ್ಯೆ ಶಿವನೊಂದಿಗೆ ಜಗಳ ತೆಗೆದು ಚಾಕುವಿನಿಂದ  ಇರಿದಿದ್ದಾನೆ  ಎಂದು ಆರೋಪಿಸಲಾಗಿದೆ.

ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ತಂಡ ರಚನೆ ಮಾಡಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕದ ನಿರ್ಬಂಧ ಲೆಕ್ಕಿಸದೇ ಭಾರತ ರಷ್ಯಾ ತೈಲ ಆಮದು ಮುಂದುವರಿಸಲಿದೆ: ಸುಜಾತಾ ಶರ್ಮಾ

ಭಾರತದ ಮೊದಲ ಬುಲೆಟ್ ರೈಲಿನ 'ಫಸ್ಟ್ ಲುಕ್' ರಿಲೀಸ್‌: ಸಂಚಾರ ಯಾವಾಗಿಂದ ಆರಂಭ?

Bengaluru Rains: ವರುಣಾರ್ಭಟಕ್ಕೆ ನದಿಯಂತಾದ ರಸ್ತೆಗಳು; 5 ದಿನ ಮಳೆ ಸಾಧ್ಯತೆ, ತಾಪಮಾನ ಗಣನೀಯ ಇಳಿಕೆ: ಹವಾಮಾನ ಇಲಾಖೆ

Indian Stock Market: ಚೇತರಿಸಿಕೊಂಡ Sensex 77 ಅಂಕ ಏರಿಕೆ, ರೂಪಾಯಿ ಮೌಲ್ಯ 96.35ಕ್ಕೆ ಕುಸಿತ, ಕಚ್ಚಾತೈಲ ಬೆಲೆ ಏರಿಕೆ!

ಇರಾನ್ ಮತ್ತು ಅಮೆರಿಕ ಮಧ್ಯೆ ಮತ್ತೆ ಯುದ್ಧ 2.0 ಶುರು?: ಸೌದಿಗೆ 8,000 ಸೈನಿಕರು, 16 JF-17 ಯುದ್ಧ ವಿಮಾನ ಕಳುಹಿಸಿದ Pak

SCROLL FOR NEXT