ರಾಜ್ಯ

ಬೆಂಗಳೂರು ವಿ.ವಿ ಸಂವಹನ ವಿಭಾಗದಿಂದ ಟಿ.ವಿ ಲೋಕಾರ್ಪಣೆ, ಸ್ಟುಡಿಯೋ ಉದ್ಘಾಟನೆ 

Sumana Upadhyaya

ಬೆಂಗಳೂರು: ಮಾಧ್ಯಮರಂಗ ಇಂದು ಬೃಹತ್ ಉದ್ಯಮವಾಗಿ ಬೆಳೆದಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ವಿಭಾಗದ ಸರ್ವತೋಮುಖ ಬೆಳವಣಿಗೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದಿಂದ ಟಿ.ವಿ ಮತ್ತು ಸ್ಟುಡಿಯೋಗಳು ಉದ್ಘಾಟನೆಯಾಗುತ್ತಿದೆ ಎಂದು ಬೆಂಗಳೂರು ವಿ.ವಿ ಕುಲಪತಿ ಪ್ರೊ ಕೆ ಆರ್ ವೇಣುಗೋಪಾಲ್ ಹೇಳಿದರು. 


ಅವರು ನಿನ್ನೆ ವಿ.ವಿಯ ಸಂವಹನ ವಿಭಾಗದ BUB ಟಿ ವಿ ಲೋಕಾರ್ಪಣೆ ಮತ್ತು ಸ್ಟುಡಿಯೊ ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.


ವಿ.ವಿಯ ಸಂವಹನ ಸ್ನಾತಕೋತ್ತರ ವಿಭಾಗದಲ್ಲಿ ಜಾಹಿರಾತು ಮತ್ತು ಸಾರ್ವಜನಿಕ ಸಂಪರ್ಕ, ಮಾಧ್ಯಮ ಅಧ್ಯಯನ, ಕಾರ್ಪೊರೇಟ್ ಸಂವಹನ ಕೋರ್ಸ್ ಗಳ ಜೊತೆಗೆ ಸಿನಿಮಾ ಸಂವಹನ, ಅಂತರಾಷ್ಟ್ರೀಯ ಸಂವಹನ, ಇತರೆ ಹೊಸ ಕೋರ್ಸುಗಳನ್ನು ಪ್ರಾರಂಭಿಸಲು ಅನುಮೋದನೆ ಆಗಿದೆ ಎಂದರು. ಮತ್ತು ಸಂವಹನ ಭವನಕ್ಕಾಗಿ ಈಗಾಗಲೇ ಐದು ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದೇವೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥರು ಮತ್ತು ಬೆಂ.ವಿ.ವಿ.ಕುಲಸಚಿವ ಡಾ:ಬಿ.ಕೆ.ರವಿ, ಮಾಧ್ಯಮ ರಂಗದಲ್ಲಿ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಮಾಧ್ಯಮ ವಿದ್ಯಾರ್ಥಿಗಳು ಕೆಲಸ ಮಾಡಬೇಕು ಮತ್ತು ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಕಾರಾತ್ಮಕ ವಿಷಯಗಳನ್ನು ಮಾತ್ರ ವರದಿ ಮಾಡಬೇಕು ಎಂದು ಹೇಳಿದರು.

SCROLL FOR NEXT