ರಾಜ್ಯ

ಮದುವೆಯ ಹುಸಿ ಭರವಸೆ ನೀಡಿ ಅತ್ಯಾಚಾರ ಪ್ರಕರಣ: ಬೆಂಗಳೂರಿನಲ್ಲಿ ಅಧಿಕ!

Sumana Upadhyaya

ಬೆಂಗಳೂರು: ಹುಸಿ ಮದುವೆಯ ಭರವಸೆ ನೀಡಿ ಅತ್ಯಾಚಾರವೆಸಗುವ ಪ್ರಕರಣಗಳು ನಗರದಲ್ಲಿ ಜಾಸ್ತಿಯಾಗುತ್ತಿವೆ ಎಂದು ಅಪರಾಧ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ವರ್ಷ ಇಂತಹ 14 ಪ್ರಕರಣಗಳು ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾಗಿವೆಯಂತೆ.


ಯುವತಿಯನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಸುಳ್ಳು ಭರವಸೆ ನೀಡಿ ನಂಬಿಸಿ ದೈಹಿಕ ಸಂಬಂಧ ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗುತ್ತಿದೆ. ಇಲ್ಲಿ ಯುವತಿಗೆ ದೈಹಿಕ ಸಂಬಂಧದಲ್ಲಿ ಇಚ್ಛೆಯಿಲ್ಲದಾಗ ಅದು ಬಲವಂತವೆಂದು ಪರಿಗಣಿಸಿ ಅತ್ಯಾಚಾರ ಕೇಸಿನಡಿ ದಾಖಲಿಸಲಾಗುತ್ತದೆ ಎಂದು ಅವರು ಹೇಳುತ್ತಾರೆ.


ಬೆಂಗಳೂರಿನಲ್ಲಿ ತಿಂಗಳಲ್ಲಿ ಸರಿಸುಮಾರು 7 ಇಂತಹ ಕೇಸುಗಳು ನಡೆಯುತ್ತವೆ. ಆದರೆ ಇಂತಹ ದೂರುಗಳು ಬಂದಾಗ ಅವುಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕಾಗುತ್ತದೆ ಎಂದು ವನಿತಾ ಸಹಾಯವಾಣಿಯ ಆಪ್ತ ಸಮಾಲೋಚಕರು ಹೇಳುತ್ತಾರೆ. ಕಾನೂನಿನಡಿಯಲ್ಲಿ ಅತ್ಯಾಚಾರವೆಂದು ಕೇಸು ದಾಖಲಿಸಲು ಅವಕಾಶವಿದ್ದರೂ ಕೂಡ ಇಂತಹ ಕೇಸುಗಳಲ್ಲಿ ಬಹುತೇಕ ದೈಹಿಕ ಸಂಬಂಧಗಳು ಒಪ್ಪಿತವಾಗಿರುತ್ತವೆ. ಆದರೆ ನಂತರ ಗಂಡು ಹೆಣ್ಣಿಗೆ ಮೋಸ ಮಾಡುತ್ತಾರೆ ಎಂದು ವನಿತಾ ಸಹಾಯವಾಣಿಯ ಉಸ್ತುವಾರಿ ರಾಣಿ ಶೆಟ್ಟಿ ಹೇಳುತ್ತಾರೆ.

SCROLL FOR NEXT