ರಾಜ್ಯ

ಕೊರೋನಾ ವೈರಸ್: ಸರ್ವಪಕ್ಷ ಸಭೆ ಕರೆದ ಸಿಎಂ ಯಡಿಯೂರಪ್ಪ, ಆಹಾರ ಪೊಟ್ಟಣ ವಿತರಣೆ

ಅಗತ್ಯ ವಸ್ತುಗಳು ಸೇವೆಗಳ ಅನಿಶ್ಚಿತತೆ, ಗೊಂದಲಗಳ ನಡುವೆ ಭಾರತ ಲಾಕ್ ಡೌನ್ ನ 5ನೇ ದಿನಕ್ಕೆ ಭಾನುವಾರ ಕಾಲಿಟ್ಟಿದ್ದು  ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಗತಿಕರು, ವಲಸಿಗ ಕೂಲಿ ಕಾರ್ಮಿಕರು, ಹಿರಿಯರ ವೃದ್ಧಾಶ್ರಮ, ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಕಂಡುಬಂತು.

ಬೆಂಗಳೂರು:ಅಗತ್ಯ ವಸ್ತುಗಳು ಸೇವೆಗಳ ಅನಿಶ್ಚಿತತೆ, ಗೊಂದಲಗಳ ನಡುವೆ ಭಾರತ ಲಾಕ್ ಡೌನ್ ನ 5ನೇ ದಿನಕ್ಕೆ ಭಾನುವಾರ ಕಾಲಿಟ್ಟಿದ್ದು  ಬೆಂಗಳೂರಿನ ಹಲವು ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಗತಿಕರು, ವಲಸಿಗ ಕೂಲಿ ಕಾರ್ಮಿಕರು, ಹಿರಿಯರ ವೃದ್ಧಾಶ್ರಮ, ಬಡವರಿಗೆ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿರುವುದು ಕಂಡುಬಂತು.

ಸಕಾರಣವಿಲ್ಲದೆ ಮನೆಯಿಂದ ವಾಹನಗಳಲ್ಲಿ ಹೊರಬಂದು ತಿರುಗಾಡುತ್ತಿದ್ದವರನ್ನು ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿ ವಾಪಸ್ ಕಳುಹಿಸುತ್ತಿರುವುದು ಕಂಡುಬಂತು. ಇಂದು ಸುಮಾರು 2 ಸಾವಿರ ಆಹಾರ ಪೊಟ್ಟಣಗಳನ್ನು ವಿತರಿಸಲಾಗಿದೆ.

ಹುಬ್ಬಳ್ಳಿ –ಧಾರವಾಡದಲ್ಲಿ ಮಹಿಳೆಯರು ಸ್ಯಾನಿಟೈಸರ್, ಮಾಸ್ಕ್ ಗಳನ್ನು ಕೊಳ್ಳಲು ಪರದಾಡುತ್ತಿದ್ದರು.

ಜನರು ಮನೆಯಲ್ಲಿಯೇ ಕುಳಿತು ಕೊರೋನಾ ವೈರಸ್ ಸೋಂಕು ಹಬ್ಬದಂತೆ ಸಹಕರಿಸಿ, ನಿಮ್ಮ ಮನೆ ಬಾಗಿಲಿಗೆ ಸಾಧ್ಯವಾದಷ್ಟು ಸೇವೆಗಳನ್ನು ಒದಗಿಸುತ್ತೇವೆ ಎಂದು ಕಲಬುರಗಿ ನಗರ ಆಯುಕ್ತ ರಾಹುಲ್ ಪಂಡ್ವೆ ಮನವಿ ಮಾಡಿದ್ದಾರೆ.

ವಿಧಾನ ಸೌಧದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸರ್ವಪಕ್ಷಗಳ ನಾಯಕರೊಂದಿಗೆ ಸಭೆ ನಡೆಸುತ್ತಿದ್ದು ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾತುಕತೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಆಡಳಿತ ಪಕ್ಷ ನಾಯಕರು ಮತ್ತು ಪ್ರತಿಪಕ್ಷದಿಂದ ಸಿದ್ದರಾಮಯ್ಯ ಭಾಗವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

SCROLL FOR NEXT