ಸಂಗ್ರಹ ಚಿತ್ರ 
ರಾಜ್ಯ

ಮೆಜೆಸ್ಟಿಕ್ ನಲ್ಲಿ ಬಸ್ಸು ಡಿಕ್ಕಿ; ವ್ಯಕ್ತಿ ಸಾವು

ನಗರದ ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಫ್ಲಾಟ್ ಫಾರಂ ನಂಬರ್ 15ರಲ್ಲಿ ಸಂಭವಿಸಿದೆ.

ಬೆಂಗಳೂರು: ನಗರದ ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ವ್ಯಕ್ತಿ ಮೃತಪಟ್ಟಿರುವ ಘಟನೆ ಫ್ಲಾಟ್ ಫಾರಂ ನಂಬರ್ 15ರಲ್ಲಿ ಸಂಭವಿಸಿದೆ.

ಕೊಪ್ಪಳ ಘಟಕ ಬಸ್ಸು ಇದಾಗಿದ್ದು, ಲಾಕ್‍ಡೌನ್ ಸಡಿಲಿಕೆಯಾದ ಪರಿಣಾಮ ಸಾವಿರಾರು ಜನರು ಮೆಜೆಸ್ಟಿಕ್ ಬಸ್ಸು ನಿಲ್ದಾಣದಲ್ಲಿ ಸೇರಿಕೊಂಡಿದ್ದರು. ಹೀಗಾಗಿ ಜನದಟ್ಟಣೆಯಾದ ಪರಿಣಾಮ ಬಸ್ಸು ನಿಲ್ದಾಣದಲ್ಲಿ ಹೊರಡುತ್ತಿದ್ದಾಗ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಡಿಕ್ಕಿಯ ರಭಸಕ್ಕೆ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಪರಾರಿಯಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಅವರ ಗುರುತು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಸ್ರೇಲ್ ನಿಂದ ಇರಾನ್ ಗುಪ್ತಚರ ಇಲಾಖೆ ಮುಖ್ಯಸ್ಥರ ಹತ್ಯೆ?; ಇದರಿಂದೆಲ್ಲಾ ನಾಯಕತ್ವಕ್ಕೆ ಮಾರಕ ಹೊಡೆತ ಬೀಳಲ್ಲ- ಇರಾನ್

ಲೋಕಸಭೆಯಲ್ಲಿ ಪ್ರತಿಧ್ವನಿಸಿದ ‘KD’ ಸಿನಿಮಾದ ಅಶ್ಲೀಲ ಹಾಡು; ‘ಸರ್ಸೆ ನಿನ್ನ ಸೆರಗ ಸರ್ಸೆ’ ಬ್ಯಾನ್!

ಉಪ ಚುನಾವಣೆ 2026: ಸಿದ್ದರಾಮಯ್ಯ ಸಂಧಾನ ಯಶಸ್ವಿ, ಬಾಗಲಕೋಟೆ ಕಾಂಗ್ರೆಸ್ ಕದನಕ್ಕೆ ಕೊನೆಗೂ ತೆರೆ!

'ಮಾರ್ಚ್ 25ರೊಳಗೆ ಬಾಕಿ ಇರುವ ಎಲ್ಲಾ ಉತ್ತರಗಳ ಸಲ್ಲಿಸಿ': ಸರ್ಕಾರಕ್ಕೆ ಪರಿಷತ್ ಸಭಾಪತಿ ಹೊರಟ್ಟಿ ಗಡುವು!

'ನನ್ನ ಘನತೆಗೆ ಧಕ್ಕೆ, ಪ್ರಚಾರಕ್ಕೆ ಬರಲ್ಲ..' 'ನಿರ್ದೇಶಕ ಪ್ರೇಮ್ ಗೆ ಮೊದಲೇ ಎಚ್ಚರಿಕೆ ನೀಡಿದ್ದೆ..': ಬಾಲಿವುಡ್ ನಟಿ Nora Fatehi ಶಾಕಿಂಗ್ ಹೇಳಿಕೆ

SCROLL FOR NEXT