ವಿಧಾನ ಪರಿಷತ್ ನಲ್ಲಿ‌ 'ಬಿಗ್ ಜೀರೋ' ಕುರಿತು ಸ್ವಾರಸ್ಯಕರ ಚರ್ಚೆ...! 
ರಾಜ್ಯ

ವಿಧಾನ ಪರಿಷತ್ ನಲ್ಲಿ‌ "ಬಿಗ್ ಜೀರೋ" ಕುರಿತು ಸ್ವಾರಸ್ಯಕರ ಚರ್ಚೆ...!

ವಿಧಾನ ಪರಿಷತ್ ಕಲಾಪದಲ್ಲಿ ಬಿಗ್ ಜೀರೋ ವಿಷಯದ ಕುರಿತು ಸ್ವಾರಸ್ಯಕರ‌ ಚರ್ಚೆ ನಡೆಯಿತು. ಯಡಿಯೂರಪ್ಪ ಇಲ್ಲದ ಬಿಜೆಪಿ ಬಿಗ್ ಜೀರೋ ಎನ್ನುವ ವಿಷಯದ ಮೇಲೆ ಚರ್ಚೆ ನಡೆದರೂ ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಎನ್ನುವುದನ್ನು ಒಪ್ಪಿಕೊಳ್ಳಲು ಬಿಜೆಪಿ ಸದಸ್ಯರು ತಯಾರಿರಲಿಲ್ಲ.

ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಬಿಗ್ ಜೀರೋ ವಿಷಯದ ಕುರಿತು ಸ್ವಾರಸ್ಯಕರ‌ ಚರ್ಚೆ ನಡೆಯಿತು. ಯಡಿಯೂರಪ್ಪ ಇಲ್ಲದ ಬಿಜೆಪಿ ಬಿಗ್ ಜೀರೋ ಎನ್ನುವ ವಿಷಯದ ಮೇಲೆ ಚರ್ಚೆ ನಡೆದರೂ ಯಡಿಯೂರಪ್ಪ ಇಲ್ಲದ ಬಿಜೆಪಿ ಶೂನ್ಯ ಎನ್ನುವುದನ್ನು ಒಪ್ಪಿಕೊಳ್ಳಲು ಬಿಜೆಪಿ ಸದಸ್ಯರು ತಯಾರಿರಲಿಲ್ಲ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ‌ ಮೇಲಿನ ಚರ್ಚೆ ವೇಳೆ ಯಡಿಯೂರಪ್ಪ ಅವರ ಶಕ್ತಿಯ ಬಗ್ಗೆ‌ ವಿಷಯ ಪ್ರಸ್ತಾಪವಾಯಿತು. ಪ್ರತಿಪಕ್ಷ ನಾಯಕ‌ ಎಸ್.ಆರ್.ಪಾಟೀಲ್ ಮಾತ‌ನಾಡುತ್ತಾ, ಯಡಿಯೂರಪ್ಪ ಅವರನ್ನು ನಿಯಂತ್ರಿಸುವ ಪ್ರಯತ್ನ ಮತ್ತೆ ನಡೆಯುತ್ತಿದೆ, ಹಿಂದೆ ಆಳುವ ಪಕ್ಷವಾಗಿದ್ದ ಬಿಜೆಪಿ ನಂತರ ವಿರೋಧ ಪಕ್ಷವೂ ಆಗದಂತಾಗಿತ್ತು, ಯಡಿಯೂರಪ್ಪ ಕೆಜೆಪಿ ಕಟ್ಟಿದ್ದು ಕಾರಣ ಹಾಗಾಗಿ ಬಿಜೆಪಿ ಮೈನಸ್ ಯಡಿಯೂರಪ್ಪ ಬಿಗ್ ಜೀರೋ ಎಂದರು.
 
ಈ ವೇಳೆ ಬಿಜೆಪಿ‌ ಸದಸ್ಯೆ ತೇಜಸ್ವಿನಿಗೌಡ ,ಸಿದ್ದರಾಮಯ್ಯ ಮೈನಸ್ ಕಾಂಗ್ರೆಸ್ ಜೀರೋ‌ ಅಂತಾ‌ ಒಪ್ಪಿಕೊಳ್ತೀರಾ? ಎಂದು ಪ್ರಶ್ನಿಸಿದರು. ಯಡಿಯೂರಪ್ಪ ದೈತ್ಯ ಶಕ್ತಿ. ಯಡಿಯೂರಪ್ಪ ಬಿಜೆಪಿ‌ ಜೊತೆ ಇದ್ದರೆ ಸಂಖ್ಯೆಯ ಬಲಗಡೆಯ ಜೀರೋ ಇರಲಿದೆ, ಅವರನ್ನು‌ ಇಳಿಸುವಾಗ ಈ ಕಾಳಜಿ ಇರಲಿಲ್ಲವೇ?.ನಾಯಕರು ಮತ್ತು ಪಕ್ಷ ಸೇರಿದಾಗಲೇ ಪಕ್ಷ ಬಲಗೊಳ್ಳುವುದು, ಸೋನಿಯಾಗಾಂಧಿ, ಕುಮಾರಸ್ವಾಮಿ, ಜೀರೋ ಅಂದರೆ ಒಪ್ಪಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಈ ವೇಳೆ ಮಧ್ಯ ಪ್ರವೇಶ ಮಾಡಿದ ಜೆಡಿಎಸ್ ನ ಬಸವರಾಜ ಹೊರಟ್ಟಿ, ಅದೆಲ್ಲಾ ಬೇಡ ಯಡಿಯೂರಪ್ಪ ಮೈನಸ್ ಬಿಜೆಪಿ ಜೀರೋ ಹೌದೋ ಅಲ್ಲವೋ ಅನ್ನುವುದನ್ನು ಹೇಳಿ ಎಂದರು.  ಬಿಜೆಪಿ‌ ಸದಸ್ಯ ಪ್ರಾಣೇಶ್ ಮಾತನಾಡಿ, ನಮ್ಮಲ್ಲಿ‌ ಎಲ್ಲರೂ ನಾಯಕರೇ, ಹಿಂದೆ ಅಟಲ್ ಬಿಹಾರಿ ವಾಜಪೇಯಿ ನಮ್ಮ ಹೀರೋ ಆಗಿದ್ದರು, ಈಗ‌ ನರೇಂದ್ರ ಮೋದಿ‌ ನಮ್ಮ ಹೀರೋ ಆಗಿದ್ದಾರೆ. ಹಾಗೆಯೇ ಇಲ್ಲಿಯೂ‌ ಈಗ ಯಡಿಯೂರಪ್ಪ ನಮ್ಮ ಹೀರೋ ನಂತರದಲ್ಲಿ ಮುಂದೆ ಬರುವವರು ನಮ್ಮ ಹೀರೋ, ನಮ್ಮದು ಕುಟುಂಬ ರಾಜಕಾರಣದ ಪಕ್ಷ ಅಲ್ಲ, ಒಂದು ಕುಟುಂಬದವರೇ ಹೀರೋ ಅಲ್ಲ ಎಂದು ತಿರುಗೇಟು ನೀಡಿದರು.  ಇದಕ್ಕೆ‌ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ‌ ಎಸ್.ಆರ್. ಪಾಟೀಲ್, ನಾನು ನಮಗೆ ಅನಿಸಿದ್ದು ಹೇಳಿದ್ದೇನೆ  ಯಡಿಯೂರಪ್ಪ ಮೈನಸ್ ಬಿಜೆಪಿ ಜೀರೋ ಅಲ್ಲ ಅಂದರೆ ಇಲ್ಲ‌ ಅಂತಾ ಹೇಳಿ ನಮಗೇನು ಅಭ್ಯಂತರ ಇಲ್ಲ ಎಂದು ಬಿಜೆಪಿ‌ ಸದಸ್ಯರ ಕೆರಳಿಸುವ ಪ್ರಯತ್ನ ನಡೆಸಿದರು.

ಈ ವೇಳೆ ಮಾತನಾಡಿದ‌ ಬಿಜೆಪಿ ಸದಸ್ಯ ಲೆಹರ್ ಸಿಂಗ್,  ಕಾಂಗ್ರೆಸ್ ಪಕ್ಷವೇ ಬಿಗ್ ಜೀರೋ‌ ಆಗಿದೆ ಹಾಗಾಗಿ ಸಿದ್ದರಾಮಯ್ಯ, ಡಿ.ಕೆ‌ ಶಿವಕುಮಾರ್ ತರಹದ ನಾಯಕರು ಅಲ್ಲಿ ಜೀರೋ ಆಗಿದ್ದಾರೆ ಅವರು ಅಲ್ಲಿಂದ‌ ಹೊರ ಬಂದರೆ ನಾಯಕರಾಗುತ್ತಾರೆ ಎಂದರು.

ಲೆಹರ್ ಸಿಂಗ್ ಆರೋಪವನ್ನು ತಳ್ಳಿಹಾಕಿದ ಎಸ್.ಆರ್.ಪಾಟೀಲ್, ಕಾಂಗ್ರೆಸ್ ಪಕ್ಷವನ್ನು ಶೂನ್ಯ ಅಂತಾರೆ ಆದರೆ ಸ್ವಾತಂತ್ರ್ಯ ತಂದ ಪಕ್ಷ ನಮ್ಮದು, ಸಂವಿಧಾನ ಕೊಟ್ಟ ಪಕ್ಷ ನಮ್ಮದು ಹಾಗಾಗಿ ನಮಗೆ‌ ನಮ್ಮ‌ ಪಕ್ಷದ ಬಗ್ಗೆ ಹೆಮ್ಮೆ ಇದೆ ಎಂದು ಬಿಗ್ ಜೀರೋ ಚರ್ಚೆಗೆ ತೆರೆ ಎಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!