ಸಾಂದರ್ಭಿಕ ಚಿತ್ರ 
ರಾಜ್ಯ

ಸತ್ತವರನ್ನೂ ನೆಮ್ಮದಿಯಾಗಿ ಬಿಡದ ಕೊರೋನಾ: ಶವದ ಮುಖ ನೋಡಲಾಗದೇ ಸಂಬಂಧಿಕರ ರೋಧನೆ

ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ತಂದಿಟ್ಟಿರುವ ಸಂಕಟಗಳು ಒಂದಲ್ಲ, ಎರಡಲ್ಲ, ಅನೇಕ ರೀತಿಯಲ್ಲಿ ಜನರು ತೊಂದರೆಗೊಳುಪಡುತ್ತಿದ್ದಾರೆ.ಕೇವಲ ಬದುಕಿರುವವರು ಮಾತ್ರವಲ್ಲ, ಸತ್ತವರನ್ನು ಕೊರೋನಾ ಕಾಡುತ್ತಿದೆ

ಬೆಂಗಳೂರು: ಜಗತ್ತಿನಾದ್ಯಂತ ಮಹಾಮಾರಿ ಕೊರೋನಾ ತಂದಿಟ್ಟಿರುವ ಸಂಕಟಗಳು ಒಂದಲ್ಲ, ಎರಡಲ್ಲ, ಅನೇಕ ರೀತಿಯಲ್ಲಿ ಜನರು ತೊಂದರೆಗೊಳುಪಡುತ್ತಿದ್ದಾರೆ.ಕೇವಲ ಬದುಕಿರುವವರು ಮಾತ್ರವಲ್ಲ, ಸತ್ತವರನ್ನು ಕೊರೋನಾ ಕಾಡುತ್ತಿದೆ.

ಅಸ್ವಾಭಾವಿಕವಾಗಿ ಸಾವನ್ನಪ್ಪಿದವರ ಕುಟುಂಬಸ್ಥರ ಪಾಡಂತು ಹೇಳತೀರದು, ಮರಣೋತ್ತರ ಪರೀಕ್ಷೆ ನಡೆದು ಶವ ಪಡೆಯಲು ಎರಡು ಮೂರು ದಿನ ಕಾಯಬೇಕಿದೆ.ಕೊರೋನಾ ಪರೀಕ್ಷೆ ನಡೆದು ಫಲಿತಾಂಶ ಬರುವವರೆಗೂ ಮರಣೋತ್ತರ ಪರೀಕ್ಷೆ ನಡೆಸುವಂತಿಲ್ಲ.

ರಸ್ತೆ ಅಪಘಾತ, ಆತ್ಮಹತ್ಯೆ, ಮತ್ತು ಕೊಲೆಗೀಡಾದ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ನಡೆಸಿ ಬೇಗ ಶವ ನೀಡುವಂತೆ ಒತ್ತಡ ಹೇರುತ್ತಾರೆ. ಪರಿಸ್ಥಿತಿ ಅರ್ಥಮಾಡಿಕೊಳ್ಳದ ಮೃತರ ಸಂಬಂಧಿಕರು ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದಾರೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

ಪರೀಕ್ಷೆ ಫಲಿತಾಂಶ ಬರುವವರೆಗೂ ಕಾಯುವಂತೆ ಸಂಬಂಧಿಕರ ಮನವೊಲಿಸುವಂತೆ ನಾವು ಪೊಲೀಸರಲ್ಲಿ ಮನವಿ ಮಾಡಿಕೊಳ್ಳಬೇಕಿದೆ ಎಂದು ಬೌರಿಂಗ್ ಆಸ್ಪತ್ರೆ ಮುಖ್ಯಸ್ಥ ಡಾ. ಸತೀಶ್ ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಕೊರೋನಾ ಫಲಿತಾಂಶ ಬರುವವರೆಗೂ ಶವಗಾರದ ಸಿಬ್ಬಂದಿಯನ್ನು ಶವದ ಜೊತೆ ಸಂಪರ್ಕಕ್ಕೆ ಬಿಡುವುದಿಲ್ಲ, ಕೆಲ ಪ್ರಕರಣಗಳಲ್ಲಿ ನಮಗೆ 2-3 ದಿನಗಳಲ್ಲಿ ವರದಿ ಬರುತ್ತದೆ, ಇಲ್ಲ ಅದೇ ದಿನ ಸಿಗುತ್ತದೆ. ಕಳೆದ ಕೆಲವು ದಿನಗಳಲ್ಲಿ ಕೊಲೆ, ಆತ್ಮಹತ್ಯೆ ಮತ್ತು ಅಪಘಾತ ಪ್ರಕರಣಗಳು ಹೆಚ್ಚಾಗಿ ಹೆಚ್ಚಿನ ಶವಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಮೃತರ ಸಂಬಂಧಿಕರು ಶವದ ಮುಖ ನೋಡಲು ಬಯಸುತ್ತಾರೆ. ಆದರೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ನಾವು  ಯಾರಿಗೂ ಅವಕಾಶ ನೀಡುವಂತಿಲ್ಲ, ಸರ್ಕಾರದ ಮಾರ್ಗಸೂಚಿ ಅನುಸಾರ ನಾವು ಶವಗಳನ್ನು ಸುಡಲು ಅವರ ಸಂಬಂಧಿಕರಿಗೆ ಹಸ್ತಾಂತರಿಸುವಂತಿಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ನಮ್ಮ ಸಿಬ್ಬಂದಿಯೊಬ್ಬರು ಕೊರೋನಾ ಶಂಕಿತ ರೋಗಿ ಶವ ತೆಗೆದುಕೊಂಡ ನಂತರ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಆಧರೆ ಪಲಿತಾಂಶ ನೆಗೆಟಿವ್ ಬಂದಿದೆ ಎಂದು
ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT