ರಾಜ್ಯ

ತ್ಯಾಜ್ಯ ಮರುಬಳಕೆಯಿಂದ ಪೆನ್ನು ತಯಾರಿಸಿ ಪ್ರಶಸ್ತಿ ಗೆದ್ದ ಬೆಂಗಳೂರಿನ ಬಾಲಕ 

Sumana Upadhyaya

ಬೆಂಗಳೂರು:ಸ್ವೀಡನ್ ನ ಹವಾಮಾನ ಕಾರ್ಯಕರ್ತ ಗ್ರೆಟಾ ಥನ್ ಬರ್ಗ್ ಬಗ್ಗೆ ನೀವೆಲ್ಲಾ ಕೇಳಿರಬಹುದು. ಹವಾಮಾನ ಬದಲಾವಣೆ ಮತ್ತು ಪರಿಸರ ರಕ್ಷಣೆ ಕುರಿತು ಜಗತ್ತಿನಾದ್ಯಂತ ಸುತ್ತಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಾರೆ.


ಇಲ್ಲಿ ಬೆಂಗಳೂರಿನ 9 ವರ್ಷದ ಬಾಲಕನೊಬ್ಬ ಪ್ಲಾಸ್ಟಿಕ್ ಮುಕ್ತ ಜೀವನ ಮತ್ತು ತ್ಯಾಜ್ಯ ಮರುಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸುವ ಯತ್ನ ಮಾಡುತ್ತಿದ್ದಾನೆ.


ಹೇಗೆಂದು ಕೇಳುತ್ತೀರಾ, ಶರನವ್ಯ ಎಸ್ ಶ್ರೀಶ್ ಎಂಬ ಬಾಲಕ ಮರದ ಪೆನ್ನು ತಯಾರಿಸಿದ್ದಾನೆ. ಅದರ ಹೊರಗಿನ ಭಾಗ ಮಾಡಿದ್ದು ಮಣ್ಣು ಮತ್ತು ಪೆನ್ಸಿಲ್ ಸಿಪ್ಪೆಗಳಿಂದ. ಹೀಗೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ವಿನೂತವಾಗಿ ಮಾಡಿದ ಅನ್ವೇಷಣೆ ಗುರುತಿಸಿ ಅವಿಷ್ಕಾರ್ ರಾಷ್ಟ್ರೀಯ ಮ್ಯಾಕಥಾನ್ ಪ್ರಶಸ್ತಿ ಇವನಿಗೆ ಲಭಿಸಿದೆ. ಕಳೆದ 12ರಂದು ದೆಹಲಿಯಲ್ಲಿ ನಡೆದ ಮಕ್ಕಳ ಹವಾಮಾನ ಸಮ್ಮೇಳನದಲ್ಲಿ ತನ್ನ ವಿನೂತನ ಆವಿಷ್ಕಾರವನ್ನು ಶರನವ್ಯ ಪ್ರದರ್ಶನ ಮಾಡಿದ್ದಾನೆ. 

SCROLL FOR NEXT