ರಾಜ್ಯ

ಶೈಕ್ಷಣಿಕ ಸಂಸ್ಥೆಗಳ ಪ್ರಜಾಪ್ರಭುತ್ವವನ್ನು ಸರ್ಕಾರ ಹೈಜಾಕ್ ಮಾಡುವಂತಿಲ್ಲ: ಅರುಂಧತಿ ನಾಗ್

Manjula VN

ಬೆಂಗಳೂರು: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿ ಸೋಮವಾರ ನಗರದ ವಿವಿಧ ಸಂಘಟನೆಗಳು, ಕಾರ್ಯಕರ್ತರು ಪುರಭವನ, ಆನಂದ್ ರಾವ್ ವೃತ್ತ ಸೇರಿದಂತೆ ವಿವಿಧೆಡೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಭಾನುವಾರ ಸಂಜೆ ಜೆಎನ್'ಯು ಆವರಣದ ಹಾಸ್ಟಲ್ ಗೆ ಕೆಲವು ಕಿಡಿಗೇಡಿಗಳು ನುಗ್ಗಿ ಜೆಎನ್'ಯು ವಿದ್ಯಾರ್ಥಿಗಳ ಸಂಘಟನೆಯ ನಾಯಕಿ ಆಯುಷಿಘೋಷ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದನ್ನು ಖಂಡಿಸಿ ನಗರದ ಪುರಭವನದ ಮುಭಾಗದ ಎಸ್ಎಫ್ಐ, ಎಐಡಿಎಸ್ಓ, ವಿವಿಧ ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿಗಳು ರಂಗಕರ್ಮಗಿಳು, ಪುರಭವನದ ಎದುರು ಧರಣಿ ನಡೆಸಿದರು, ಕೋಡಿಹಳ್ಳಿ ಚಂದ್ರಶೇಖರ್, ನಟಿ ಅರುಂಧತಿ ನಾಗ್ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. 

ಪ್ರತಿಭಟನೆ ವೇಳೆ ಮಾತನಾಡಿರುವ ಅರುಂಧತಿ ನಾಗ್ ಅವರು, ಒಗ್ಗಟ್ಟು ಪ್ರದರ್ಶಿಸಲು ನಾನಿಲ್ಲಿಗೆ ಬಂದಿದ್ದೇನೆ. ಭಾರತದ ಪ್ರಜಾಪ್ರಭುತ್ವನ್ನು ಸರ್ಕಾರ ಹೈಜಾಕ್ ಮಾಡುವಂತಿಲ್ಲ ಎಂಬ ಸಂದೇಶವನ್ನು ರವಾನಿಸಲು ಬಂದಿದ್ದೇನೆ. ಪ್ರಮುಖವಾಗಿ ಶಿಕ್ಷಣ ಸಂಸ್ಥೆಗಳ ಮೇಲೆ. ಜೆಎನ್'ಯು ಹಿಂಸಾಚಾರ ಘಟನೆ ದೊಡ್ಡ ಎಚ್ಚರಿಕೆಯ ಗಂಟೆಯಾಗಿದ್ದು, ಇದರ ವಿರುದ್ಧ ದನಿ ಎತ್ತಬೇಕಿದೆ ಎಂದು ಹೇಳಿದ್ದಾರೆ. 

SCROLL FOR NEXT