ರಾಜ್ಯ

ಕೊರೋನಾ ಹೋರಾಟಕ್ಕೆ ಒಂದು ಕೋಟಿ ರು, ನೆರವು ನೀಡಿದ ನಳಿನ್ ಕುಮಾರ್ ಕಟೀಲ್

Raghavendra Adiga

ಮಂಗಳೂರು: ಕೊರೋನಾ ಸೋಂಕಿನ ವಿರುದ್ಧ ಹೋರಾಟಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೈಗೊಳ್ಳುವ ಅಗತ್ಯ ಸುರಕ್ಷತಾ ಕ್ರಮಗಳಿಗೆ ವಿನಿಯೋಗ ಮಾಡುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಂಸದರ ಪ್ರದೇಶಾಭಿವೃಉದ್ಧಿ ಯೋಜನೆ ಅನುದಾನದಲ್ಲಿ ರೂ. ೧ ಕೋಟಿತಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನೀಡಲಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಜಾಗತಿಕ ಮಹಾಮಾರಿ ಕೊರೋನಾವೈರಸ್ ರೋಗದ ವಿರುದ್ಧ್ ಹೋರಾಟಕ್ಕೆ ಇಡೀ ರಾಜ್ಯ ಸಜ್ಜಾಗಿದೆ. ಅದರ ಸಲುವಾಗಿ ದಕ್ಷಿಣ ಕನ್ನಡದಲ್ಲಿ ಸಹ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಈ ಸಲುವಾಗಿ ಸಂಸದರು ಸಂಸದರ ನಿಧಿಯಿಂದ ಒಂದು ಕೋಟಿ ನೆರವು ನೀಡುತ್ತಿದ್ದಾರೆ.

ಈ ಹಿಂದೆ ಹಲವಾರು ಸಂಸದರು ತಮ್ಮ ಸಂಸದ ಪ್ರದೇಶಾಭಿವೃದ್ಧಿನಿಧಿಯಿಂದ ಹಣವನ್ನು ಕೊರೋನಾ ವಿರುದ್ಧ ಹೋರಾಟಕ್ಕಾಗಿ ಬಿಡುಗಡೆ ಮಾಡಿದ್ದಾರೆ. ಇದೀಗ ನಳೀನ್ ಕುಮಾರ್ ಕಟೀಲ್ ಸಹ ಇದಕ್ಕೆ ಸೇರ್ಪಡೆಯಾಗಿದ್ದು ರಾಜ್ಯದ ಉಳಿದ ಸಂಸದರೂ ಸಹ ಇದೇ ರೀತಿ ಹಣ ಬಿಡುಗಡೆ ಮಾಡಿ ಮಾದರಿಯಾಗಬೇಕಿದೆ.

ಇದೇ ವೇಳೆ ಕೊರೋನಾ ವಿರುದ್ಧ ಹೋರಾಡಲು ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆ ಎರಡು ಕೋಟಿ ರು ಗಳನ್ನು ಸರ್ಕಾರಿ ಆಸ್ಪತ್ರೆ ಹಾಗೂ ಆರೋಗ್ಯ ಸಂಸ್ಥೆಗಳಿಗೆ ನೀಡಿದೆ.

SCROLL FOR NEXT