ರಾಜ್ಯ

ಕೊರೋನಾ ಭೀತಿ: ಗಾಲ್ಫ್ ಸಂಸ್ಥೆ ಬಳಿಕ ಬಂದ್'ಗೆ ಬೌರಿಂಗ್ ಕ್ಲಬ್, ಕೆಎಸ್'ಸಿಎ ನಿರ್ಧಾರ

Manjula VN

ಬೆಂಗಳೂರು: ಗಾಲ್ಫ್ ಆಟಗಾರರೊಬ್ಬರಲ್ಲಿ ಕೊರೋನಾ ವೈರಸ್ ಪತ್ತೆಯಾಗುತ್ತಿದ್ದಂತೆಯೇ ಕರ್ನಾಟಕ ಗಾಲ್ಫ್ ಕ್ಲಬ್'ನ್ನು ಬಂದ್ ಮಾಡಲಾಗಿದ್ದು, ಇದೀಗ ಕೊರೋನಾ ಭೀತಿಯಿಂದಾಗಿ ನಗರದಲ್ಲಿರುವ ಇನ್ನಿತರೆ ಕ್ಲಬ್ ಗಳೂ ಕೂಡ ಮುಂಜಾಗ್ರತಾ ಕ್ರಮವಾಗಿ ಕ್ಲಬ್'ಗಳನ್ನು ಬಂದ್ ಮಾಡಲು ಮುಂದಾಗಿವೆ. 

ಕರ್ನಾಟಕ ಕ್ಲಬ್‌ಗಳ ಒಕ್ಕೂಟದ ಅಧ್ಯಕ್ಷ ಮತ್ತು ಬೌರಿಂಗ್ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಎಚ್ ಎಸ್ ಅವರು ಮಾತನಾಡಿ, ನಗರದಲ್ಲಿರುವ ಎಲ್ಲಾ ಪ್ರಮುಖ ಕ್ಲಬ್ ಗಳ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದ್ದು, ಇಲ್ಲರೂ ಬಂದ್ ಮಾಡುವ ಕುರಿತು ಒಮ್ಮತ ನಿರ್ಧಾರಕ್ಕೆ ಬಂದಿದ್ದಾರೆ. ಇದರಂತೆ ಬೌರಿಂಗ್ ಕ್ಲಬ್ ಬಂದ್ ಆಗಲಿದ್ದು, ಎಲ್ಲಾ ಕ್ಲಬ್ ಸದಸ್ಯರಿಗೂ ಸಂದೇಶವನ್ನು ರವಾನಿಸಲಾಗುತ್ತದೆ. ಕ್ಲಬ್ ಗಳ ಕ್ರೀಡಾ ಚಟುವಟಿಕೆಗಳು, ಸಲೂನ್ ಗಳು, ಹಾಪ್'ಕಾಮ್ಸ್ ಗಳು ಜೂನ್.26ರಿಂದ ಬಂದ್ ಆಗಿರಲಿವೆ ಎಂದು ಹೇಳಿದ್ದಾರೆ. 

ಬೆಂಗಳೂರು ಕ್ಲಬ್ ಕಮಿಟಿ ಸದಸ್ಯ ರಾಮಕೃಷ್ಣ ವಿ ಎಂಬುವವರು ಮಾತನಾಡಿ, ”ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ, ಜಿಮ್ಖಾನಾ ಕ್ಲಬ್, ಬಸವನಗುಡಿ ಕ್ಲಬ್ ಕೂಡ ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದ್ದಾರೆ. 

SCROLL FOR NEXT