ರಾಜ್ಯ

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಗೆ ಕೊರೋನಾ ವೈರಸ್ ಸೋಂಕು

Srinivasamurthy VN

ದಕ್ಷಿಣ ಕನ್ನಡ: ಮಾಜಿ ಕೇಂದ್ರ ಸಚಿವ ಬಿ. ಜನಾರ್ಧನ ಪೂಜಾರಿ ಅವರಿಗೆ ಕೊರೋನಾ ಸೋಂಕು ಒಕ್ಕರಿಸಿದೆ.

ಜನಾರ್ದನ ಪೂಜಾರಿಯವರಿಗೆ ಶನಿವಾರ ಕೋವಿಡ್ ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಅಲ್ಲದೇ ಅವರ ಪತ್ನಿಗೂ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜನಾರ್ಧನ ಪೂಜಾರಿ ಅವರ ಹಿರಿಯ ಪುತ್ರ ಸಂತೋಷ್ ಜೆ. ಪೂಜಾರಿ ಅವರು ಮಾಹಿತಿ ನೀಡಿದ್ದು, 'ಜನಾರ್ಧನ ಪೂಜಾರಿ  ಅವರಿಗೆ ಸೋಂಕು ಸಂಬಂಧಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ ವರದಿ ಪಾಸಿಟಿವ್ ಬಂದಿದೆ. ಅವರು ಆರೋಗ್ಯವಾಗಿದ್ದು, ದಯವಿಟ್ಟು ಯಾರೂ ಈ ಬಗ್ಗೆ ಆತಂಕಪಡುವ ಪಡುವ ಅಗತ್ಯವಿಲ್ಲ, ಶೀಘ್ರದಲ್ಲೇ ಅವರು ಸಂಪೂರ್ಣ ಗುಣಮುಖರಾಗಲು ನಾವೆಲ್ಲರೂ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಿವಾಸಿಯಾಗಿರುವ ಮಾಜಿ ಸಚಿವರ ಮನೆಯ ಕೆಲಸದಾಕೆಯ ಕಾರಣದಿಂದ ಸೋಂಕು ತಾಗಿದೆ ಎನ್ನಲಾಗಿದೆ. ಸದ್ಯ ಮಾಜಿ ಸಚಿವರು ಮತ್ತು ಅವರ ಪತ್ನಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಇತ್ತೀಚೆಗಷ್ಟೇ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ಅವರಿಗೂ ಸಹ ಕೋವಿಡ್ ಸೋಂಕು ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT