ರಾಜ್ಯ

ಬೆಂಗಳೂರು: ಜಪ್ತಿ ಮಾಡಿದ್ದ ವಾಹನಗಳಿಂದ 18 ಲಕ್ಷಕ್ಕಿಂತ ಅಧಿಕ ಮೊತ್ತದ ದಂಡ ವಸೂಲಿ

Vishwanath S

ಬೆಂಗಳೂರು: ಕೊರೊನಾ ನಿಯಂತ್ರಿಸಲು ಜಾರಿ ಆಗಿರುವ ಲಾಕ್ ಡೌನ್ ಉಲ್ಲಂಘಿಸಿ  ರಸ್ತೆಗಳಿದಿದ್ದ ವಾಹನ ಚಾಲಕರಿಂದ ಶನಿವಾರದವರೆಗೆ 18 ಲಕ್ಷ ಕ್ಕಿಂತ ಅಧಿಕ ಮೌಲ್ಯದ  ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಮೊದಲ ಹಂತದ ಲಾಕ್ ಡೌನ್ ಉಲ್ಲಂಘಿಸಿ ಜಪ್ತಿ ಮಾಡಲಾಗಿದ್ದ ವಾಹನಗಳನ್ನು  ಶುಕ್ರವಾರದಿಂದ(ಮೇ 1) ಮಾಲೀಕರಿಗೆ ದಂಡ ಹಾಕಿ ವಾಪಸ್ಸು ನೀಡಲು ಪೊಲೀಸ್ ಇಲಾಖೆ  ಮುಂದಾಗಿತ್ತು.

ಈ ಮೂಲಕ ಜಪ್ತಿ ಮಾಡಿದ್ದ 2024 ದ್ವಿಚಕ್ರ, ತ್ರಿಚಕ್ರ ವಾಹನಗಳು ಸೇರಿ ಒಟ್ಟು 18,61500 ರೂ. ದಂಡ ವಸೂಲಿ ಮಾಡಲಾಗಿದೆ‌.

SCROLL FOR NEXT