ರಾಜ್ಯ

ನಾವಿಲ್ಲಿ ಕೈದಿಗಳಂತಿದ್ದೇವೆ: ಕಲಬುರಗಿ ಕ್ವಾರಂಟೈನ್ ಕೇಂದ್ರದಲ್ಲಿನ ಅವ್ಯವಸ್ಥೆ ಕುರಿತು ಜನತೆ ಕಿಡಿ!

Manjula VN

ಕಲಬುರಗಿ: ಕ್ವಾರಂಟೈನ್ ಕೇಂದ್ರವೆಂದು ನಮ್ಮನ್ನು ಇಲ್ಲಿಗೆ ಕರೆತರಲಾಗಿತ್ತು. ಆದರೆ, ನಾವಿಲ್ಲಿ ಕೈದಿಗಳಿಂತಿದ್ದೇವೆಂದು ಕಲಬುರಗಿಯ ಕ್ವಾರಂಟೈನ್ ನಲ್ಲಿರುವ ಅವ್ಯವಸ್ಥೆ ಕುರಿತು ಮಹಾರಾಷ್ಟ್ರದಿಂದ ಬಂದ ಜನತೆ ಕಿಡಿಕಾರುತ್ತಿದ್ದಾರೆ. 

ಕಲಬುರಗಿ ಕ್ವಾರಂಟೈನ್ ಕೇಂದ್ರದಲ್ಲಿ ಸಂಕಷ್ಟ ಅನುಭವಿಸುತ್ತಿರುವ ಎಂಡಿ ಸಲೀಂ ಹಾಗೂ ಅಬ್ದುರ್ ರಶೀದ್ ಅವರು ಈ ಕುರಿತು ಮಾತನಾಡಿ, ಮುಂಬೈನಲ್ಲಿ ನಾವು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದೆವು. ನಮ್ಮ ಕುಟುಂಬಸ್ಥರು ಕಲಬುರಗಿಯಲ್ಲಿದ್ದಾರೆ. ಹಲವು ತಿಂಗಳಿನಿಂದ ನಾವು ಕುಟುಂಬಸ್ಥರನ್ನು ಭೇಟಿ ಮಾಡಿರಲಿಲ್ಲ. ಕರ್ನಾಟಕದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಇಲ್ಲ ಎಂದು ನನ್ನ ಸ್ನೇಹಿತರೊಬ್ಬರು ಹೇಳಿದ್ದರು. ಹೀಗಾಗಿ ಜೂ.6ರಂದು ನಾವು ಕಲಬುರಗಿಗೆ ಬಂದಿದ್ದೆವು. ಉದ್ಯಾನ್ ಎಕ್ಸ್'ಪ್ರೆಸ್ ನಿಂದ ಕಲಬುರಗಿ ರೈಲ್ವೇ ನಿಲ್ದಾಣಕ್ಕೆ ಬಂದಿಳಿದಿದ್ದೆವು. ಈ ವೇಳೆ ಸ್ಥಳದಲ್ಲಿದ್ದ ಅಧಿಕಾರಿಗಳು ನಮ್ಮನ್ನು ಕ್ವಾರಂಟೈನ್ ಕೇಂದ್ರಕ್ಕೆ ಕರೆದುಕೊಂಡು ಹೋದರು. ಇದೀಗ ನಾವು 7 ತಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕೆಂದು ಹೇಳುತ್ತಿದ್ದಾರೆ. 

ಹಾಸ್ಟೆಲ್ ನಲ್ಲಿ ನಮ್ಮನ್ನು ಕ್ವಾರಂಟೈನ್ ನಲ್ಲಿರಿಸಲಾಗಿದ್ದು, ಮಹಡಿಯ ಮೆಟ್ಟಿಲುಗಳ ಮೇಲೆ ಕೂಡ ಕುಳಿತುಕೊಳ್ಳಲು ಅನುಮತಿ ನೀಡಲಾಗುತ್ತಿಲ್ಲ. ಯಾವಾಗಲೂ ಬಾಗಿಲುಗಳನ್ನು ಮುಚ್ಚಿಯೇ ಇರುತ್ತಾರೆ. ಪ್ರತೀ ರೂಮಿನಲ್ಲಿ ನಾಲ್ವರು ಇರಲು ಅನುಮತಿ ನೀಡಲಾಗಿದೆ. ಆದರೆ, ಎಲ್ಲರೂ ಒಂದೇ ಶೌಚಾಲಯವನ್ನೇ ಬಳಕೆ ಮಾಡಬೇಕಾಗಿದೆ. ಎಲ್ಲರೂ ಒಂದೇ ಶೌಚಾಲಯ ಬಳಕೆ ಮಾಡುತ್ತಿರುವುದರಿಂದ ನಮಗೇನಾದರೂ ಸೋಂಕು ತಗುಲಿದರೆ ನಾವೇನು ಮಾಡಬೇಕು? ಇದರ ಜವಾಬ್ದಾರಿಯನ್ನು ಯಾರು ತೆಗೆದುಕೊಳ್ಳುತ್ತಾರೆ? ಎರಡು ದಿನಗಳಿಗೊಮ್ಮೆ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಪ್ರಸ್ತುತ ಹಾಸ್ಟೆಲ್ ನಲ್ಲಿ ಒಟ್ಟು 67 ಮಂದಿ ಕ್ವಾರಂಟೈನ್ ನಲ್ಲಿದ್ದೇವೆಂದು ಹೇಳಿದ್ದಾರೆ. 

ಚಿತ್ತಾಪುರದ ಆದರ್ಶ ವಿದ್ಯಾಲಯದಲ್ಲಿರುವ ಕ್ವಾರಂಟೈನ್ ಕೇಂದ್ರ ಉತ್ತಮವಾಗಿದೆ. ಅಲ್ಲಿನ ಜನರು ಸ್ಥಳದಲ್ಲಿ ಓಡಾಡಿಕೊಂಡಿರಲು ಬಿಡುತ್ತಿದ್ದಾರೆ. ಮೂರು ಅಂತಸ್ತಿನ ಕಟ್ಟಡಲ್ಲಿ ಒಟ್ಟು 29 ಕೊಠಡಿಗಳಿದ್ದು, ಎಲ್ಲಾ ಕೊಠಡಿಯಲ್ಲಿಯೂ ಶೌಚಾಲಯಗಳ ವ್ಯವಸ್ಥೆಯಿದೆ. ಒಟ್ಟಾರೆ 307 ಮಂದಿ ಈ ಕಟ್ಟಡದಲ್ಲಿ ಕ್ವಾರಂಟೈನ್ ಆಗಿದ್ದು, ಪ್ರತೀ ಕೊಠಡಿಯಲ್ಲಿ 9 ಮಂದಿ ಇದ್ದಾರೆಂದು ವರದಿಗಳು ತಿಳಿಸಿವೆ. 

SCROLL FOR NEXT