ಸಿಸಿ ಪಾಟೀಲ್ 
ರಾಜ್ಯ

ಕೊರೋನಾ: ನೆಮ್ಮದಿಯಲ್ಲಿ ಜವಾಬ್ದಾರಿಯಿಂದ ನುಣುಚಿಕೊಳ್ಳದಿರಿ - ಸಿಸಿ ಪಾಟೀಲ್

ಗದಗ ಜಿಲ್ಲೆಯ ಚಿಕಿತ್ಸೆಯಲ್ಲಿದ್ದ ಕೊವಿಡ್-19 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನಮಗೆಲ್ಲ  ಒಂದು ಹಂತದ ನೆಮ್ಮದಿ ನೀಡಿದೆ.

ಗದಗ: ಗದಗ ಜಿಲ್ಲೆಯ ಚಿಕಿತ್ಸೆಯಲ್ಲಿದ್ದ ಕೊವಿಡ್-19 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನಮಗೆಲ್ಲ  ಒಂದು ಹಂತದ ನೆಮ್ಮದಿ ನೀಡಿದೆ.

ಆದರೆ ಕೊವಿಡ್-19 ಸೋಂಕು ತಡೆ ಕುರಿತ ಜಿಲ್ಲೆಯ  ಸಾರ್ವಜನಿಕರು, ಯುವಜನರ ಮತ್ತು ಅಧಿಕಾರಿ ಸಿಬ್ಬಂದಿಯಾದಿಯಾಗಿ ಸರ್ವರೂ ಹೆಚ್ಚಿನ  ಜವಾಬ್ದಾರಿಯಿಂದ ಜೀವನವನ್ನು ನಡೆಸಬೇಕಾದ ಕುರಿತು ರಾಜ್ಯದ ಗಣಿ ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಎಚ್ಚರಿಕೆಯ ಮನವಿ ಮಾಡಿದ್ದಾರೆ.

ಕೊವಿಡ್-19 ಸೋಂಕಿನ  ತಡೆ ಮತ್ತು ನಿಯಂತ್ರಣ ಕುರಿತು ಎಲ್ಲರೂ  ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಅನವಶ್ಯಕ ಓಡಾಟ, ಪ್ರಯಾಣ ನಿಲ್ಲಿಸುವ, ಮುಖಕ್ಕೆ ಮಾಸ್ಕ, ಸ್ಯಾನಿಟೈಜರ್ ಉಪಯೋಗ, ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವದು ನಮ್ಮ ನಿತ್ಯದ  ಅಭ್ಯಾಸವಾಗಬೇಕು. ಎಲ್ಲರೂ ಈ ಮುಂಜಾಗ್ರತಾ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿದಲ್ಲಿ ಮಾತ್ರ ಕೊವಿಡ್-19 ಸೋಂಕನ್ನು ಯಶಸ್ವಿಯಾಗಿ ತಡೆಗಟ್ಟಬಹುದು.

ಕೊವಿಡ್-19  ಈಗ ದೇಶದ ಸರ್ಕಾರದ ಸಮಸ್ಯೆ ಮಾತ್ರವಲ್ಲ ಪ್ರತಿ ವ್ಯಕ್ತಿ, ಕುಟುಂಬ, ಸಮಾಜಗಳ ಅಳಿವು ಉಳಿವಿನ ಪ್ರಶ್ನೆ ಎಂಬುದನ್ನು ನಾವು ಅರಿತುಕೊಂಡು ತಪ್ಪದೇ ವೈಯಕ್ತಿಕ, ಸಾಮಾಜಿಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ಸಚಿವ ಸಿ.ಸಿ.ಪಾಟೀಲ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT