ಕ್ವಾರಂಟೈನ್ ಗೊಂಡಿರುವ ನೆರೆಮನೆಯವರಿಗೆ ಸಹಾಯಹಸ್ತ ಚಾಚುತ್ತಿರುವ ನೆರೆಮನೆಯವರು 
ರಾಜ್ಯ

ಒಂದೇ ಕುಟುಂಬ ಐವರಿಗೂ ಕೊರೋನಾ: ಆತಂಕ ಬದಿಗೊತ್ತಿ ಸಹಾಯ ಹಸ್ತ ಚಾಚಿದ ಸ್ಥಳೀಯರು

ಕುಟುಂಬ ಐವರಿಗೂ ಸದಸ್ಯರಿಗೂ ಕೊರೋನಾ ದೃಢಪಟ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಕುಟುಂಬವೊಂದಕ್ಕೆ ಆತಂಕ ಪಕ್ಕಕ್ಕಿಟ್ಟು ಸ್ಥಳೀಯರೇ ಸಹಾಯಹಸ್ತ ಚಾಚಿರುವ ಘಟನೆ ವಸಂತನಗರದಲ್ಲಿ ನಡೆದಿದೆ. 

ಬೆಂಗಳೂರು: ಕುಟುಂಬ ಐವರಿಗೂ ಸದಸ್ಯರಿಗೂ ಕೊರೋನಾ ದೃಢಪಟ್ಟು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಕುಟುಂಬವೊಂದಕ್ಕೆ ಆತಂಕ ಪಕ್ಕಕ್ಕಿಟ್ಟು ಸ್ಥಳೀಯರೇ ಸಹಾಯಹಸ್ತ ಚಾಚಿರುವ ಘಟನೆ ವಸಂತನಗರದಲ್ಲಿ ನಡೆದಿದೆ. 

ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೇ ಮನೆಯ ದುಡಿಯುವ ಹಾಗೂ ಹಿರಿಯ ವ್ಯಕ್ತಿಯಾಗಿದ್ದು, ಇವರಲ್ಲೂ ವೈರಸ್ ಪತ್ತೆಯಾಗಿದೆ. ಬಳಿಕ ಮನೆಯವರೆಲ್ಲರಿಗೂ ವೈರಸ್ ಹರಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರೇ ಮನೆಯವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಂಕಷ್ಟದ ಸಮಯದಲ್ಲಿ ನೆರವಾಗಿದ್ದಾರೆ. 

ನನ್ನ ತಾಯಿ ಹಾಗೂ ಇಬ್ಬರು ತಂಗಿಯರನ್ನು ಸಿವಿ ರಾಮನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ನನಗೆ ಹಾಗೂ ತಂದೆಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿದ್ದಾರೆ. ಕುಟುಂಬ ಸದಸ್ಯರು ಪ್ರತ್ಯೇಕಗೊಂಡಿರುವುದರಿಂದ ಪರಿಸ್ಥಿತಿ ನಿಭಾಯಿಸುವುದು ಕಷ್ಟಕರವಾಗಿದೆ. ಆದರೆ, ನೆರೆಮನೆಯ ಜನರು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಪ್ರತೀನಿತ್ಯ ಆಹಾರ ನೀಡುತ್ತಿದ್ದಾರೆಂದು ಅರ್ಚಕನ 22 ವರ್ಷದ ಪುತ್ರಿ ಸಿಮ್ರನ್ ಶರ್ಮಾ ಅವರು ಹೇಳಿದ್ದಾರೆ. 

ಇದೀಗ ನಾವು ಗುಣಮುಖರಾಗಿದ್ದು, ಕ್ವಾರಂಟೈನ್ ನಲ್ಲಿದ್ದೇವೆ. ನಮ್ಮ ಮನೆಯನ್ನು ಸೀಲ್ಡೌನ್ ಮಾಡಲಾಗಿದೆ. ಮನೆಯ ಮಹಡಿಯ ಮೇಲೆ ಬಂದರೂ ಜನರು ನಮ್ಮನ್ನು ಕೀಳು ಜನರನ್ನು ನೋಡಿದಂತೆ ನೋಡುತ್ತಾರೆ. ನಮ್ಮನ್ನು ನೋಡಿದರೆ ಜನರು ಹೆದರುತ್ತಿದ್ದಾರೆ. ಆದರೆ, ನೇರವಾಗಿ ಹೇಳುವುದಾದರೆ, ಭೀತಿಗೊಳಗಾಗುವುದೇನೂ ಇಲ್ಲ. ನಮ್ಮನ್ನು ನಾವು ಆರೋಗ್ಯಕರವಾಗಿಟ್ಟುಕೊಳ್ಳಬೇಕು. ಮನೆಯ ಬಾಗಿಲ ಹೊರಗೆ ನೆರೆಮನೆಯವರು ಆಹಾರ ಹಾಗೂ ಅಗತ್ಯ ವಸ್ತುಗಳನ್ನು ತಂದಿಡುತ್ತಿದ್ದಾರೆ. ನಮ್ಮೊಂದಿಗೆ ನೇರ ಸಂಪರ್ಕ ಹೊಂದುತ್ತಿಲ್ಲ. ತಾಯಿ ಹಾಗೂ ತಂಗಿಯರಿಬ್ಬರಿಗೂ ಸೌಮ್ಯ ಲಕ್ಷಣಗಳು ಕಂಡು ಬಂದಿದ್ದು ಆಸ್ಪತ್ರೆಯಲ್ಲಿ ಮೂವರಿಗೂ ಹಾಸಿಗೆ ದೊರೆತಿದೆ ಎಂದು ತಿಳಿಸಿದ್ದಾರೆ. 

ಆ್ಯಂಟಿವೈರಲ್ ಡ್ರಗ್'ಗೆ ರೂ.500 ಖರ್ಚಾಗುತ್ತಿದ್ದು, ಒಬ್ಬ ವ್ಯಕ್ತಿಗೆ ಪ್ರತೀನಿತ್ಯ 10 ಮಾತ್ರೆಗಳು ಅವಶ್ಯಕವಿದೆ. ರೋಗಿಗಳಿಗೆ ಖರ್ಚು ವೆಚ್ಚ ಭರಿಸುವುದು ಕಷ್ಟಕವಾಗಿದೆ. ಕುಟುಂಬಸ್ಥರೊಂದಿಗೆ ಸಂಪರ್ಕದಲ್ಲಿದ್ದು, ಅವರ ಅಗತ್ಯತೆಗಳು ಹಾಗೂ ಸಂಕಷ್ಟ ಅರ್ಥವಾಗುತ್ತಿದೆ. ಸ್ಥಳೀಯ ನಿವಾಸಿಗಳಿಗೆ ಕೊರೋನಾ ಬಂದ ಕೂಡಲೇ ನೆರೆಮನೆಯವರಿಗೆ ಭೀತಿ ಶುರುವಾಗುತ್ತದೆ. ನಾವೂ ಕೂಡ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಆದರೆ, ಸೋಂಕಿತ ವ್ಯಕ್ತಿಗಳನ್ನು ಅಸ್ಪೃಶ್ಯರಂತೆ ನೋಡುತ್ತಿಲ್ಲ. ನಾವು ಮುಂದೆ ಸಾಗಬೇಕು. ಜನರಿಗೆ ಸಹಾಯ ಮಾಡಬೇಕು. ಧೈರ್ಯ ಹಾಗೂ ವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸಿ4ಸಿ (ಸಿಟಿಜನ್ ಫಾರ್ ಸಿಟಿಜನ್) ಸಹ ಸಂಸ್ಥಾಪಕ ರಾಜ್ ಕುಮಾರ್ ದುಗಾರ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT