ಬೆಂಗಳೂರು: ಕೆಲ ಮಾಹಿತಿಗಳ ಕೊರತೆಯಿಂದ ರೈಲಿನ ಮೂಲಕ ಬೆಂಗಳೂರಿಗೆ ಆಗಮಿಸಿದ ಕೆಲವರು ಕ್ವಾರಂಟೈನ್ ಗೆ ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅದನ್ನು ಸರಿಪಡಿಸಲಾಗುವುದು ಎಂದರು.
ಕೋವಿಡ್-19 ಕುರಿತ ಡಿಜಿಟಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಿಂದ ಆಗಮಿಸಿದ ವಲಸಿಗರಿಗೆ ಅಲ್ಲಿನ ರೈಲ್ವೆ ನಿಲ್ದಾಣದಲ್ಲೇ ಸಾಂಸ್ಥಿಕ ಕ್ವಾರಂಟೈನ್ ಕುರಿತು ಘೋಷಿಸಲಾಗಿದೆ. ಇದನ್ನು ಅರಿತ ಕೆಲವರು ಟಿಕೆಟ್ ಗಳನ್ನು ರದ್ದುಗೊಳಿಸಿದರು. ಆ ಜಾಗದಲ್ಲಿ ಕಾಯ್ದಿರಿಸಿದ ಟಿಕೆಟ್ ನಲ್ಲಿದ್ದವರು ಆಗಮಿಸಿದ್ದಾರೆ. ಇವರಿಗೆ ಕ್ವಾರಂಟೈನ್ ಕುರಿತು ಮಾಹಿತಿ ಇರಲಿಲ್ಲ ಎಂದರು.
ಇದರ ಪರಿಣಾಮವಾಗಿ ಕೆಲ ಗೊಂದಲಗಳು ನಿರ್ಮಾಣವಾಗಿವೆ. ಅವರ ಮನವೊಲಿಸಲು ಯತ್ನಿಸಿದ್ದೇವೆ. ಕೆಲವರು ಒಪ್ಪಿದ್ದಾರೆ. ಆದರೆ, ಕೆಲವರು ಹಿಂದಿರುಗಲು ಬಯಸುತ್ತಿದ್ದಾರೆ. ಅವರಿಗೆ ರೈಲಿನ ವಿಶೇಷ ಬೋಗಿ ವ್ಯವಸ್ಥೆ ಮಾಡಲಾಗಿದೆ ಎಂದರು. ಇನ್ನು ಮುಂದೆ ಈ ಕ್ವಾರಂಟೈನ್ ಕುರಿತು ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು. ಎಸ್ ಎಂಎಸ್ ಮೂಲಕ ಸಂದೇಶ ಕಳಿಸುವ ವ್ಯವಸ್ಥೆಯನ್ನು ಬಲಗೊಳಿಸಲಾಗುವುದು ಎಂದು ಭರವಸೆ ನೀಡಿದರು.