ರಾಜ್ಯ

ಕೋವಿಡ್-19 ಎಫೆಕ್ಟ್: ಸರ್ಕಾರ ಓಕೆ ಎಂದರೂ ಮನೆಗೆಲಸದವರು ಇನ್ನೂ ಕೆಲಸಕ್ಕೆ ಗೈರು!

Nagaraja AB

ಬೆಂಗಳೂರು: ಮನೆಕೆಲಸದವರು ತಮ್ಮ ಕೆಲಸವನ್ನು ಪುನರ್ ಆರಂಭಿಸಬಹುದು ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅವರ ಮಾಲೀಕರು ಮತ್ತೆ ಕೆಲಸಕ್ಕೆ ಕರೆಯದೇ ಇರುವುದರಿಂದ  ಅನೇಕ ಮಂದಿ ಬಡ ಮಹಿಳೆಯರು ತಮ್ಮ ದಿನನಿತ್ಯದ ವಸ್ತುಗಳನ್ನು ಪೂರೈಸಿಕೊಳ್ಳಲು ತೀವ್ರ ಪರದಾಡುವಂತಾಗಿದೆ. 

ಉದ್ಯೋಗದಾತರಿಗೆ ಕರೆ ಮಾಡಿ ಕೆಲಸಕ್ಕೆ ಬರಬಹುದೇ ಎಂದು ಕೇಳಿದರೂ ಏನನ್ನೂ ಹೇಳುತ್ತಿಲ್ಲ ಎಂದು ಅನೇಕ ಮಂದಿ ತಮ್ಮ ಗೋಳು ಹೇಳಿಕೊಂಡಿದ್ದಾರೆ. ಆದಾಗ್ಯೂ, ಕಂಟೈನ್ ಮೆಂಟ್ ವಲಯಗಳಲ್ಲಿ ಈ ಬಗ್ಗೆಗಿನ ನಿರ್ಧಾರವನ್ನು ನಿವಾಸಿಗಳ ಕಲ್ಯಾಣ ಅಸೋಸಿಯೇಷನ್ ಗೆ ಸರ್ಕಾರ ಬಿಟ್ಟಿದೆ.

ಮಹಿಳೆ ಜೆಪಿ ನಗರದ ಮನೆಯೊಂದರಲ್ಲಿ ಅಡುಗೆ ಹಾಗೂ ಸ್ವಚ್ಛತಾ ಕೆಲಸ ಮಾಡುವ ನಿರ್ಮಲಾ ಎಂಬ ಮಹಿಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ತಮ್ಮ ಸಂಕಷ್ಟವನ್ನು ಹಂಚಿಕೊಂಡಿದ್ದಾರೆ. ನನ್ನಗೆ ತಿಂಗಳಿಗೆ ಏಳು ಸಾವಿರ ನೀಡಲಾಗುತ್ತಿತ್ತು. ಮಾರ್ಚ್ 22 ರಂದು ಕೆಲಸಕ್ಕೆ ಬಾರದಂತೆ ಮಾಲೀಕರು ಹೇಳಿದ್ದಾರೆ. ಮಾರ್ಚ್ ತಿಂಗಳ ಸಂಬಳನ್ನು ನೀಡಿಲ್ಲ, ಇಬ್ಬರು ಮಕ್ಕಳಿದ್ದು, ಊಟಕ್ಕೂ ತೊಂದರೆಯಾಗಿದೆ. ಬೇರೆಯವರಿಂದ ಸಾಲ ಪಡೆದು ಪಡಿತರ ಖರೀದಿಸಿದ್ದೇನೆ. ಶುಕ್ರವಾರ ಮತ್ತೆ ಕೆಲಸಕ್ಕೆ ಬರಬಹುದೇ ಎಂದು ಕರೆ ಮಾಡಿ ಮಾಲೀಕರನ್ನು ಕೇಳಿದರೆ ಬರಬೇಡ ಎನ್ನುತ್ತಿದ್ದಾರೆ. ಮನೆಯಿಂದ ಹೊರಗೆ ಕಳುಹಿಸುವ ಭೀತಿಯೂ ಇದೆ. ಆದರೆ, ಹಣ ಬೇಕಾಗಿದೆ, ಏನು ಮಾಡಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದರು.

ಕಳೆದ ಎರಡು ತಿಂಗಳಿನಿಂದಲೂ ಸಂಬಳವನ್ನು ನೀಡಿಲ್ಲ, ಪ್ರತಿನಿತ್ಯ ಗಂಜಿ ಕುಡಿದು ಬದುಕುತ್ತಿದ್ದೇವೆ ಎಂದು ರಿಚ್ ಮಂಡ್ ರಸ್ತೆಯಲ್ಲಿ ಅನೇಕ ಮನೆಗಳಲ್ಲಿ ಕೆಲಸ ಮಾಡುವ ವರಲಕ್ಷ್ಮಿ ಎಂಬವರು ಹೇಳುತ್ತಾರೆ. 

ಸರ್ಜಾಪುರ ರಸ್ತೆಯಲ್ಲಿ ಕೆಲಸ ಮಾಡುವ ರತ್ನ ಅವರ ಪರಿಸ್ಥಿತಿ ಸ್ವಲ್ಪ ಭಿನ್ನವಾಗಿದೆ. ಅವರನ್ನು ಕೆಲಸಕ್ಕೆ ಕರೆಯಲಾಗಿದೆ ಆದರೆ, ಅರ್ಧ ಸಂಬಳ ನೀಡುವುದಾಗಿ ಹೇಳಲಾಗಿದೆ. ಇದರಿಂದಾಗಿ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳುವುದು ಕಷ್ಟಕರವಾಗಿದೆ. 

ಈ ಸಂಬಂಧಿತ ದೂರುಗಳನ್ನು ಕಾರ್ಮಿಕರಿಗೆ ಸಚಿವರು ಮಲ್ಟಿವರ್ಸಲ್ ಅಡ್ವೈಸರಿ ಸಮಾಲೋಚನಾ ಸಂಸ್ಥೆ ಸಹ ಸಂಸ್ಥಾಪಕಿ ಹರಿಣಿ ರಾಘವನ್, Jhatkaa.org ಸ್ಥಾಪಿಸಿದ್ದಾರೆ. 

ಮನೆಕೆಲಸದವರಿಗೆ ಸಂಬಳವನ್ನು ಸರ್ಕಾರ ನಿಗದಿಪಡಿಸಬೇಕು ಅವರು ಕೂಡಾ ಕುಟುಂಬ ಹೊಂದಿದ್ದು, ಮನೆಗಳನ್ನು ನಡೆಸಬೇಕಾಗಿದೆ ಎಂದು Jhatkaa.org ಸಂಸ್ಥೆಯ ಕ್ಯಾಂಪನರ್ ಸಿ. ಮಂಜುಶ್ರೀ ಒತ್ತಾಯಿಸಿದ್ದಾರೆ. 

ಮನೆಕೆಲಸದವರು ಮತ್ತೆ ಕೆಲಸ ಆರಂಭಿಸಲು ಸರ್ಕಾರದಿಂದ ಯಾವುದೇ ತೊಂದರೆ ಇಲ್ಲ ಆದರೆ, ಅಂತಿಮವಾಗಿ ಇದು ನಿವಾಸಿಗಳ ಅಸೊಸಿಯೇಷನ್ ಹಾಗೂ ಕೆಲಸಗಾರರ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್ ಹೇಳಿದ್ದಾರೆ.

SCROLL FOR NEXT