ರಾಜ್ಯ

ಪಾವತಿ ಆಧಾರದ ಮೇಲೆ ಲಕ್ಷಣವಿಲ್ಲದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸ್ಟಾರ್ ಹೋಟೆಲ್'ನಲ್ಲಿ ಕ್ವಾರಂಟೈನ್!

Manjula VN

ಬೆಂಗಳೂರು: ಪಾವತಿ ಆಧಾರದ ಮೇಲೆ ಲಕ್ಷಣವಿಲ್ಲದ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಸ್ಟಾರ್ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಮಾಡಲು ರಾಜ್ಯ ಸರ್ಕಾರ ಭಾನುವಾರ ಅನುಮತಿ ನೀಡಿದೆ. 

ಈ ಕುರಿತು ರಾಜ್ಯ ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಕೆ.ದಯಾನಂದ್ ಅವರು ಪ್ರತಿಕ್ರಿಯೆ ನೀಡಿದ್ದು, ಅಂತರಾಷ್ಟ್ರದಿಂದ ಬರುವ ಪ್ರಯಾಣಿಕರನ್ನು ಎ, ಬಿ ಮತ್ತು ಸಿ ಎಂಬು ವಿಭಾಗಿಸಲಾಗುತ್ತದೆ. ವೈರಸ್ ಲಕ್ಷಣ ಇರುವವರನ್ನು ಎ ಕ್ಯಾಟಗರಿಗೆ ಹಾಗೂ ಲಕ್ಷಣವಿಲ್ಲದವರನ್ನು ಬಿ ಮತ್ತು ಸಿ ಕ್ಯಾಟಗರಿಗೆ ಸೇರ್ಪಡೆಗೊಳಿಸಲಾಗುತ್ತದೆ. ಎ ಕ್ಯಾಟಗರಿಗೆ ಬರುವಂತಹ ಪ್ರಯಾಣಿಕಕರನ್ನು ಆಸ್ಪತ್ರೆಗಳಲ್ಲಿ ಐಸೋಲೇಷನ್ ನಲ್ಲಿಸಲಾಗುತ್ತದೆ. ಇನ್ನು ಬಿ ಮತ್ತು ಸಿ ಕ್ಯಾಟಗರಿಯಲ್ಲಿ ಬರುವಂತಹ ಪ್ರಯಾಣಿಕರನ್ನು ಸ್ವಯಂ ಪಾವತಿ ಆಧಾರದ ಮೇಲೆ ಅವರಿಷ್ಟಪಟ್ಟಂತಹ ಸ್ಟಾರ್ ಹೋಟೆಲ್ ಗಳು, ಗೆಸ್ಟ್ ಹೌಸ್ ಗಳು ಹಾಗೂ ಹೋಟೆಲ್ ಸೇರಿದಂತೆ ಇತರೆಡೆ ಕ್ವಾರಂಟೈನ್ ನಲ್ಲಿರಿಸಲಾಗುತ್ತದ ಎಂದು ಹೇಳಿದ್ದಾರೆ. 

ಈಗಾಗಲೇ ಈ ಕುರಿತು ಹೋಟೆಲ್ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗುತ್ತಿದ್ದು, ಶೀಘ್ರದಲ್ಲೇ ದರ ನಿಗದಿಗಳನ್ನು ಅಂತಿಮಗೊಳಿಸಲಾಗುತ್ತದೆ. ಬಿ ಕ್ಯಾಟಗರಿಯಲ್ಲಿರುವ ಪ್ರಯಾಣಿಕರ ಮೇಲೆ ಆರೋಗ್ಯಾಧಿಕಾರಿಗಳು ಸದಾಕಾಲ ಕಣ್ಗಾವಲಿರಿಸಲಿದ್ದಾರೆ. ಸಿ ಕ್ಯಾಟಗರಿಯಲ್ಲಿರುವ ಪ್ರಯಾಣಿಕರನ್ನು ದಿನಕ್ಕೊಮ್ಮೆ ಆರೋಗ್ಯ ಸಿಬ್ಬಂದಿಗಳು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಾರೆಂದು ತಿಳಿಸಿದ್ದಾರೆ. 

SCROLL FOR NEXT