ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಮುನ್ನೆಚ್ಚರಿಕೆಯೊಂದಿಗೆ ಮತ ಚಲಾಯಿಸುವಂತೆ ನಟಿ ಅಮೂಲ್ಯ ಅವರು ಮನವಿ ಮಾಡಿದ್ದಾರೆ.
ತಮ್ಮ ಪತಿಯೊಂದಿಗೆ ಆಗಮಿಸಿದ ನಟಿ ಅಮೂಲ್ಯ ಅವರು ರಾಜರಾಜೇಶ್ವರಿ ನಗರದಲ್ಲಿ ಮತ ಚಲಾಯಿಸಿದರು. ರಾಜರಾಜೇಶ್ವರಿ ನಗರದ ಬಿಇಟಿ ವಾರ್ಡ್ ನ ಮತಗಟ್ಟಗೆ ತಮ್ಮ ಪತಿಯೊಂದಿಗೆ ಆಗಮಿಸಿದ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ನಟಿ ಅಮೂಲ್ಯ, ಎಲ್ಲ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿ, ಅದರಲ್ಲೂ ವಿಶೇಷವಾಗಿ ಕೊರೋನ ಮುನ್ನೆಚ್ಚರಿಕೆಯೊಂದಿಗೆ ಮತದಾನ ಮಾಡಬೇಕು ಎಂದು ನಟಿ ಮನವಿ ಮಾಡಿದ್ದಾರೆ.
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬೆಳಿಗ್ಗೆ 7 ಗಂಟೆಯಿಂದಲ್ ಮತದಾನ ಆರಂಭವಾಗಿದ್ದು, ಎಲ್ಲಾ ಕಡೆ ಬಿಗಿ ಬಂದೋ ಬಸ್ತ್ ಮಾಡಲಾಗಿದೆ.