ಸಂಗ್ರಹ ಚಿತ್ರ 
ರಾಜ್ಯ

ಕೊರೋನಾ ವರದಿ ನೇರ ರೋಗಿಗಳಿಗೆ ನೀಡಬೇಡಿ ಎಂಬ ಆದೇಶ ರದ್ದು

ಕೊರೋನಾ ಸೋಂಕಿನ ನೆಗೆಟಿವ್ ಅಥವಾ ಪಾಸಿಟಿವ್ ವರದಿಯನ್ನು ಈಗ ಮತ್ತೆ ರೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಗೆ ಸೂಚನೆ ನೀಡಿದೆ. 

ಬೆಂಗಳೂರು: ಕೊರೋನಾ ಸೋಂಕಿನ ನೆಗೆಟಿವ್ ಅಥವಾ ಪಾಸಿಟಿವ್ ವರದಿಯನ್ನು ಈಗ ಮತ್ತೆ ರೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಗೆ ಸೂಚನೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಪ್ರಯೋಗಾಲಯಗಳು ನೇರವಾಗಿ ರೋಗಿಗಳಿಗೆ ರಿಪೋರ್ಟ್ ನೀಡುತ್ತಿರುವುದರಿಂದ ಅನಾಹುತಗಳು ನಡೆಯುತ್ತಿವೆ ಎಂದು ರಾಜ್ಯ ಸರ್ಕಾರ ಜೂ.27ರಂದು ರೋಗಿಗಳಿಗೆ ಸೋಂಕು ಫಲಿತಾಂಶ ನೇರವಾಗಿ ನೀಡದಂತೆ ಸರ್ಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಿತ್ತು.

ಶನಿವಾರ ಹೊಸ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತರು, ಜೂ.27ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಪ್ರಯೋಗಲಾಯಗಳು ಫಲಿತಾಂಶ ನೀಡುವ ಕುರಿತು ಈ ಹಿಂದಿನ ನಿಯಮವನ್ನೇ ಅನುಸರಿಸಬಹುದು. ಆದರೂ ನಿತ್ಯ ಕೊರೋನಾ ಪಾಸಿಟಿವ್/ನೆಗೆಟಿವ್ ಪ್ರಕರಣ ಐಸಿಎಂ ಪೋರ್ಟಲ್'ಗೆ ಅಪ್ಲೋಡ್ ಮಾಡಬೇಕು ಎಂದಿದ್ದಾರೆಂದು ಹೇಳಲಾಗುತ್ತಿದೆ. 

ಇದರಿಂದ ಇನ್ನು ಮೊದಲಿನಂತೆ ಸೋಂಕಿತರಿಗೆ ನೇರವಾಗಿ ಮೊಬೈಲ್ ಸಂದೇಶ ಅಥವಾ ದೂರವಾಣಿ ಕರೆ ಮಾಡಿ ಸೋಂಕಿನ ವಿಚಾರ ತಿಳಿಸಲಾಗುತ್ತದೆ. ಇದರಿಂದ ತಕ್ಷಣ ಆ್ಯಂಬುಲೆನ್ಸ್ ನೆರವು ಪಡೆದು ಕೊರೋನಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ದಾಖಲಾಗಲು ನೆರವಾಗಲಿದೆ. ಇತ್ತೀಚೆಗೆ ಸಚಿವ ಆರ್.ಅಶೋಕ್, ಪ್ರಯೋಗಾಲಯಗಳು ಸೋಂಕಿತರಿಗೆ ನೇರವಾಗಿ ಕರೆ ಮಾಡಿ ನೀವು ಪಾಸಿಟಿವ್ ಎಂದು ಹೇಳುತ್ತವೆ. ಇದರಿಂದ ಸೋಂಕಿತರು ಆಘಾತಕ್ಕೀಡಾಗುತ್ತಾರೆ. ಹೀಗಾಗಿ ಇನ್ನು ಫಲಿತಾಂಶವನ್ನು ಮೊದಲು ಐಸಿಎಂಆರ್ ಪೋರ್ಟಲ್'ಗೆ ಅಪ್'ಲೋಡ್ ಮಾಡಿ ಆರೋಗ್ಯ ಅಧಿಕಾರಿಗಳಿಗೆ ನೀಡಬೇಕು ಎಂದು ಹೇಳಿದ್ದರು,

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೈಸೂರು ರಾಜಮನೆತನ ಹೊರಗಿಟ್ಟು ಕರ್ನಾಟಕ ಇತಿಹಾಸ ಊಹಿಸುವುದು ಕಷ್ಟ': ಗವಿಸಿದ್ಧೇಶ್ವರ ಶ್ರೀಗಳು; Video

ಮೈಸೂರು ದಸರಾಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳಿಂದ ಅಧಿಕೃತ ಚಾಲನೆ

4 ಜನರಿಗೆ ಒಂದೇ ಟಿಕೆಟ್! ಸಾರಿಗೆ ಇಲಾಖೆಯಲ್ಲಿ ಡೀಸೆಲ್ ಬೆನ್ನಲ್ಲೇ ಟಿಕೆಟ್ ರೋಲ್ ಕೊರತೆ

ದೆಹಲಿಯಲ್ಲಿ ಹೈಡ್ರಾಮಾ: ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾಗಿದ್ದ CJP ನಾಯಕರಾದ ದೀಪ್ಕೆ, ರಾಂಕಾ, ದಾಸ್ ಕೊನೆಗೂ ಬಿಡುಗಡೆ, 1 ವರ್ಷ ಶಾಂತಿ ಕಾಪಾಡುವಂತೆ ಷರತ್ತು..!

Riyadh ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಮಂದಿ ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ