ಕುಸಿದ ಕಟ್ಟಡ 
ರಾಜ್ಯ

ಕಪಾಲಿ ಥಿಯೇಟರ್ ಬಳಿ ನೆಲಕ್ಕುರುಳಿದ ನಾಲ್ಕು ಅಂತಸ್ತಿನ ಕಟ್ಟಡ; ತಪ್ಪಿದ ಭಾರಿ ಅನಾಹುತ

ನಗರದ ಹೃದಯ ಭಾಗದಲ್ಲಿರುವ ಕಪಾಲಿ ಟಾಕೀಸ್ ಹಿಂಭಾಗದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. 

ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ ಕಪಾಲಿ ಟಾಕೀಸ್ ಹಿಂಭಾಗದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. 

ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲಿ ಥಿಯೇಟರ್ ಅನ್ನು ಹೊಡೆದು ಕಟ್ಟಡ ಕಾಮಗಾರಿ ನಡೆಸಲಾಗುತ್ತಿತ್ತು. ಈ ಥಿಯೇಟರ್ ಹಿಂದೆ ನಾಲ್ಕು ಅಂತಸ್ತಿನ ಕಟ್ಟಡವೊಂದಿತ್ತು. ಈ ಕಟ್ಟಡವನ್ನು ಇಷ್ಟು ದಿನ ಲಾಡ್ಜ್, ಹೊಟೇಲ್ ಆಗಿ ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಆದರೆ ನಿನ್ನೆ ರಾತ್ರಿ ಸುಮಾರು 9:15 ರ ಹೊತ್ತಿನಲ್ಲಿ ಈ ಕಟ್ಟಡ ಧಿಡೀರನೆ ಕುಸಿದು ಬಿದ್ದಿದೆ. 

ಕಟ್ಟಡ ಕುಸಿತವನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಇನ್ನು ಕಟ್ಟಡ ಕುಸಿತದ ಸಂದರ್ಭದಲ್ಲಿ ಈ ಕಟ್ಟಡದಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಭಾರೀ ಅನಾಹುತ ತಪ್ಪಿದಂತಾಗಿದೆ. 

ಮೂಲಗಳ ಪ್ರಕಾರ ಈ ಕಟ್ಟಡದ ಮಾಲೀಕರು ಈ ಕಟ್ಟಡವನ್ನು ಒಡೆದು ಹೊಸ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದರಂತೆ. ಅಷ್ಟರಲ್ಲಾಗಿಯೇ ಈ ದುರ್ಘಟನೆ ಸಂಭವಿಸಿದೆ. ಇನ್ನು ಸ್ಥಳಕ್ಕೆ ಉಪ್ಪರಾಪೇಟೆ ಪೊಲೀಸರು, ಭೇಟಿ ಪರಿಶೀಲನೆ ನಡೆಸಿದ್ದಾರೆ.  ಮಾಧ್ಯಮವೊಂದು ವರದಿ ಮಾಡಿರುವಂತೆ ಕಟ್ಟಡದ ಇಂಜಿನಿಯರ್ ಮುಸ್ತಫಾ ಎಂಬುವರನ್ನ ಉಪ್ಪಾರಪೇಟೆ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ: ಇಬ್ಬರಿಗೆ ಗಾಯ, ಇರಾನ್ ರಾಯಭಾರಿಗೆ ಅಜರ್ ಬೈಜಾನ್ ಸಮನ್ಸ್!

T20 World Cup 2026: 2ನೇ ಸೆಮಿಫೈನಲ್ ಕದನ, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಇಂಗ್ಲೆಂಡ್!

ಪಶ್ಚಿಮ ಬಂಗಾಳ ರಾಜ್ಯಪಾಲ ಸಿವಿ ಆನಂದ ಬೋಸ್ ದಿಢೀರ್ ರಾಜೀನಾಮೆ

ಮೋದಿ ಟೀಕೆ, ಪದೇ ಪದೇ ಗ್ಯಾರಂಟಿಗಳ ಉಲ್ಲೇಖ ಸಿದ್ದರಾಮಯ್ಯ ಬಜೆಟ್‌ನ ಮುಖ್ಯಾಂಶಗಳು: ಆರ್ ಅಶೋಕ್

ನಿತೀಶ್ ಕುಮಾರ್​​​ಗೆ ರಾಷ್ಟ್ರ ರಾಜಕಾರಣಕ್ಕೆ ಸ್ವಾಗತ; ಬಿಹಾರ ಸಿಎಂ ಆಗಿ "ಅದ್ಭುತ" ಅವಧಿ: ಅಮಿತ್ ಶಾ

SCROLL FOR NEXT