ರಾಜ್ಯ

ಕಲಬುರಗಿ: ಮಾಸ್ಕ್ ,ಸ್ಯಾನಿಟೈಸರ್ ಗಳು ಅಧಿಕ ಬೆಲೆಗೆ ಮಾರಾಟ ಮಾಡುವಂತಿಲ್ಲ; ಜಿಲ್ಲಾಧಿಕಾರಿ ಎಚ್ಚರಿಕೆ

Srinivasamurthy VN

ಕಲಬುರಗಿ: ಕೊರೋನಾ ಸೊಂಕಿನಿಂದ‌ ಪಾರಾಗಲು ಜನರು ಮಾಸ್ಕ್ ಮತ್ತು ಸ್ಯಾನಿಟೈಸರ್ ಗಳ‌ ಮೊರೆ ಹೋಗುತ್ತಿದ್ದು, ಔಷಧಿ ವ್ಯಾಪಾರಿಗಳು ಮತ್ತು ಮಾರಾಟಗಾರರು ಯಾವುದೇ ಕಾರಣಕ್ಕೂ ನಿಗದಿತ ಎಂ.ಆರ್.ಪಿ.ಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದು ಎಂದು  ಜಿಲ್ಲಾಧಿಕಾರಿ ಶರತ್ ಬಿ. ಆದೇಶಿಸಿದ್ದಾರೆ.

ಕೇಂದ್ರ ಸರ್ಕಾರವು 2Ply ಮಾಸ್ಕ್ ಪ್ರತಿಯೊಂದಕ್ಕೆ 8 ರೂ., 3Ply ಮಾಸ್ಕ್ ಪ್ರತಿಯೊಂದಕ್ಕೆ 10 ರೂ. ಹಾಗೂ 200ml ಸ್ಯಾನಿಟೈಸರ್ ಪ್ರತಿ ಬಾಟಲ್ ಗೆ 100 ರೂ. ಎಂದು ಗರಿಷ್ಟ ಎಂ.ಆರ್.ಪಿ ದರ ನಿಗದಿಪಡಿಸಿದೆ. ಕೇಂದ್ರ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಹೆಚ್ಚಿನ ದರದಲ್ಲಿ  ಮಾರಾಟ ಮಾಡುವುದಾಗಲಿ ಅಥವಾ ಕೃತಕ ಅಭಾವ ಸೃಷ್ಟಿ ಮಾಡಿದಲ್ಲಿ ಅಂತಹ ಔಷಧಿ ಅಂಗಡಿಗಳ‌ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ಮತ್ತು ತಿದ್ದುಪಡಿ ಆದೇಶ-2020 ಹಾಗೂ ಪೊಟ್ಟಣ ಸಾಮಗ್ರಿಗಳ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲೆಯ ಎಲ್ಲಾ  ಔಷಧ ವ್ಯಾಪಾರಿಗಳಿಗೆ ಮತ್ತು ಮಾರಾಟಗಾರರಿಗೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ‌ ಕಾಯ್ದುಕೊಳ್ಳಬೇಕು ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ ಪಾಂಡ್ವೆ ಸೂಚಿಸಿದ್ದಾರೆ.

SCROLL FOR NEXT