ರಾಜ್ಯ

ಬೆಂಗಳೂರು ಉಪನಗರ ರೈಲು ನಿಗದಿತ ಸಮಯದಲ್ಲಿ ಸಿದ್ಧವಾಗಲಿದೆ: ಪಿಸಿ ಮೋಹನ್ 

Shilpa D

ಬೆಂಗಳೂರು: ಉಪನಗರ ರೈಲು ಯೋಜನೆಯ ವೆಚ್ಚವನ್ನು ಫೆಬ್ರವರಿಯಲ್ಲಿ 18,621 ಕೋಟಿಯಿಂದ 15,767 ಕೋಟಿ ರೂ.ಗೆ ಪರಿಷ್ಕರಿಸಲಾಗಿದೆ. ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ  ಬೋಗಿಗಳಿಗೆ 2,854 ಕೋಟಿ ರೂ. ನಿಗದಿ ಪಡಿಸಲಾಗಿದೆ.

ಬೆಂಗಳೂರು ಉಪನಗರ ರೈಲ್ವೆ ಯೋಜನೆ ಸಂಬಂಧ ಮಾತನಾಡಿರುವ ಸಂಸದ ಪಿಸಿ ಮೋಹನ್ ಹಣಕಾಸಿನ ಬಿಕ್ಕಟ್ಟು ಇದೆ, ಅದರಲ್ಲೂ ವಿಶೇಷವಾಗಿ ಕೋವಿಡ್ ಕಾರಣ. ಯೋಜನೆ ಪೂರ್ಣಗೊಳ್ಳಲು 5-6 ವರ್ಷಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.

ಈ ಮಧ್ಯೆ, ನಮ್ಮ ಆರ್ಥಿಕತೆಯು ಬೆಳೆಯುತ್ತದೆ ಮತ್ತು ನಾವು ಯೋಜನೆಯನ್ನು ಸಮಯಕ್ಕೆ  ಸರಿಯಾಗಿ ಪೂರ್ಣಗೊಳಿಸುತ್ತೇವೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ. 

ಕಳೆದ ವರ್ಷ ರಾಜ್ಯ ಬಜೆಟ್ ನಲ್ಲಿ 2020-21 ಸಾಲಿನ ಯೋಜನೆಗಾಗಿ 500 ಕೋಟಿ ರು ಅನುದಾನ ನೀಡಿತ್ತು.  ಕಳೆದ ಎಂಟು ವರ್ಷಗಳಿಂದ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಧ್ವನಿ ಎತ್ತಿದ್ದಾರೆ. ಅವರ ಜೊತೆಗೆ ಬೆಂಗಳೂರಿನ ಅನೇಕ ಸಂಸದರು ಕೈಜೋಡಿಸಿದ್ದಾರೆ.

ಕಳೆದ ವರ್ಷ ಸಂಸತ್ತಿಗೆ ಆಯ್ಕೆಯಾದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಈ ಯೋಜನೆ ಪೂರ್ಣಗೊಳಿಸಬೇಕು ಎಂದು ನಾನು ಬಯಸುತ್ತೇನೆ. ಇದು ಬೆಂಗಳೂರು ಸೆಂಟ್ರಲ್‌ಗೆ ಮಾತ್ರ ಸಂಬಂಧಿಸಿದ ಯೋಜನೆಯಲ್ಲ, ಇದರಿಂದ ಇಡೀ ನಗರ ಮತ್ತು ಸುತ್ತಮುತ್ತಲಿನವರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ಹೂಡಿ ರೈಲ್ವೆ ನಿಲ್ದಾಣಕ್ಕಾಗಿ ತಮ್ಮ ಸಂಸದರ ಅನುದಾನ ನಿಧಿಯಿಂದ 2,76 ಕೋಟಿ ರು ವೆಚ್ಚ ಮಾಡಿರುವುದಾಗಿ ತಿಳಿಸಿದ್ದಾರೆ.  ಆದಾಗ್ಯೂ, ಮುಂದಿನ ಎರಡು ವರ್ಷಗಳವರೆಗೆ ಕೇಂದ್ರದಿಂದ ಹಣವನ್ನು ಅಮಾನತುಗೊಳಿಸಲಾಗಿದ್ದು, ಶೀಘ್ರದಲ್ಲೇ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಮೋಹನ್ ಹೇಳಿದ್ದಾರೆ. 

ಮೂಲಸೌಕರ್ಯಕ್ಕಾಗಿ ಹಣವನ್ನು ಖರ್ಚು ಮಾಡಲು ನಾವು ಹಿಂಜರಿಯಬಾರದು ಏಕೆಂದರೆ ಬೆಂಗಳೂರು ರಾಜ್ಯಕ್ಕೆ 70% ಆದಾಯವನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT