ರಾಜ್ಯ

ಗಣೇಶ ಚತುರ್ಥಿ, ಜನ್ಮಾಷ್ಟಮಿ ಸಾಮೂಹಿಕ ಆಚರಣೆಗಳಿಗೆ ಕೋವಿಡ್-19 ಅಡ್ಡಿ!

Srinivas Rao BV

ಬೆಂಗಳೂರು: ಕೋವಿಡ್-19 ಗಣೇಶ ಚತುರ್ಥಿ, ಕೃಷ್ಣಜನ್ಮಾಷ್ಟಮಿ, ನವರಾತ್ರಿಯ ಸಮೂಹ ಆಚರಣೆಗಳಿಗೆ ಅಡ್ಡಿಯಾಗಿ ಪರಿಣಮಿಸಿದೆ. 

ರಾಜ್ಯದಲ್ಲಿ ಈ ಹಬ್ಬಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಈ ಬಾರಿ ಸಮೂಹದ ಆಚರಣೆಗಳಿಗೆ ಅವಕಾಶ ನೀಡದೇ ಇರುವುದಕ್ಕೆ ನಿರ್ಧರಿಸಲಾಗಿದ್ದು ಇದಕ್ಕೆ ಮಹಾರಾಷ್ಟ್ರದ ಮಾದರಿಯನ್ನು ಅನುಸರಿಸಲು ನಿರ್ಧರಿಸಲಾಗಿದೆ. 

ಮಹಾರಾಷ್ಟ್ರದಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಸಾರ್ವಜನಿಕವಾಗಿ ಆಚರಣೆ ಮಾಡಲಾಗುತ್ತದೆ. ಆದರೆ ಈ ವರ್ಷ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬ್ರೇಕ್ ಹಾಕಲು ನಿರ್ಧರಿಸಿದ್ದ ತಾಜಾ ಉದಾಹರಣೆಯನ್ನು ಸ್ಮರಿಸಬಹುದಾಗಿದೆ.

ಇನ್ನು ನಾಡ ಹಬ್ಬ ದಸರಾ ಆಚರಣೆಯನ್ನೂ ಸಹ ಆದಷ್ಟು ಕಡಿಮೆ ಜನಸಂಖ್ಯೆಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಮೈಸೂರು ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಇದಕ್ಕಾಗಿ ಇತ್ತೀಚೆಗೆ ನಡೆದ ಪುರಿ ಜಗನ್ನಾಥ ರಥೋತ್ಸವದ ಮಾದರಿಯನ್ನು ಅನುಸರಿಸಲು ಚಿಂತನೆ ನಡೆಸಿದೆ. ಇನ್ನು ಬೆಂಗಳೂರಿನಲ್ಲಿ ಕೃಷ್ಣಜನ್ಮಾಷ್ಟಮಿ ಹಾಗೂ ಗಣೇಶ ಹಬ್ಬಗಳನ್ನು ಸಾರ್ವಜನಿಕವಾಗಿ ಆದಷ್ಟೂ ಕಡಿಮೆ ಜನಸಂಖ್ಯೆಯಲ್ಲಿ ನಡೆಸುವುದ ಈ ಬಗ್ಗೆ ಸಂಬಂಧಪಟ್ಟವರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿಹೆಚ್ ಅನಿಲ್ ಕುಮಾರ್ ಹೇಳಿದ್ದಾರೆ.

SCROLL FOR NEXT