21 ದಿನಗಳ ಬದಲು 11 ದಿನಕ್ಕೆ ಡಬಲ್ ಆದ ಸೋಂಕಿತರ ಸಂಖ್ಯೆ, ರಾಜ್ಯಕ್ಕೆ ಹೊರಗಿನಿಂದ ಬಂದವರಲ್ಲೇ ಹೆಚ್ಚು ಸೋಂಕು ಪತ್ತೆ!
ಈ ಮೊದಲು 21 ದಿನಗಳಿಗೆ ದುಪ್ಪಟ್ಟಾಗುತ್ತಿದ್ದ ಸೋಂಕಿತ ಪ್ರಕರಣಗಲು, ಇದೀಗ 11 ದಿನಕ್ಕೇ ದ್ವಿಗುಣಗೊಲ್ಲುತ್ತಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಬೆಂಗಳೂರು: ಈ ಮೊದಲು 21 ದಿನಗಳಿಗೆ ದುಪ್ಪಟ್ಟಾಗುತ್ತಿದ್ದ ಸೋಂಕಿತ ಪ್ರಕರಣಗಲು, ಇದೀಗ 11 ದಿನಕ್ಕೇ ದ್ವಿಗುಣಗೊಲ್ಲುತ್ತಿದ್ದು, ರಾಜ್ಯದಲ್ಲಿ ಕೊರೋನಾ ವೈರಸ್ ಕುರಿತ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ದುಪ್ಪಟ್ಟು ಅವಧಿ ಈ ಪರಿ ಕುಸಿಯಲು ಹೊರಗಿನಿಂದ ಬರುತ್ತಿರುವವರಲ್ಲಿ ಸೋಂಕು ಪ್ರಮಾಣ ಹೆಚ್ಚಾಗಿರುವುದೇ ಕಾರಣ ಎಂದು ಹೇಳಲಾಗುತ್ತಿದ್ದು, ಗುರುವಾರ ಒಂದೇ ದಿನ 143 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರಲ್ಲಿ ಹೊರ ರಾಜ್ಯ ಹಾಗೂ ವಿದೇಶಗಳಿಂದ ಬಂದ 121 ಮಂದಿ ಪ್ರಯಾಣಿಕರಲ್ಲಿಯೇ ಹೆಚ್ಚು ಸೋಂಕು ಪತ್ತೆಯಾಗಿರುವುದು ಕಂಡು ಬಂದಿದೆ.
ಮಹಾರಾಷ್ಟ್ರದಿಂದ ಬಂದ 96 ಮಂದಿ, ತಮಿಳುನಾಡು 6, ಜಾರ್ಖಾಂಡ್ 3, ತೆಲಂಗಾಣ 5, ರಾಜಸ್ಥಾನ 2, ಕೇರಳ 1 ಮತ್ತು ಯುಎಇಯಿಂದ ಬಂದ 7 ಮಂದಿ ಪ್ರಜೆಗಳಲ್ಲಿ ವೈರಸ್ ದೃಢಪಟ್ಟಿದೆ. ಇದರ ಜೊತೆ ಜೊತೆಗೆ 43 ಅಪ್ರಾಪ್ತ ಮಕ್ಕಳಲ್ಲಿಯೂ ವೈರಸ್ ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರದಿಂದ ಹಾಸನ ಜಿಲ್ಲೆಗೆ ಬಂದಿದ್ದ 11 ಮಂದಿಯಲ್ಲಿ ವೈರಸ್ ದೃಢಪಟ್ಟಿದ್ದು, ಮುಂಬೈನಿಂದ ಬಳ್ಳಾರಿಗೆ ಬಂದಿದ್ದ 11 ಮಂದಿಯಲ್ಲೂ ವೈರಸ್ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.